ವಿಜಯಪುರ: ಜಿಲ್ಲೆಯಲ್ಲಿ ಎಟಿಎಂಗಳು ಸುರಕ್ಷಿತವಾಗಿಲ್ಲ ಎಂಬ ಇಂತಹದ್ದೊಂದು ಅನುಮಾನ ಮೂಡಲು ಕಳೆದ ನಾಲ್ಕೈದು ದಿನಗಳಿಂದ ನಡೆದಿರೋ ಎರಡು ಪ್ರಕರಣಗಳೇ ಸಾಕ್ಷಿಯಾಗಿವೆ. ಇಲ್ಲಿನ ಬಹುತೇಕ ಎಟಿಎಂ ಗಳಲ್ಲಿ ಆಯಾ ಬ್ಯಾಂಕ್ ಗಳಾಗಲಿ, ಅಥವಾ ಸೆಕ್ಯೂರಿಟಿ ಎಜೆನ್ಸಿಗಳಾಗಲಿ ಎಟಿಎಂ ಗೆ ನೀಡಬೇಕಾ ಕನಿಷ್ಟ ಬದ್ರತಾ ಕ್ರಮಗಳನ್ನೂ ಕೈಗೊಂಡಿಲ್ವಾ ಅನ್ನೊ ಪ್ರಶ್ನೆ ಎದುರಾಗಿದೆ. ಈ ಹಿನ್ನಲೆಯಲ್ಲಿ ದರೋಡೆಕೋರರು ಎಟಿಎಮ್ ಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಎಟಿಎಂ ಗಳು ಸುರಕ್ಷಿತವಾಗಿಲ್ಲ, ಹಾಗಂತ ನಾವೇನು ಸುಮ್ಮನೇ ಹೇಳ್ತಿಲ್ಲ. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಡೆದ ಎರಡು ಪ್ರಕರಣಗಳೇ ಇದಕ್ಕೆ ಸಾಕ್ಷಿಯಾಗಿವೆ. ಆಗಷ್ಟ್ 25 ರಂದು ಜಿಲ್ಲೆಯ ಸಿಂದಗಿ ಪಟ್ಟಣದ ಐಸಿಐಸಿಐ ಬ್ಯಾಂಕ್ ಎಟಿಎಂ ದರೋಡೆ ಮಾಡಲು ಬಂದಿದ್ದ ಆಗಂತುಕರು, ಅಲ್ಕಿ ಕಾವಲಿಗಿದ್ದ ಸೆಕ್ಯೂರಿಟಿ ಗಾರ್ಡ್ ನನ್ನೇ ಬರ್ಬರವಾಗಿ ಹತ್ಯೆ ಮಾಡಿ ಹೋಗಿದ್ದರು. ಅದರಂತೆ ಅಗಷ್ಟ 26 ರಂದು ಮುದ್ದೆಬಿಹಾಳದ ಯೂನಿಯನ್ ಬ್ಯಾಂಕ್ ಎಟಿಎಂ ನ ದರೋಡೆಗೆ ವಿಫಲ ಯತ್ನ ನಡೆಸಿದ್ದರು. ಇದು ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.
ಇನ್ನು ಸಿಂದಗಿಯ ಎಟಿಎಂನಲ್ಲಿ ನಡೆದ ಭೀಕರ ಹತ್ಯೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಆದ್ರೆ ಇಂತಹ ಘಟನೆಗಳು ನಡೆದಾಗ ಪೊಲೀಸರ ತನಿಖೆಗೆ ಬೇಕಾದ ಸಿಸಿಟಿವಿಗಳೇ ಆ ಎಟಿಎಂ ನಲ್ಲಿ ವ್ಯವಸ್ಥಿತವಾಗಿರಲಿಲ್ಲ. ಅಂದ ಹಾಗೆ ಜಿಲ್ಲೆಯ ಬಹುತೇಕ ಎಟಿಎಂಗಳಲ್ಲಿ ಸಿಸಿಟಿವಿಗಳು ನಾಮಕೆ ವಾಸ್ತೆ ಎನ್ನುವಂತಿವೆ. ಅದೆಷ್ಟೋ ಸಿಸಿಟಿವಿಗಳು ಜೀವಂತವಾಗಿಯೇ ಇಲ್ಲ. ಹೀಗಾಗಿ ದರೋಡೆಕೋರರಿಗೆ ಭಯವಿಲ್ಲದಂತಾಗಿದೆ. ಇನ್ನೂ ರಾತ್ರಿವೇಳೆಯೂ ತೆರೆದುಕೊಂಡೇ ಇರೋ ಎಟಿಎಂಗಳ ಕಾವಲಿಗಿರೋ ಸೆಕ್ಯೂರಿಟಿ ಗಾರ್ಡ್ಗಳಿಗೆ ಯಾವೊಂದೂ ರಕ್ಷಣೆಯೇ ಇಲ್ಲ. ಅವರ ಆತ್ಮ ರಕ್ಷಣೆಗಾಗಿ ಬೇಕಾದ ಯಾವೊಂದೂ ವಸ್ತುಗಳು ಅವರ ಬಳಿ ಇರಲ್ಲ. ಹೀಗಾಗಿ, ದರೋಡೆಕೋರರು ಬಂದ್ರೆ ಅವರಿಗೆ ಶರಣಾಗಬೇಕು ಇಲ್ಲ ಜೀವ ಕಳೆದುಕೊಳ್ಳಬೇಕು, ಬಿಟ್ರೆ ಬೇರೆ ದಾರಿಯೇ ಇಲ್ಲ.
ಜಿಲ್ಲೆಯ ಎಟಿಎಂಗಳ ಸುರಕ್ಷತೆಯ ಬಗ್ಗೆ, ಹಾಗೇ ಅಲ್ಲಿ ಕಾವಲಿಗಿರೋ ಸೆಕ್ಯೂರಿಟಿ ಗಾರ್ಡ್ ಗಳ ಬಗ್ಗೆ ಸಂಬಂಧ ಪಟ್ಟವರು ಜಾಗ್ರತಿ ವಹಿಸಬೇಕಿದೆ. ಇನ್ನೂ ವಿಜಯಪುರ ಜಿಲ್ಲೆಯಲ್ಲಿರೋ ಎಟಿಎಂಗಳಲ್ಲಿ ಭದ್ರತೆ ಇಲ್ಲದೇ ಇರೋ ಕಾರಣಕ್ಕೆ ದರೋಡೆಕೋರರಿಗೆ ರತ್ನಗಂಬಳಿ ಹಾಸಿ ಕಳ್ಳತನ ಮಾಡಿ ಅಂತಾ ಕರೆಯುವ ಸ್ಥಿತಿ ಇದೆ. ಆದ್ರೆ ಬಡಪಾಯಿ ಸೆಕ್ಯೂರಿಟಿಗಳ ಪ್ರಾಣಕ್ಕೆ ಕುತ್ತು ಬರಿತ್ತಿರೋದು ಮಾತ್ರ ದುರಂತವೆ ಸರಿ. ಈ ಕುರಿತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಇನ್ನಾದರೂ ಕ್ರಮಕೈಗೊಳ್ಳಬೇಕಿದೆ.
-ಸುನೀಲ್ ಭಾಸ್ಕರ