Friday, September 20, 2024

ವಿಪಕ್ಷ ನಾಯಕನಾಗಿ ರಾಹುಲ್​ ಗಾಂಧಿ ನಡೆ ಅಸಹ್ಯ; ತೇಜಸ್ವಿ ಸೂರ್ಯ

ಬೆಂಗಳೂರು: ಭಾರತದ ವಿರೋಧಿಗಳು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಗೆಳೆಯರು ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶಕ್ಕೆ ಹೋಗಿ ಮೀಸಲಾತಿ ತೆಗೆಯುತ್ತೇವೆ ಎನ್ನುತ್ತಾರೆ. ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಿ ನಡೆದುಕೊಂಡ ರೀತಿ ಅಸಹ್ಯ. ಈ ಆಶಾಢಭೂತಿತನ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಗಮನಿಸಿ: ತೂಕದಲ್ಲಿ ಮೋಸ; ಅಡಿಕೆ ವ್ಯಾಪಾರಿಗೆ ₹20 ಲಕ್ಷ ದಂಡ

ಮಾಜಿ ಪ್ರಧಾನಿ ಜವಾಹರಲಾಲ್​ ನೆಹರು ಕಾಲದಿಂದಲೂ ಕಾಂಗ್ರೆಸ್​​​​​ ಮೀಸಲಾತಿಯನ್ನು ವಿರೋಧ ಮಾಡಿಕೊಂಡು ಬರುತ್ತಿದೆ. ರಾಜೀವ್​ ಗಾಂಧಿ ಮಂಡಲ ಕಮಿಷನ್​​ಗೆ ವಿರೋಧ ವ್ಯಕ್ತಪಡಿಸಿದ್ದರು. ಓಬಿಸಿ, ಎಸ್ಸಿಎಸ್ಟಿಗಳಿಗೆ ಮೀಸಲಾತಿ ನೀಡಲು ರಾಜೀವ್​​​​​ ಗಾಂಧಿ ವಿರೋಧ ಮಾಡಿದ್ದರು.

ರಾಹುಲ್​​ ಗಾಂಧಿ ಅಮೆರಿಕದಲ್ಲಿ ಭೇಟಿ ಮಾಡಿದವರನ್ನು ನೋಡಿದರೆ ಆಶ್ಚರ್ಯ ಆಗುತ್ತದೆ. ಇಲ್ಹನ್​ ಉಮರ್​ ಭಾರತದ ವಿರುದ್ಧ ಇದ್ದಾರೆ. ಅವರನ್ನು ಯಾಕೆ ರಾಹುಲ್​ ಗಾಂಧಿ ಭೇಟಿ ಮಾಡಿದರು ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.

RELATED ARTICLES

Related Articles

TRENDING ARTICLES