Thursday, September 19, 2024

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಗೆ ತಾತ್ಕಾಲಿಕ ರಿಲೀಫ್ ನೀಡಿದ ಕೋರ್ಟ್​​

ಬೆಂಗಳೂರು: ಮುಖ್ಯಮಂತ್ರಿಗಳ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಆಗಸ್ಟ್​ 29ಕ್ಕೆ ಮುಂದೂಡಿದ್ದು ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಗವರ್ನರ್ ಶರವೇಗದಲ್ಲಿ ತನಿಖೆಗೆ ಅನುಮತಿ ಕೊಟ್ಟಿದ್ದಾರೆ:

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ವಿಚಾರಣೆ ಹೈಕೋರ್ಟ್‌ನಲ್ಲಿ ವಾದ ಪ್ರತಿವಾದ ನಡೀತು.

ಇದನ್ನೂ ಓದಿ: ನ್ಯಾಯಾಲಯದಲ್ಲಿ ಪರಿಹಾರ ಸಿಗುವ ಸಂಪೂರ್ಣ ವಿಶ್ವಾಸ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿಎಂ ಪರ ವಾದ ಮಂಡಿಸಿದ ಅಭಿಶೇಕ್‌ ಮನುಸಿಂಘ್ವಿ, ಗವರ್ನರ್ ಶರವೇಗದಲ್ಲಿ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಮುಡಾದಲ್ಲಿ ಕೇವಲ ಸಿಎಂ ಪತ್ನಿ ಅಲ್ಲ, ನೂರಾರು ಜನರಿಗೆ ಪರಿಹಾರ ಸಿಕ್ಕಿದೆ. ಗವರ್ನರ್ ವಿವೇಚನಾ ರಹಿತ ಕೆಲಸ ಮಾಡಿದ್ದಾರೆ. 4-5ನೇ ಪ್ರತಿವಾದಿಗಳಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ ಸಿಎಂ ಅಧಿಕಾರವನ್ನ ದುರುಪಯೋಗ ಮಾಡಿಕೊಂಡಿಲ್ಲ. ದೂರುದಾರರ ಹಿನ್ನೆಲೆ ಪರಿಶೀಲನೆ ಮಾಡಬೇಕಾಗಿತ್ತು ಎಂದು ವಾದಮಂಡಿಸಿದರು.

ಮುಂದುವರೆದು, ಟಿ.ಜೆ.ಅಬ್ರಹಾಂಗೆ ಸುಪ್ರೀಂಕೋರ್ಟ್ ದಂಡ ವಿಧಿಸಿದೆ. ಟಿ.ಜೆ. ಅಬ್ರಹಾಂ ಹೆಬಿಚುವಲ್ ಬ್ಲ್ಯಾಕ್‌ಮೇಲರ್. ಅಬ್ರಹಾಂಗೆ ಬ್ಲ್ಯಾಕ್‌ಮೇಲ್ ಮಾಡುವುದೇ ಪ್ರವೃತ್ತಿ ಈ ಎಲ್ಲವನ್ನೂ ಕ್ಯಾಬಿನೆಟ್‌ ರಾಜ್ಯಪಾಲರಿಗೆ ನೀಡಿದೆ ಎಂದರು.

ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ, ನಿರಾಣಿ ಕೇಸ್‌ ಬಾಕಿ ಇದೆ ಎಲ್ಲಾ ಕೇಸ್‌ಗಳು ರಾಜ್ಯಪಾಲರ ಮುಂದೆ ಇವೆ ಯಾಕೆ ಈ ಕೇಸ್‌ಗಳಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ? BSN ಕಾಯ್ದೆಯಡಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ಅಂತ ವಾದ ಮಂಡಿಸಿದರು ಎಂದು ಪ್ರಶ್ನೆ ಮಾಡಿದರು.

‘ರಾಜ್ಯಪಾಲರ ಆದೇಶಕ್ಕೆ ತಡೆ ನೀಡಬಾರದು’:

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಪರ ವಾದ ಮಂಡಿಸಿದ ತುಷಾರ್ ಮೆಹ್ತಾ, ಗವರ್ನರ್‌ ನೀಡಿರುವ ಆದೇಶಕ್ಕೆ ತಡೆ ನೀಡಬಾರದು, ಮಧ್ಯಪ್ರದೇಶದ ತೀರ್ಪು ಈ ಕೇಸ್‌ಗೆ ಹೊಂದುತ್ತದೆ
ನಾಳೆ ಜನಪ್ರತಿನಿಧಿಗಳ ಕೋರ್ಟ್‌ ಆದೇಶ ನೀಡಲಿದೆ ರಾಜ್ಯಪಾಲರ ಆದೇಶಕ್ಕೆ ಯಾವುದೇ ತಡೆ ನೀಡಬಾರದು, ಗವರ್ನರ್ ಬಗ್ಗೆ ಅಗೌರರವಾಗಿ ಮಾತನಾಡಿದ್ದು ಸರಿಯಲ್ಲ, ನಾನು ಸಂಪೂರ್ಣ ಸಂವಿಧಾನ ಬದ್ಧವಾಗಿ ವಾದಿಸುವೆ, ಮೀಡಿಯಾಗೆ ಬೇಕಾದ ಸ್ಪೈಸಿ ನ್ಯೂಸ್ ಹೇಳುತ್ತಿಲ್ಲ ನನ್ನ ವಾದ ಕಾನೂನುಬದ್ಧವಾಗಿದ್ದರೆ ಸಾಕು ಎಂದು ಕೋರ್ಟ್‌ನಲ್ಲಿ ಖಡಕ್‌ ವಾದ ಮಂಡಿಸಿದರು.

ವಾದಾ ವಿವಾದಗಳನ್ನು ಆಲಿಸಿದ ಎಂ.ನಾಗಪ್ರಸನ್ನ ಅವರಿದ್ದ ಪೀಠವು ಪ್ರಕರಣದ ತನಿಖೆಯನ್ನು ಇದೇ ಆಗಸ್ಟ್ 29ರ ಮಧ್ಯಾಹ್ನ 2.30ಕ್ಕೆ ಮುಂದೂಡಿ ಆದೇಶಿಸಿದರು.

RELATED ARTICLES

Related Articles

TRENDING ARTICLES