Saturday, September 28, 2024

ನಕಲಿ ನೋಟ್​​​​ ಚಲಾವಣೆ, ಇಬ್ಬರು ಆರೋಪಿಗಳು ಅರೆಸ್ಟ್​

ಬೆಳಗಾವಿ: ನಕಲಿ ನೋಟ್ ಚಲಾವಣೆ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬೆಳಗಾವಿ ಕ್ಯಾಂಪ್ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ತಾಲೂಕಿನ ಅನಂತ ಗುರುನಾಥ್ ಹಾಗೂ ವಿಲಾಸ್​ ಪಾಟೀಲ್​​ ಬಂಧಿತ ಆರೋಪಿಗಳು. ಆರೋಪಿಗಳಿಂದ 56 ಲಕ್ಷ ನಕಲಿ 500 ರೂಪಾಯಿ ನೋಟ್​ಗಳನ್ನ ಜಪ್ತಿ ಮಾಡಲಾಗಿದೆ. ಜೊತೆಗೆ ಆರೋಪಿಗಳ ಬಳಿಯಿದ್ದ 2 ಲಕ್ಷದ 60 ಸಾವಿರ ಅಸಲಿ ನೋಟ್​ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈ ಗ್ಯಾಂಗ್​ ವಿಡಿಯೋ ಕಾಲಿನಲ್ಲಿ ಹಣ ತೋರಿಸಿ ವಂಚಿಸುತ್ತಿತ್ತು.

ಇದನ್ನೂ ಓದಿ: ಥರ್ಡ್​ ವೇವ್​ ಕೆಫೆ​​ ಮಹಿಳಾ ಟಾಯ್ಲೆಟ್​​ನಲ್ಲಿ ​ಮೊಬೈಲ್ ಇಟ್ಟು ಚಿತ್ರೀಕರಣ!

ಪಾರ್ಟಿ ಮಾಡಿ ಬಾರ್​ನಲ್ಲಿ ನಕಲಿ ನೋಟ್ ಚಲಾಯಿಸಲು ಹೋಗಿ ಗ್ಯಾಂಗ್​ ಸಿಕ್ಕಿ ಬಿದ್ದಿದೆ. ನಮ್ಮ ಹತ್ತಿರ ಹಣವಿದೆ ಪ್ರಾಪರ್ಟಿ ಖರೀದಿಸಬೇಕು ಅಂತಾ ವಿಡಿಯೋ ಕಾಲಿನಲ್ಲಿ ನಕಲಿ ನೋಟ್ ತೋರಿಸುತ್ತಿದ್ದರು. ನೋಟಿನ ಬಂಡಲ್ ಮೇಲೆ ಎರಡು ಅಸಲಿ ನೋಟುಗಳನ್ನ ಇಟ್ಟು ಉಳಿದಿದ್ದೆಲ್ಲಾ ನಕಲಿ ನೋಟು ಕೊಡುತ್ತಿದ್ದರು. ಈ ಸಂಬಂಧ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

RELATED ARTICLES

Related Articles

TRENDING ARTICLES