ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ದೊರೆತಿದೆ. ಆರೋಪಿಗಾಗಿ 20 ತಂಡಗಳನ್ನು ರಚಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಕೇವಲ 24 ಗಂಡೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದಿಪುರಷ ಸಿನಿಮಾ ಖ್ಯಾತಿಯ ಸೈಫ್ ಅಲಿ ಖಾನ್ರ ಮೇಲೆ ಜನವರಿ 15ರ ತಡರಾತ್ರಿ 2 ಗಂಟೆ ವೇಳೆಗೆ ಚಾಕು ಇರಿತವಾಗಿದ್ದು, ದರೋಡೆಗೆ ಎಂದು ನಟನ ಮನೆಗೆ ನುಗ್ಗಿದ್ದ ಕಿಡಿಗೇಡಿಗಳಗೆ ಸೈಪ್ ಅಲಿಖಾನ್ ಪ್ರತಿರೋಧ ತೋರಿದ ಹಿನ್ನಲೆ ದುಷ್ಕರ್ಮಿಗಳು ನಟನಿಗೆ ಚಾಕು ಇರಿದಿದ್ದರು. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ನಟನನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ : ನಾನೇ ರಾಜ್ಯಧ್ಯಕ್ಷನಾಗಿ ಮುಂದುವರಿಯುತ್ತೇನೆ, ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ : ವಿಜಯೇಂದ್ರ !
ಇತ್ತ ನಟ ಸೈಫ್ ಅಲಿಖಾನ್ಗೆ ಚಾಕು ಇರಿದ ವಿಶಯ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದಲ್ಲದೆ, ಇದು ರಾಜಕೀಯ ಕೆಸರೆರಚಾಟಕ್ಕೂ ಕೂಡ ಕಾರಣವಾಗಿತ್ತು. ಆರೋಪಿಗಳನ್ನು ಬಂದಿಸಲೆಂದು ಮುಂಬೈ ಪೊಲೀಸರು ಸುಮಾರು 20 ತಂಡಗಳನ್ನು ರಚಿಸಿ ಬಲೆ ಬೀಸಿದ್ದರು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.
ಇದು ದರೋಡೆ ಮಾಡಲು ಈ ಕೃತ್ಯ ಎಸಗಿದ್ದ ಅಥವಾ ಕೊಲೆ ಮಾಡುವ ಹಿನ್ನಾರ ಇತ್ತಾ? ಎಂಬುದನ್ನು ತಿಳಿಯಲು ವಿವಿಧ ರೀತಿಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಬಂಧಿತನಾಗಿರುವ ಆರೋಪಿ ಈ ಹಿಂದೆ ಶಾರುಖ್ ಖಾನ್ ಮನೆ ಮುಂದೆ ಕೂಡ ಕಾಣಿಸಿಕೊಂಡಿರೋದು ಕೂಡ ಬೆಳಕಿಗೆ ಬಂದಿದೆ.