Thursday, December 5, 2024

ನಟ ಸುದೀಪ್​ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿ ಭಾವನಾತ್ಮಕ ಪತ್ರ ಬರೆದ ಮೋದಿ

ದೆಹಲಿ : ಕಳೆದ ಭಾನುವಾರ (ಅ.20) ನಟ ಸುದೀಪ್​ ಅವರ ತಾಯಿ ಮರಣ ಹೊಂದಿದರು. ಅವರ ಮರಣಕ್ಕೆ ಇಡೀ ಕನ್ನಡ ಚಿತ್ರರಂಗ ಸೇರಿದಂತೆ, ಹೊರ ರಾಜ್ಯದ ನಟ, ನಟಿಯರು ಸೇರಿದಂತೆ ಆಂಧ್ರದ  ಉಪ ಮುಖ್ಯಮಂತ್ರಿ ಪವನ್​ ಕಲ್ಯಾಣ ಕೂಡ ಪತ್ರ ಬರೆದು ಸಂತಾಪ ಸೂಚಿಸಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿ ಪತ್ರ ಬರೆದಿದ್ದರು. ಇದೀಗ ಆ ಪತ್ರ ವೈರಲ್​ ಆಗಿದೆ

ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸುದೀಪ್​ಗೆ ಪತ್ರ ಬರೆದ ಮೋದಿ, ತಾಯಿಯ ಅಗಲಿಕೆ ತುಂಬಲಾರದ ನಷ್ಟ ಎಂದು ಬರೆದಿದ್ದಾರೆ. ಸುದೀಪ್ ಕೂಡ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

ಪತ್ರದ ಸಾರಾಂಶ

ಶ್ರೀ ಸುದೀಪ್ ಸಂಜೀವ್ ಅವರೇ, ನಿಮ್ಮ ತಾಯಿ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನದ ಸುದ್ದಿ ಕೇಳಿ ನನಗೆ ಆಳವಾದ ದುಃಖವಾಗಿದೆ. ತಾಯಿಯ ಅಗಲಿಕೆ ತುಂಬಲಾರದ ನಷ್ಟ.

“ಮಾತುಲಕಿ ಮಾರ್ದವಂ ಸಾಮ್ಯಶೂನ್ಯಮ್” ಎಂದು ಹೇಳಿದಂತೆ, ತಾಯಿಯ ಹೃದಯದ ಮೃದುತ್ವಕ್ಕೆ ಈ ಪ್ರಪಂಚದಲ್ಲಿ ಬೇರೆ ಸಾಟಿಯಿಲ್ಲ. ನಿಮ್ಮ ಭಾವನಾತ್ಮಕ ವೇದನೆ ಅವಳೊಂದಿಗೆ ಮುರಿಯಲಾಗದ ಬಂಧವನ್ನು ಪ್ರತಿಬಿಂಬಿಸುತ್ತದೆ ಇದೇ ವೇಳೆ ನಿಮ್ಮ ಮತ್ತು ಕುಟುಂಬದ ಮೇಲೆ ಅಕೆ ಬೀರಿದ ಪ್ರಭಾವವನ್ನು ಒತ್ತಿಹೇಳುತ್ತದೆ. ಅವಳು ನಿಮ್ಮ ನೆನಪುಗಳಲ್ಲಿ ಬದುಕುವುದನ್ನು ಮುಂದುವರಿಸುತ್ತಾಳೆ ಮತ್ತು ಅವಳಿಂದ ತುಂಬಿದ ಮೌಲ್ಯಗಳು ನಿಮಗೆ ಸ್ಫೂರ್ತಿ ನೀಡುತ್ತವೆ ಎಂದು ನನಗೆ ನಂಬಿಕೆ ಇದೆ.

ನಿಮ್ಮ ಜೀವನದಲ್ಲಿ ನಿಜವಾಗಿಯೂ ಅತ್ಯಂತ ಕಷ್ಟಕರವಾದ ಹಂತ ಯಾವುದು, ನಾನು ಬಲ್ಲೆ. ನನ್ನ ಆಳವಾದ ಸಂತಾಪ ಮತ್ತು ಸಹಾನುಭೂತಿ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಕುಟುಂಬ ಮತ್ತು ಹಿತೈಷಿಗಳೊಂದಿಗೆ ಇದೆ.ಈ ನಷ್ಟ, ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನಿಮಗೆ ದಯಪಾಲಿಸಲಿ, ಓಂ ಶಾಂತಿ! ಎಂದು ಪತ್ರದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.

ಇದಕ್ಕೆ ಧನ್ಯವಾದಗಳನ್ನು ಅರ್ಪಿಸಿರುವ ನಟ ಸುದೀಪ್​ ತಮ್ಮ ಎಕ್ಷ್ ಖಾತೆಯಲ್ಲಿಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರಿನರೇಂದ್ರ ಮೋದಿಜಿ… ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲ ಸೆಲೆಯನ್ನು ನೀಡಿದೆ.ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ.ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ. ಎಂದು ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES