Saturday, April 27, 2024

ಎಂ ಎಲ್ ಸಿ ಗಳು ಸಿ.ಎಂ.ಮನೆ ಮುಂದೆ ಧರಣಿ ಮಾಡಲಿ : ಡಾ.ಆರ್.ಕುಬೇರಪ್ಪ

ಹಾವೇರಿ : ರಾಜ್ಯದಲ್ಲಿ ಮಾನ್ಯತೆ ನವೀಕರಣ ನೆಪದಲ್ಲಿ ಖಾಸಗಿ ಶಾಲೆಗಳನ್ನು ಮುಚ್ಚುವ ಹುನ್ನಾರ ಖಂಡಿಸಿ ಡಾ. ಆರ್‌.ಎಂ. ಕುಬೇರಪ್ಪ ಹಾವೇರಿ ನಗರದ ಪ್ರತಿಕಾ ಭವನದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸರ್ಕಾರವು ಕರ್ನಾಟಕ ಶಿಕ್ಷಣ ಕಾಯ್ದೆ – 1983 ರ ಅಡಿಯಲ್ಲಿ ರಾಜ್ಯದಲ್ಲಿನ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮಾನ್ಯತೆ ನವೀಕರಣ ಕರ್ನಾಟಕ ಅನುದಾನಿತ ಅನುದಾನರಹಿತ ಪಡೆಯುವುದನ್ನು ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳು ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಮಾನ್ಯತೆ ನವೀಕರಣ ಮಾಡಿಕೊಂಡು ಬರುತ್ತಿವೆ. ಆದರೆ ಇತ್ತೀಚೆಗೆ ಸರ್ಕಾರ ಆಗಸ್ಟ್ ತಿಂಗಳಲ್ಲಿ ಅತ್ಯಂತ ಅವೈಜ್ಞಾನಿಕ ಆದೇಶ ಹೊರಡಿಸಿ, ಖಾಸಗೀ ಶಾಲೆಗಳು ಮಾನ್ಯತೆ ನವೀಕರಣಗೊಳ್ಳದಂತಹ ಕೆಲವು ಷರತ್ತುಗಳನ್ನು ವಿಧಿಸಿರುವುದು, ಹಾಗೂ ಆಡಳಿತ ಮಂಡಳಿಗಳು ಅವುಗಳನ್ನು ಪೂರೈಸಲಾರದಂತಹ ಪರಿಸ್ಥಿತಿಯಲ್ಲಿದ್ದು ಇಡೀ ರಾಜ್ಯದ ಖಾಸಗೀ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ಬಂದು ನಿಂತಿವೆ, ಸರ್ಕಾರದ ಈ ಅಮಾನವೀಯ ಆದೇಶವನ್ನು ಕೆ.ಪಿ.ಸಿ.ಸಿ, ಶಿಕ್ಷಕರ ಹಾಗೂ ಪದವೀಧರ ಘಟಕದ ರಾಜ್ಯಾಧ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ಖಂಡಿಸಿದ್ದಾರೆ.

ಶಾಲೆಗಳ ಮಾನ್ಯತೆ ನವೀಕರಣಗೊಳ್ಳದಿದ್ದರೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂಡಿಸಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಈ ದೋಷಭರಿತ ಆದೇಶದ ಜಾರಿಗೆ ಸರ್ಕಾರವು ಮಾನ್ಯ ಸರ್ವೋಚ್ಚ ನಾಯಾಲಯದ ಆದೇಶ ಸಿವಿಲ್ 483/2004 ದಿನಾಂಕ : 13-04-2009 ರಲ್ಲಿ ನೀಡಿರುವ ತೀರ್ಪನ್ನು ತೇಪೆಹಾಕಿ, ಇದರನ್ವಯ, ಎಲ್ಲಾ ಶಾಲೆಗಳು ಕಡ್ಡಾಯವಾಗಿ ನ್ಯಾಷನಲ್ ಬಿಲ್ಡಿಂಗ್ ಕೋಡ್ ಮತ್ತು ಅಗ್ನಿ ಸುರಕ್ಷತೆ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಹಾಗೂ ಶಾಲೆಗಳ ಸ್ಥಿರನಿಧಿಯನ್ನು 01 ಲಕ್ಷದಿಂದ 10 ಲಕ್ಷದವರೆಗೆ ಹೆಚ್ಚು ಮಾಡಲಾಗಿದೆ.

ಸವೋಚ್ಚ ನ್ಯಾಯಾಲಯದ ಆದೇಶ 2009 ರಲ್ಲಿ ಮಾಡಿದ್ದು ಇಲ್ಲಿಯವರೆಗೆ, ಇದರ ಯಾವುದೇ ಷರತ್ತುಗಳಿಲ್ಲದೇ ಮಾನ್ಯತೆ ನವೀಕರಣ ಮಾಡಿಕೊಂಡುಬಂದಿದೆ. ಈಗ ಇದ್ದಕ್ಕಿದ್ದಂತೆ ಇಂತಹ ಒಂದು ಆದೇಶ ಹೊರಡಿಸಿ, ರಾಜ್ಯದ ಯಾವುದೇ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ನವೀಕರಣಗೊಳ್ಳದಂತಹ ಷರತ್ತುಗಳನ್ನು ವಿಧಿಸಿದ್ದು, ಖಾಸಗೀ ಆಡಳಿತ ಮಂಡಳಿಯ ಪರವಾಗಿ ಸರ್ಕಾರ / ಹಾಗೂ ಶಿಕ್ಷಣ ಇಲಾಖೆಯ ಈ ಕ್ರಮವನ್ನು ಖಂಡಿಸುತ್ತೇವೆ, ಮತ್ತು ತಕ್ಷಣ ಈ ಕಾನೂನು ಬಾಹಿರ ಆದೇಶವನ್ನು ರದ್ದುಗೊಳಿಸಲು ಆಗ್ರಹಿಸುತ್ತೇವೆ.

ಈ ಆದೇಶ ಜಾರಿಗೊಳಿಸಬೇಕಾದರೆ ಪ್ರತಿಯೊಂದು ಶಾಲಾ ಆಡಳಿತ ಮಂಡಳಿಯವರು, ಅಗ್ನಿನಂದನ ಅಳವಡಿಸುವುದು, ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ ಪಡೆಯುವುದು, ಮಣ್ಣು ಪರೀಕ್ಷೆ ಮಾಡಿಸುವುದು, ಕಟ್ಟಡದ ನಕ್ಷೆ ಮತ್ತು ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಪಡೆಯುವುದು, ಇದೆಲ್ಲದರ ಖಚ್ಚು – ವೆಚ್ಚ ಹತ್ತಾರು ಲಕ್ಷ ತಲುಪುತ್ತದೆ. ಇದು ವಾಸ್ತವಿಕವಾಗಿ ಯಾವ ಖಾಸಗೀ ಆಡಳಿತ ಮಂಡಳಿಗಳು ಭರಿಸಲು ಸಾಧ್ಯವಿಲ್ಲ 40-50 ವರ್ಷಗಳ ಹಿಂದೆ ಕಟ್ಟಿರುವ ಶಾಲಾ – ಕಾಲೇಜ್‌ಗಳ ಕಟ್ಟಡಗಳಿಗೆ ಈ ಸುರಕ್ಷತೆ ಪ್ರಮಾಣ ಪತ್ರ, ಕಟ್ಟಡದ ಭದ್ರತಾ ಪ್ರಮಾಣ ಪತ್ರ, ಮಣ್ಣು ಪರೀಕ್ಷೆ ಮಾಡಿಸಲು ಹೇಗೆ ಸಾಧ್ಯ? ಇದನ್ನು ಜಾರಿಗೆ ತಂದರೆ, ರಾಜ್ಯದ 90 % ಶಾಲೆಗಳನ್ನು ಶಾಶ್ವತವಾಗಿ ಮುಚ್ಚಬೇಕಾಗುತ್ತದೆ, ಆದ್ದರಿಂದ ಕಳೆದ 50 ವರ್ಷಗಳಿಂದ ಸಾರ್ವಜನಿಕರಿಗೆ ಎಲ್ಲ ವರ್ಗದ ಜನರಿಗೆ ವಿದ್ಯೆ ನೀಡುತ್ತಿರುವ ಖಾಸಗೀ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಶಾಲೆಗಿಂತ ಹೆಚ್ಚು ಗುಣಾತ್ಮರ ಶಿಕ್ಷಣ ನೀಡುತ್ತಾ ಬಂದಿವೆ. ಇವರ ಅನುಪಮ ಸೇವೆಯನ್ನು ಗುರ್ತಿಸಿ, ಸರ್ಕಾರ ಖಾಸಗೀ ಶಾಲಾ – ಕಾಲೇಜ್ ಆಡಳಿತ ಮಂಡಳಿಗಳಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಬೇಕೆಂದು ಡಾ. ಕುಬೇರಪ್ಪ ಆಗ್ರಹಿಸಿದ್ದಾರೆ. ಮತ್ತು ಶಾಲಾ ಕಾಲೇಜ್‌ಗಳಿಗೆ ಇಲ್ಲದ ಈ ನಿಬಂದನೆ ಕೇವಲ ಖಾಸಗೀಯವರಿಗೆ ಮಾತ್ರ ಆದೇಶ ಮಾಡಿ ಸರ್ಕಾರ ತಾರತಮ್ಯ ಮಾಡುತ್ತಿದೆ.

ಶಿಕ್ಷಣ ಇಲಾಖೆಯ ಈ ಆದೇಶವನ್ನು ಪ್ರತಿಭಟಿಸಿ ಜನವರಿ 6 ರಂದು ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಮುಚ್ಚಿ, ಶಿಕ್ಷಕರು ಮತ್ತು ಖಾಸಗೀ ಆಡಳಿತ ಮಂಡಳಿಗಳು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ಮಾಡಿ, ಈ ಆದೇಶ ರದ್ದುಪಡಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಡಾ. ಕುಬೇರಪ್ಪ ಘೋಷಣೆ ಮಾಡಿದ್ದಾರೆ.

ಖಾಸಗೀ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಕೆಗೂ ಆಗ್ರಹ :

ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಖಾಸಗೀ ಶಾಲಾ ಶಿಕ್ಷಕರ ಅನೇಕ ಬೇಡಿಕೆಗಳನ್ನು ಶಿಕ್ಷಕ ಪ್ರತಿನಿಧಿಗಳು ನಿರಂತರವಾಗಿ ಸ್ಥಾಪಿಸಿಕೊಂಡೇ ಬಂದಿದ್ದು, ಈಗ ಸರ್ಕಾರ ಮತ್ತು ಶಿಕ್ಷಕ ಪ್ರತಿನಿಧಿಗಳ ವಿರುದ್ಧ ಶಿಕ್ಷಕರು ತಿರುಗಿಬಿದಿದ್ದು, ಇಷ್ಟು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕಾಲ್ಪನಿಕ ವೇತನ ಬಡ್ತಿ ಶಿಕ್ಷಕರಿಗೆ ವೈದ್ಯಕೀಯ ಭತ್ಯೆ, ಹಬ್ಬದ ಮುಂಗಡ ಹಣ ನೀಡದಿರುವ ಬಗ್ಗೆ, ಹಾಗೂ 07 ವರ್ಷ ಪೂರೈಸಿದ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೊಳ್ಳಪಡಿಸುವುದು, ಹಳೆಯ ಪಿಂಚಣಿ ಯೋಜನೆಯನ್ನು ಮುಂದುವರೆಸುವುದು, ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವುದು.

ಅನುದಾನಿತ ಶಾಲೆ-ಕಾಲೇಜ್‌ಗಳಲ್ಲಿನ ಖಾಲಿ ಹುದ್ದೆ ತುಂಬಲಿಕ್ಕೆ ಅನುಮತಿ ನೀಡುವುದು, ಪದವಿ ಪೂರ್ವ ಕಾಲೇಜುಗಳಲ್ಲಿ ಗರಿಷ್ಠ ಕಾರ್ಯಭಾರ ರದ್ದು ಮಾಡಿ ಪ್ರತಿ-ವಿಷಯಕ್ಕೊಬ್ಬ ಉಪನ್ಯಾಸಕರ ನೇಮಕ ಮುಂತಾದ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸರ್ಕಾರಕ್ಕೆ ಮನವಿ ನೀಡಲಾಗುವುದು, ಆದ್ದರಿಂದ ಜನವರಿ 6 ನೇ ತಾರೀಯಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಹಾವೇರಿ ಜಿಲ್ಲಾಧಿಕಾರಿಗಳ ಕಛೇರಿಗೆ ಹಾಜರಿದ್ದು ಈ ಪ್ರತಿಭಟನೆ ಹಾಗೂ ಸರ್ಕಾರಕ್ಕೆ ಮನವಿ ನೀಡುವ ಕಾರ್ಯಕ್ರಮ ಯಶಸ್ವಿಗೊಳಿಸಲು ಡಾ. ಕುಬೇರಪ್ಪ ಕರೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES