Wednesday, October 2, 2024

ಬಿಎಂಟಿಸಿ ಬಸ್​ನಲ್ಲಿ ರೌಡಿಯಂತೆ ವರ್ತಿಸಿದ ಕಂಡೆಕ್ಟರ್; ಪ್ರಯಾಣಿಕನ ಮೇಲೆ ಹಲ್ಲೆ.

ಬೆಂಗಳೂರು : ಬೆಂಗಳೂರಿನ ನರನಾಡಿಯಾಗಿರುವ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಕನ ಮೇಲೆ ಕಂಡೆಕ್ಟರ್ ಹಲ್ಲೆ ಮಾಡಿದ ಘಟನೆ ನಡೆದಿದ್ದು. ಟಿಕೆಟ್ ಮಿಶಿನ್​ನಿಂದ ಪ್ರಯಾಣಿಕನ ಮುಖಕ್ಕೆ ಗುದ್ದಲಾಗಿದೆ.

ಶಿವಾಜಿನಗರದಿಂದ ಎನ್.ಆರ್ ಕಾಲೋನಿ‌ ಕಡೆಗೆ ಹೋಗುವ ರೂಟ್ ನಂಬರ್ 32 ಬಸ್‌ನಲ್ಲಿ ನಡೆದಿರುವ ಘಟನೆಯಾಗಿದ್ದು. ಕಂಡೆಕ್ಟರ್ ರೌಡಿಯಂತೆ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದಾನೆ. ಸಹ ಪ್ರಯಾಣಿಕರು ಬಿಡಿಸಲು ಯತ್ನಿಸಿದರು ಬಿಡದೆ ಪ್ರಯಾಣಕನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಲಾಗಿದೆ.

ಹಲ್ಲೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಸಾರ್ವಜನಿಕರು ಬಿಎಂಟಿಸಿ ಕಂಡೆಕ್ಟರ್ ಮೇಲೆ ಅಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ್ರೆ ಜನರು ಬಿಎಂಟಿಸಿ ಬಸ್ ಹತ್ತುತ್ತಾರ..? ಎಂದು ಪ್ರಶ್ನಿಸುತ್ತಿದ್ದಾರೆ.

ಈ ರೀತಿಯ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬಿಎಂಟಿಸಿ ಎಂ.ಡಿ ರಾಮಚಂದ್ರನ್ ಈ ವಿಡಿಯೋ ನೋಡಿ, ನಿಮ್ಮ ಕಂಡೆಕ್ಟರ್​ಗಳು ರೌಡಿಯಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

RELATED ARTICLES

Related Articles

TRENDING ARTICLES