ಬೆಂಗಳೂರು ನಗರದ ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕೆಫೆಯ ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ಚಿತ್ರಕರಣಕ್ಕೆ ಮೊಬೈಲ್ ಇಟ್ಟಿದ್ದ ಆರೋಪಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ 23 ವರ್ಷದ ಮನೋಜ್ ಬಂಧಿತ ಆರೋಪಿ. ಆರೋಪಿ ಮನೋಜ್ ಇದೇ ಕಾಫಿ ಶಾಪ್ನಲ್ಲಿ ಕಾಫಿ ಮೇಕರ್ ಆಗಿ ಕೆಲಸ ಮಾಡುತ್ತಿದ್ದನು. ಆರೋಪಿ ಮನೋಜ್ ಬೆಳಗ್ಗೆ ಮಹಿಳೆಯರ ಶೌಚಾಲಯಕ್ಕೆ ಹೋಗಿದ್ದಾನೆ. ಅಲ್ಲಿ ಕಸದ ಬುಟ್ಟಿಗೆ ಹೋಲ್ ಮಾಡಿದ್ದಾನೆ.
ಇದನ್ನೂ ಓದಿ: ಪತಿಯ ಕತ್ತು ಹಿಸುಕಿ ಕೊಂದ ಪತ್ನಿ, ಪ್ರಿಯಕರ
ನಂತರ ಮೊಬೈಲ್ ಅನ್ನು ಫ್ಲೈಟ್ ಮೂಡ್ಗೆ ಹಾಕಿ ವಿಡಿಯೋ ಚಿತ್ರಕರಣಕ್ಕೆ ಇರಿಸಿ, ಹೊರ ಬಂದು ಯಥಾಪ್ರಕಾರ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ. ನಂತರ ಶೌಚಾಲಯಕ್ಕೆ ಹೋದ ಮಹಿಳೆಯೊಬ್ಬರು ಮೊಬೈಲ್ ಇರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಕೂಡಲೆ ಸ್ಥಳಕ್ಕೆ ಬಂದ ಸದಾಶಿವನಗರ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿ ಮನೋಜ್ನನ್ನು ಬಂಧಿಸಿದ್ದಾರೆ.