Friday, September 20, 2024

ವಾಲ್ಮೀಕಿ ಬಹುಕೋಟಿ ಹಗರಣ: ಚಾರ್ಜ್‌ಶೀಟ್ ರೆಡಿ

ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡವು 3,072 ಪುಟಗಳನ್ನು ಸಿದ್ದಪಡಿಸಿ ದೋಷಾರೋಪ ಪಟ್ಟಿ ಸಿದ್ಧಪಡಿಸಿದೆ.

ಇದನ್ನೂ ಓದಿ: ಇಂದು ರಾಜ್ಯದ ಕೆಲವೆಡೆ ಮಳೆ ಸಾಧ್ಯತೆ

ಕೋಟಿ ಕೋಟಿ ಲೂಟಿ ಮಾಡಿದ ಗ್ಯಾಂಗ್‌ನಲ್ಲಿ ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಕೈಬಿಡಲಾಗಿದೆ. ದೋಷಾರೋಪ ಪಟ್ಟಿಯಲ್ಲಿ ಇಬ್ಬರ ಹೇಳಿಕೆಗಳನ್ನು ದಾಖಲಿಸಿಲ್ಲ. ವಾಲ್ಮೀಕಿ ನಿಗಮದ ಹಣ ಕೊಳ್ಳೆ ಹೊಡೆಯಲು ಅಕ್ಟೋಬರ್ 2023ರಲ್ಲೇ ಪ್ಲಾನ್ ನಡೆದಿತ್ತು. ಮಾನ್ಯತಾ ಟೆಕ್ ಪಾರ್ಕ್‌ನ ಫ್ಲಾಟ್‌ನಲ್ಲಿ ಮೊದಲ ಡೀಲಿಂಗ್ ಆಗಿತ್ತು. 89 ಕೋಟಿ ಹೇಗೆಲ್ಲಾ ಹೊಡೆಯಬೇಕು, ನಕಲಿ ದಾಖಲಾತಿ ಸೃಷ್ಟಿಸಲು ಯೋಜನೆ ರೂಪಿಸಲಾಗಿತ್ತು. ನಾಗೇಂದ್ರ ಆಪ್ತ ನೆಕ್ಕುಂಟಿ ನಾಗಾರಾಜ್ ಬಳಸಿ ಹಣ ಹೊಡೆಯಲು ಚಿಂತನೆ ಮಾಡಲಾಗಿತ್ತು.

ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ್ ಪರಿಚಯ ಮಾಡಿಕೊಂಡ ಸತ್ಯನಾರಾಯಣ ವರ್ಮ, ಪರ್ಸೆಂಟೇಜ್ ಲೆಕ್ಕದಲ್ಲಿ ಕೋಟಿ ಕೋಟಿ ಹಣ ಕೊಡಿಸೋದಾಗಿ ವಂಚನೆ ಮಾಡಲಾಗಿದೆ. ಸಾಯಿತೇಜ ಅಲಿಯಾಸ್ ಶಿವಕುಮಾರ್ ವ್ಯಕ್ತಿಯನ್ನು ನಕಲಿ ಬ್ಯಾಂಕ್ ಸಿಬ್ಬಂದಿಯ ಹಾಗೇ ಬಿಂಬಿಸಲಾಗಿದೆ. ಪದ್ಮನಾಭ್, ಪರುಶರಾಮ್ ನಕಲಿ ಸಿಬ್ಬಂದಿಗೆ ಸಹಾಯ ಮಾಡಿದ್ದಾರೆ.

RELATED ARTICLES

Related Articles

TRENDING ARTICLES