ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಪ್ರತಿವಾರ ಟ್ರಾಫಿಕ್ ಪೊಲೀಸರ ಜೊತೆ ಬಿಬಿಎಂಪಿ ಸಭೆ ನಡೆಸಿದೆ.
ರಾಜಧಾನಿಯ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕೊಡ್ತೀವಿ ಅನ್ನೋ ಬಿಬಿಎಂಪಿ ಅಧಿಕಾರಿಗಳೇ ಇದೇನಿದು.? ಕೋಟಿ ಕೋಟಿ ವೆಚ್ಚದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸಿ ಕಂಡವರಿಗೆ ಧಾರೆ ಎರೆದಿದೆ. ಹೀಗಾಗಿ ನಗರದ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಪ್ರತಿವಾರ ಟ್ರಾಫಿಕ್ ಪೊಲೀಸರ ಜೊತೆ ಬಿಬಿಎಂಪಿ ಸಭೆ ನಡೆಸಿದೆ.
ಇನ್ನು, ಬಿಬಿಎಂಪಿ ಪಾರ್ಕಿಂಗ್ ಕಟ್ಟಡ ಖಾಸಗಿ ಕಾರ್ ಶೋ ರೂಮ್ ಗೆ ಸೇಲ್ ಮಾಡಿತೇ ಬಿಬಿಎಂಪಿ.! ಜೆಸಿ ರಸ್ತೆಯ ಬಿಬಿಎಂಪಿ ಮಲ್ಟಿ ಲೆವಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಿದೆ. ಆದರೆ, ಗ್ರೌಂಡ್ ಫ್ಲೋರ್ ಹಾಗೂ ಮೊದಲ ಮಹಡಿಯಲ್ಲಿ ಮಾತ್ರ ಪೇ & ಪಾರ್ಕಿಂಗ್ ವ್ಯವಸ್ಥೆ ನೀಡಲಾಗಿದ್ದು, ಉಳಿದಂತೆ 2 ಮತ್ತು 3ನೇ ಮಹಡಿ ಪಾರ್ಕಿಂಗ್ ಬದಲು ಖಾಸಗಿ ಕಾರ್ ಕಂಪೆನಿಗೆ ಸರ್ವೀಸ್ ಸೆಂಟರ್ಗೆ ನೀಡಿದೆ.
ಈಗಾಗಲೇ ಖಾಸಗಿ ಕಾರ್ ಕಂಪೆನಿಯ ಸರ್ವೀಸ್ ಸೆಂಟರ್ ಕೆಲಸ ಬಹುತೇಕ ಮುಕ್ತಾಯಗೊಂಡಿದ್ದು, ಬಿಬಿಎಂಪಿ ಪಾರ್ಕಿಂಗ್ ಜಾಗದಲ್ಲಿ ಗೇಟ್ ಹಾಕಿ ಲಾಕ್ ಮಾಡಿ ಸರ್ವೀಸ್ ಸೆಂಟರ್ ಓಪನ್ ಮಾಡಲು ಸಿದ್ಧತೆ ನಡೆಸಿದ್ದು, ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನ ಕೇಳಿದ್ರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಾರೆ.
ಇನ್ನು, ಪಾಲಿಕೆ ಜಾಗವನ್ನು ಬೇಕಾಬಿಟ್ಟಿ ಖಾಸಗಿ ಕಂಪೆನಿಗಳಿಗೆ ಧಾರೆ ಎರೆಯುತ್ತಿರುವ ಬಿಬಿಎಂಪಿ ಅಧಿಕಾರಿಗಳು. ಅತ್ಯಂತ ಕಡಿಮೆ ಮೊತ್ತಕ್ಕೆ ಪಾರ್ಕಿಂಗ್ ಜಾಗ ಗುತ್ತಿಗೆ ಕೊಟ್ಟು ಬಾಡಿಗೆ ಪಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.