ಮೈಸೂರು : ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಗೆ ರೋಲ್ ಕಾಲ್ ಗಿರಾಕಿ ಎಂದು ಹಿಯ್ಯಾಳಿಸಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ದ ಇಂದು ಲಕ್ಷ್ಮಣ್ ವಾಗ್ಧಾಳಿ ನಡೆಸಿದ್ದಾರೆ. ಸಂಸದ ಪ್ರತಾಪ್ ಸಿಂಹ ನನ್ನ ವೈಯಕ್ತಿಕ ವಿಚಾರ ಮಾತನಾಡಿದ್ದಾರೆ. ನಾನೊಬ್ಬ ರೋಲ್ ಕಾಲ್ ಗಿರಾಕಿ ಬ್ಲಾಕ್ ಮೇಲರ್ ಅಂದಿದ್ದಾರೆ. ಇದಕ್ಕಾಗಿ ನಾನು ಪ್ರತಾಪ್‌ಸಿಂಹಗೆ ಚಾಲೆಂಜ್ ಮಾಡುತ್ತಿದ್ದೇನೆ. ಕಲಾಮಂದಿರದಲ್ಲಿ ಒಂದು ಚರ್ಚೆ ಮಾಡೋಣ.
ನಿಮ್ಮ ಮೇಲೆ ನಾನು ಮಾಡುವ ಆರೋಪ ರುಜುವಾತು ಮಾಡುತ್ತೇನೆ. ರುಜುವಾತು ಮಾಡದಿದ್ದರೆ ಕಲಾ ಮಂದಿರದ ಮುಂದೆ ನೇಣು ಹಾಕಿಕೊಳ್ಳುತ್ತೇನೆ. ನೀವು ಮಾಡಿದ ಆರೋಪವನ್ನ ಸಾಬೀತು ಪಡಿಸಿದರೆ ನೀವು ಆತ್ಮಹತ್ಯೆ ಮಾಡಿಕೊಳ್ಳಬೇಡಿ ನಿನ್ನ ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಡಿ ಎಂದು ಪಂಥಾಹ್ವಾನ ನೀಡಿದರು. ನಾನು 30 ವರ್ಷದಿಂದ ಹೋರಾಟ ಮಾಡುತ್ತಿದ್ದೇನೆ. ಒಬ್ಬರಿಗೆ ಬ್ಲಾಕ್‌ಮೇಲ್ ಮಾಡಿದ್ದರೆ ಪ್ರೂವ್ ಮಾಡಿ. ಪ್ರತಾಪ್‌ಸಿಂಹ ಸಂಸದ ಆಗಲು ಅನ್‌ಫಿಟ್. ಪ್ರತಾಪ್‌ಸಿಂಹ ಬ್ಲೂ ಫಿಲಂ ಹೀರೋ ಆಗಲು ಲಾಯಕ್ ಆಗಿದ್ದಾರೆ ಎಂದು ಕಿಡಿಕಾರಿದರು. ಕಳೆದ ಲೋಕಸಭೆ ಚುನಾವಣೆಯ ವೇಳೆ ಆಡಿಯೋ ಬಿಡುಗಡೆಯಾಗಿತ್ತು. ಅದನ್ನು ಹೊರತುಪಡಿಸಿ ನಾಲ್ಕು ಆಡಿಯೋ ನನ್ನ ಬಳಿ ಇದೆ. ಅದನ್ನು ನಾನು ಕಲಾಮಂದಿರದಲ್ಲಿ ಬಿಡುಗಡೆ ಮಾಡುತ್ತೇನೆ. ಅದನ್ನು ಯಾರಿಂದ ಬೇಕಾದರೂ ತನಿಖೆ ಮಾಡಿಸಿ ಎಂದು ಸವಾಲೆಸೆದರು. ಸಂಸದ ಪ್ರತಾಪ್ ಸಿಂಹ ಕಚ್ಚೆಹರುಕ ಬಾಯಿಹರುಕ. ಪ್ರತಾಪ್ ಸಿಂಹ ವರ್ಗಾವಣೆ ದಂಧೆ ದಾಖಲೆಗಳು ನನ್ನ ಬಳಿ ಇದೆ. ಬನ್ನಿ ಕಲಾಮಂದಿರಕ್ಕೆ ಅಥವಾ ಎಲ್ಲಾದರೂ ಬನ್ನಿ. ಹೇಡಿಯಂತೆ ಓಡಿ ಹೋಗಬೇಡಿ ಎಂದು ಚಾಲೆಂಜ್ ಮಾಡಿದ್ದಾರೆ. ಲಕ್ಷ್ಮಣ್ ರವರ ಪಂಥಾಹ್ವಾನವನ್ನ ಪ್ರತಾಪ್ ಸಿಂಹ ಹೇಗೆ ಸ್ವೀಕಾರ ಮಾಡ್ತಾರೆ ಕಾದು ನೋಡಬೇಕಿದೆ…
https://youtu.be/lCFi1T4swYg