Thursday, December 5, 2024

ಓವರ್ ಟೇಕ್ ಮಾಡಲು ಮುಂದಾಗಿ ಸೇತುವೆಗೆ ಗುದ್ದಿದ ಬಸ್​

ಚಿಕ್ಕಮಗಳೂರು: ಓವರ್ ಟೇಕ್ ಮಾಡಲು ಹೋಗಿ ಖಾಸಗಿ ಬಸ್​ ಸೇತುವೆಗೆ ಗುದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದ ಬಳಿ ನಡೆದಿದೆ.

ಸದ್ಯ ಯಾವುದೇ ಘಟನೆಯಲ್ಲಿ ಪ್ರಾಣ ಹಾನಿಸಂಭವಿಸಿಲ್ಲ. ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳಿಗೆ ತರೀಕೆರೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಈ ಆಚಾತುರಕ್ಕೆ ಚಾಲಕನ ಅಜಾಗ್ರತೆ, ಅತಿಯಾದ ವೇಗ ಕಾರಣವಾಗಿದೆ ಎಂದು ಹೇಳಲಾಗುತ್ತಿದ್ದು, ಈ ಬಸ್​ ಭದ್ರಾವತಿಯಿಂದ ತರೀಕೆರೆಗೆ ಬರುತ್ತಿತ್ತು. ಕಿರಿದಾದ ಸೇತುವೆ ಬಳಿ ಮತ್ತೊಂದು ಬಸ್ ಓವರ್ ಟೇಕ್ ಮಾಡಲು ಹೋದಾಗ ಈ ಅನಾಹುತ ನಡೆದಿದ್ದು, ಬಸ್ ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಲಕ್ಕವಳ್ಳಿ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES