ಬಳ್ಳಾರಿ : ಕೊರೊನಾ ವಸೂಲಿ ದಂಧೆಯ ಬಗ್ಗೆ ಮಾತನಾಡಲು ಹೋಗಿ ಬಳ್ಳಾರಿಯ ಪ್ರಭಾವಿ ಸ್ವಾಮೀಜಿಯೊಬ್ಬರು ವಿವಾದಿತ ಹೇಳಿಕೆ ನೀಡಿದ್ದಾರೆ. ಯಾರೂ ಮಾಸ್ಕ್ ಹಾಕಬೇಡಿ ಮತ್ತು ಕೊರೊನಾ ಚೆಕಪ್ ಮಾಡಿಸಿಕೊಳ್ಳಬೇಡಿ ಅಂತ ಸ್ವಾಮಿಗಳು ಕರೆಕೊಟ್ಡಿದ್ದಾರೆ. ಜೊತೆಗೆ ನಾನು ನೂರು ಕೊರೊನಾ ರೋಗಿಗಳ ಮದ್ಯೆ ಇದ್ದು ಬರ್ತೇನೆ ನಂಗೆ ಏನೂ ಆಗಲ್ಲ, ನಾನು ಮಹಾರಾಷ್ಟ್ರ ಸುತ್ತಾಡಿ ನನಗೇನೂ ಆಗಿಲ್ಲ ಇದೊಂದು ಬೋಗಸ್ ದಂಧೆ ಅಂತ ವೈದ್ಯರಿಗೆ ಸವಾಲು ಹಾಕಿದ್ದಾರೆ.
ಕಲ್ಯಾಣಮಠದ ಕಲ್ಯಾಣ ಸ್ವಾಮೀಜಿಯ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾದವರು ಹೀಗೆ ಕೊರೊನಾ ರೋಗ ತಡೆಯಲು ಇರುವ ಮೂಲ ನಿಯಮಗಳನ್ನೇ ಪಾಲಿಸಬೇಡಿ ಅಂತ ಕರೆಕೊಟ್ಟಿರುವುದು ವಿವಾದಕ್ಕೆಡೆ ಮಾಡಿಕೊಟ್ಟಿದೆ.
ಖುದ್ದು ಸರ್ಕಾರವೇ ಒಂದು ವರ್ಷ ಮಾಸ್ಕ್ ಕಡ್ಡಾಯ ಮಾಡಿದೆ. ಅಲ್ಲದೇ ಸ್ವತಃ ಪ್ರಧಾನಿ ಮೋದಿ ಮಾಸ್ಕ್ ಇಲ್ಲದೆ ಹೊರಬರೊಲ್ಲ. ಇದರ ನಡುವೆ ಮಾಸ್ಕ್ ಮತ್ತು ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಬೇಕಾದವರೆ ಮಾಸ್ಕ್ ಹಾಕಬೇಡಿ,ಚೆಕಪ್ ಮಾಡಿಸಬೇಡಿ ಅಂತ ಕರೆಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಮಾಸ್ಕ್ ಹಾಕದೆ ಇರುವುದು ದಂಡ ಮತ್ತು ಶಿಕ್ಷೆಗೆ ಒಳಪಡುವ ಕಾನೂನಾಗಿದೆ ಅದರಲ್ಲಿ ಜನರಿಗೆ ಮಾಸ್ಕ್ ಹಾಕಬೇಡಿ, ಚೆಕಪ್ ಮಾಡಿಸಬೇಡಿ ಅಂತ ಕರೆಕೊಟ್ಟಿರುವುದು ಕೊರೊನಾ ನಿಯಮಗಳ ಸ್ಪಷ್ಡ ಉಲ್ಲಂಘನೆಯೇ ಆಗಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ