ತಮಿಳುನಾಡು: ವಿಧಾನಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ಪ್ರಚಾರ, ಸಮಾವೇಶಗಳು ಭರದಿಂದ ಸಾಗಿದ್ದು, ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಹಲವು ಭರವಸೆಗಳನ್ನುಜನರ ಮುಂದಿಟ್ಟಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ವಿ.ಕೆ. ಸಿಂಗ್ ಅವರು ಚೆನ್ನೈನಲ್ಲಿನ ತಮ್ಮ ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಗಡ್ಕರಿ ಅವರು, ಈ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ. “ತಮಿಳುನಾಡಿನಲ್ಲಿ ಎನ್‌ಡಿಗೆ ಬಹುಮತ ಸಿಗುವ ಭರವಸೆಯಿದೆ. ತಮಿಳುನಾಡು ಅಭಿವೃದ್ಧಿ ಹೊಂದಿದ ರಾಜ್ಯವಾಗಿ ಬೆಳೆಯಲಿದೆ” ಎಂದು ಹೇಳಿದ್ದಾರೆ.
ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿರುವ ಪ್ರಮುಖ ಹತ್ತು ಭರವಸೆಗಳು
– 50 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಭರವಸೆ
– ರೈತರಿಗೆ ನೀಡುವಂತೆ ಮೀನುಗಾರರಿಗೂ ವಾರ್ಷಿಕ 6000 ರೂ ಆರ್ಥಿಕ ಸಹಾಯ
– ದಕ್ಷಿಣ ಭಾರತದಲ್ಲಿ ತಮಿಳುನಾಡನ್ನು ವ್ಯಾವಹಾರಿಕವಾಗಿ ನಂಬರ್ 1 ಮಾಡುವುದು
– ತಮಿಳುನಾಡಿನ ಪರಿಶಿಷ್ಟ ಜಾತಿ ಜನರಿಗೆ 12 ಲಕ್ಷ ಎಕರೆ ಪಂಚಮಿ ಭೂಮಿಯನ್ನು ಮರಳಿ ಕೊಡುವುದು
– ಅಣ್ಣಾಮಲೈಗೆ ಆಘಾತ: ನಾಮಪತ್ರ ತಡೆ ಹಿಡಿದ ಚುನಾವಣಾ ಆಯೋಗ
– ಹಿಂದೂ ದೇಗುಲಗಳ ಆಡಳಿತಕ್ಕೆ ಪ್ರತ್ಯೇಕ ಮಂಡಳಿ ರೂಪಿಸುವುದು
– 18-23ರ ವಯೋಮಾನದ ಯುವತಿಯರಿಗೆ ದ್ವಿಚಕ್ರವಾಹನದ ಪರವಾನಗಿಯನ್ನು ಉಚಿತವಾಗಿ ನೀಡುವುದು
– 8, 9ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ
– ಕೃಷಿಗೆ ಪ್ರತ್ಯೇಕ ಬಜೆಟ್
– ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ
– ಜಲ ಜೀವನ್ ಮಿಷನ್ ಅಡಿಯಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ.