Thursday, December 5, 2024

ಬೋರ್​​ವೇಲ್​​ ಕೇಬಲ್​ಗಳ ಮೇಲೆ ಕಳ್ಳರ ಕಣ್ಣು: ಎಚ್ಚರವಾಗಿರಿ ರೈತರೇ!

ದೇವನಹಳ್ಳಿ : ಒಂದೇ ರಾತ್ರಿ ಮೂರು ಗ್ರಾಮಗಳಲ್ಲಿ ಬೋರ್ ವೆಲ್ ಕೇಬಲ್ ಕಳ್ಳತನ ಮಾಡಿದ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಬೆನಕಿನ‌ಮಡಗು, ಸೂಲುಕುಂಟೆ, ಚನ್ನವೀರನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಸುಮಾರು 13 ರೈತರಿಗೆ ಸೇರಿದ್ದ ಕೇಬಲ್​ಗಳನ್ನು ಕಳ್ಳತನ ಮಾಡಿದ್ದು.ದೊಡ್ಡಮಂಗಲ ಪೋಲಿಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆನಕಿನಮಡಗು ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಇತ್ತೀಚೆಗೆ ಕಳವು ಪ್ರಕರಣಗಳು ಹೆಚ್ಚಾಗಿವೆ, ಮಧ್ಯರಾತ್ರಿ ಗ್ರಾಮಕ್ಕೆ ನುಗ್ಗುವ ಕಳ್ಳರು ರಸ್ತೆಯ ಪಕ್ಕದಲ್ಲಿರುವ ಜಮೀನುಗಳ ಬೋರ್​ವೇಲ್​ಗಳ ಕೇಬಲ್ ವೈರ್ ಮತ್ತು ಪ್ಯಾನಲ್ ಬೋರ್ಡ್ ಕಳ್ಳತನ ಮಾಡಿ ಹೋಗುತ್ತಿದ್ದಾರೆ.ಮುತ್ತುರಾಜು, ನಾರಾಯಣಸ್ವಾಮಿ. ಅಶೋಕ್, ವಿನಯ್ ಕುಮಾರ್ ಎಂಬುವವರಿಗೆ ಸೇರಿದ ಬೋರ್ ವೇಲ್ ಗಳ ಕೇಬಲ್ ಮತ್ತು ಪ್ಯಾನಲ್​ ಬೋರ್ಡ್​ಗಳು ಕಳುವಾಗಿದೆ

ದೊಡ್ಡಬೆಳವಂಗಲ ಪೊಲೀಸರು ಕಳ್ಳರನ್ನ ಪತ್ತೆ ಮಾಡಿ ಬಂಧಿಸುವ ಮೂಲಕ ರೈತರಿಗೆ ನೆರವಾಗಬೇಕೆಂದು ರೈತರು ಒತ್ತಾಯಿಸಿದ್ದು  ದೊಡ್ಡ ಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES