Thursday, September 19, 2024

ನನ್ನ ಬಳಿ ಏನು ಇಲ್ಲ ಎಂದ ಮಾಜಿ ಪ್ರಧಾನಿ: ಪತ್ನಿ ಹೆಸರಲ್ಲಿ ಜಮೀನು ಪಡೆದು ಸರ್ಕಾರಕ್ಕೆ ವಂಚನೆ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರ ವಿರುದ್ದ ಸುಳ್ಳು, ಮೋಸ, ವಂಚನೆ, ಊರಿನ ಕೆರೆಯನ್ನೇ ನುಂಗಿ ನೀರು ಕುಡಿದಿರುವ ಆರೋಪಗಳು ಬಳಹ ಹಿಂದಿನಿಂದಲೂ ಇದ್ದವು. ಅವೆಲ್ಲಾ ಊಹಾಪೋಹಗಳು ಎನ್ನಲಾಗುತ್ತಿತ್ತು. ಆದರೇ ಈ ಆರೋಪಗಳು ಊಹಾಪೋಹಗಳೂ ಅಲ್ಲ, ಆರೋಪಗಳೂ ಅಲ್ಲ, ಎಲ್ಲವೂ ಸತ್ಯ ಎನ್ನುವುದನ್ನು ಪವರ್​ ಟಿವಿ ಸಾಕ್ಷಿ ಸಮೇತ ಸಾಬೀತು ಮಾಡಿದೆ.

ನನ್ನ ಹೆಸರಿನಲ್ಲಿ ಏನು ಇಲ್ಲ, ನಾನೊಬ್ಬ ಮಣ್ಣಿನಮಗ ಎನ್ನುತ್ತಲೇ ರಿಪಬ್ಲಿಕ್ ಆಫ್ ಹಾಸನ ನಿರ್ಮಾಣ ಮಾಡಿಕೊಂಡಿದ್ದಾರೆ. ಕಂಡಕಂಡಲ್ಲಿ ಆಸ್ತಿ ಸಂಪಾದನೆ ಮಾಡಿದ್ದಾರೆ. ಹಾಸನದ ಸುತ್ತಮುತ್ತಲಲ್ಲಿ ಕಣ್ಣು ಹಾಯಿಸಿದಷ್ಟೂ ಗೌಡ್ರ ಆಸ್ತಿ ಇದೆ. ಏನೇನೂ ಆಸ್ತಿ ಇಲ್ಲದೆ ಇಂದು ಬೃಹತ್ ಸಾಮ್ರಾಜ್ಯವನ್ನೇ ಸೃಷ್ಟಿಸಿರುವ ದಿಗ್ಗಜ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.

ಇದನ್ನೂ ಓದಿ: ದರ್ಶನ್‌ಗಾಗಿ ಪೂಜೆ ಅಂದಿದ್ರೆ ನಾನು ಬರುತ್ತಿರಲಿಲ್ಲ: ನಟ ಜಗ್ಗೇಶ್​

ಆರು ಬಾರಿ ಶಾಸಕರಾಗಿದ್ದ ದೇವೇಗೌಡ ಅವರು 1981-82 ರಲ್ಲಿ ತನ್ನ ಬಳಿ ಯಾವ ಆಸ್ತಿಯೂ ಇಲ್ಲ ಎಂದು ಹೇಳುತ್ತಲೇ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಸುಳ್ಳು ಹೇಳಿ ಪತ್ನಿ ಚೆನ್ನಮ್ಮ ಹೆಸರಿನಲ್ಲಿ ಸರ್ಕಾರಕ್ಕೆ ಪತ್ರ ಬರೆದ ದೇವೇಗೌಡ ಅವರು ಚೆನ್ನಮ್ಮ ಅವರಿಗೆ ಸರ್ಕಾರದಿಂದ 4.39 ಎಕರೆ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ.

ಗೌಡರ ಪತ್ರಕ್ಕೆ ಸ್ಪಂದಿಸಿ ಪತ್ನಿ ಚೆನ್ನಮ್ಮ ಅವರಿಗೆ ಸರ್ಕಾರದಿಂದ ಹಾಸನ ಜಿಲ್ಲೆ ಹೊಳೆನರಸೀಪುರದ ಪಡುವಲಹಿಪ್ಪೆ ಗ್ರಾಮದಲ್ಲಿ 4.39 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಸರ್ಕಾರದ ನಿಯಮಗಳ ಅನ್ವಯ ಸರ್ಕಾರದಿಂದ ಜಮೀನು ಮಂಜೂರು ಸರ್ವೆ ನಂಬರ್​​​ 43ರಲ್ಲಿ ಚೆನ್ನಮ್ಮಗೆ 4 ಎಕರೆ 39 ಗುಂಟೆ ಜಮೀನು ನೀಡಿ ಅಂದಿನ ಹಾಸನ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ 1982ರ ಆಗಸ್ಟ್​ 18ರಂದು ಮಂಜೂರು ಮಾಡಿದ್ದಾರೆ.

RELATED ARTICLES

Related Articles

TRENDING ARTICLES