Monday, October 28, 2024

`ಪಬ್​​​ಜಿ ಬ್ಯಾನ್​​ ಮಾಡಿದ್ರೆ ಯುವಕರು ಉದ್ಯೋಗ ಕೇಳ್ತಾರಂತ ನಿಷೇಧಿಸಿಲ್ಲ’ : ಕೇಂದ್ರವನ್ನು ಕುಟುಕಿದ ಕಾಂಗ್ರೆಸ್

ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚೀನಾ ವಿರುದ್ಧ 2 ನೇ ಸುತ್ತಿನ ಡಿಜಿಟಲ್ ಸರ್ಜಿಕಲ್ ನಡೆಸಿದೆ. ಜೂನ್ 29ರಂದು 59  ಚೀನಿ ಅಪ್ಲಿಕೇಶನ್​ಗಳನ್ನು ಬ್ಯಾನ್ ಮಾಡಿದ್ದ ಸರ್ಕಾರ, ನಿನ್ನೆ (ಜುಲೈ 27) ಮತ್ತೆ 47 ಆ್ಯಪ್​ಗಳನ್ನು ಬ್ಯಾನ್​ ಮಾಡಿದೆ. ಪಬ್​ಜಿ ಸೇರಿದಂತೆ ಇನ್ನೂ 250 ಆ್ಯಪ್​ಗಳನ್ನು ಪರಿಶೀಲಿಸಲಾಗುತ್ತಿದೆ.

ಇನ್ನು ಈ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕಾಂಗ್ರೆಸ್​ ಕೇಂದ್ರದ ಕಾಲೆಳೆದಿದೆ. ‘`ನಿಜಕ್ಕೂ  ಪ್ರಧಾನಿ ನರೇಂದ್ರ ಮೋದಿ ಪಬ್​ ಜಿ ಬ್ಯಾನ್ ಮಾಡುವ ಇರಾದೆ ಇತ್ತು. ಆದ್ರೆ  ಪಬ್​ಜಿ ಬ್ಯಾನ್​ ಮಾಡಿದ ನಂತರ ಯುವಕರಯ ಉದ್ಯೋಗ ಕೇಳುತ್ತಾರೆ ಅಂತ ಸುಮ್ಮನಾಗಿದ್ದಾರೆ’’ ಎಂದು ಕುಟುಕಿದೆ.

ಕಾಂಗ್ರೆಸ್​ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿ, ‘’ ಮೋದಿಜಿ ಪಬ್​ಜಿಯನ್ನು ನಿಷೇಧಿಸುತ್ತಿದ್ದರು. ಆದ್ರೆ, ವಿಸ್ಮಯ ಲೋಕದಲ್ಲಿ ಜೀವಿಸುತ್ತಿರೋ ಯುವಕರನ್ನು ಬಡಿದೆಬ್ಬಿಸಿದ್ರೆ ಅವರು ಅಗತ್ಯವಾಗಿ ಬೇಕಾಗಿರೋ ಉದ್ಯೋಗದಂತ ವಿಚಾರಗಳನ್ನು ಕೇಳಬಹುದು. ಇದು ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದೆಂಬ ಉದ್ದೇಶದಿಂದ ಪಬ್​ಜಿಯನ್ನು ಬ್ಯಾನ್ ಮಾಡಿಲ್ಲ’’  ಅಂತ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಟಿಕ್​ ಟಾಕ್ ಸೇರಿದಂತೆ ಇದುವರೆಗೆ 106 ಆ್ಯಪ್​​ಗಳನ್ನು ಬ್ಯಾನ್ ಮಾಡಿದೆ. ಆದ್ರೆ ಚೀನಾದ ಅತೀ ಹೆಚ್ಚು ಹೂಡಿಕೆ ಇರೋ ಪಬ್​​ಜಿಯನ್ನು ಬ್ಯಾನ್ ಮಾಡಿಲ್ಲ. ಇದು ಚರ್ಚೆಗೆ ಗ್ರಾಸವಾಗಿದೆ.

RELATED ARTICLES

Related Articles

TRENDING ARTICLES