Tuesday, October 29, 2024

ಬೆಂಗಳೂರು ಗಲಭೆ ಉದ್ದೇಶಪೂರ್ವಕ : ಬಿ.ಸಿ ಪಾಟೀಲ್

ಹಾವೇರಿ :  ಬೆಂಗಳೂರಿನಲ್ಲಿ ಬೆಂಕಿ ಹಚ್ಚಿದವರು ದುಷ್ಕರ್ಮಿಗಳು, ಭಯೋತ್ಪಾಕದರು, ದೇಶದ್ರೋಹಿಗಳು, ಅದಕ್ಕೆ ರಾಜಕೀಯ ಪಕ್ಷದ ಹಿನ್ನೆಲೆ ಖಂಡಿತಾ ಇದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.

ಹಾವೇರಿ ಜಿಲ್ಲೆ ಹಿರೇಕೆರೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜೆ, ಕೆ.ಜಿ ಹಳ್ಳಿ ಗಲಭೆ ಪ್ರಕರಣ ರಾಜಕೀಯ ತಿರುವು ಪಡೆದಿದೆ. ಅದು ಉದ್ದೇಶಪೂರ್ವಕ, ಪೂರ್ವನಿಯೋಜಿತ ಕೃತ್ಯ. ರಾಜ್ಯ,ಕೇಂದ್ರ ಸರಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ನಡೆದ ಕೃತ್ಯವಾಗಿದೆ ಎಂದರು. 

ಮೋದಿ  ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನದ ಅಡಿಗಲ್ಲು ಹಾಕಿದರು. ಇದನ್ನು ಸಹಿಲಾರದ ದುಷ್ಟ ಶಕ್ತಿಗಳು. ಕರ್ನಾಟಕಕ್ಕೆ ಕೆಟ್ಟ ಹೆಸರು ತರಬೇಕು ಎಂದು ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ. ಯಾರನ್ನಾ ಇವರು ಅಮಾಯಕರು ಎಂದರು ಅವರೇ ಬೆಂಕಿ ಹಚ್ಚಿದ್ದಾರೆ‌. ಕಾಂಗ್ರೆಸ್ ಶಾಸಕನ ಮನೆಗೆ ಬೆಂಕಿ ಹಚ್ಚಿದರೂ ಅವರನ್ನು ಸಮರ್ಥನೆ ಮಾಡಿಕೊಳ್ಳಲು ಆಗ್ತಿಲ್ಲ. ಒಬ್ಬ ದಲಿತ ಶಾಸಕನಿಗೆ ಕಾಂಗ್ರೆಸ್ ನಲ್ಲಿ ರಕ್ಷಣೆ ಕೊಟ್ಟಿಲ್ಲ.  ಅವರ ಶಾಸಕರ ಮನೆಗೆ ಬೆಂಕಿ ಹಚ್ಚಿದವರನ್ನು ಅಮಾಯಕರು ಎನ್ನುತ್ತಾರೆ ಎಂದು ಹೇಳಿದರು. 

ಹಿಂದಿನ ಗೃಹ ಸಚಿವ ಕೆಜೆ ಜಾರ್ಜ್ ಅಲ್ಲಿ ಪಾದಯಾತ್ರೆ ಮಾಡ್ತಾರೆ. ಬೆಂಕಿ ಹಚ್ಚಿದವರ ಮನೆಗೆ ಭೇಟಿ ನೀಡ್ತಾರೆ. ಗಾಯಗೊಂಡು ಆಸ್ಪತ್ರೆಯಲ್ಲಿರೋ ಪೊಲೀಸ್ ರನ್ನು ಭೇಟಿ ಮಾಡುವುದಿಲ್ಲ . ಗಲಭೆಕೋರರನ್ನು ಯಾವುದೇ ಕಾರಣಕ್ಕೂ ಬಿಡಲು ಸಾಧ್ಯವಿಲ್ಲ . ಅವರಿಗೆ ಸರಿಯಾ ತಕ್ಕ ಶಾಸ್ತಿ  ಸರಕಾರ ಮಾಡುತ್ತದೆ ಎಂದು ಗುಡುಗಿದರು.

RELATED ARTICLES

Related Articles

TRENDING ARTICLES