Friday, September 20, 2024

ತುಂಗಭದ್ರ ಡ್ಯಾಂ ಗೇಟ್​ ಚೈನ್​ ಲಿಂಕ್​ ಕಡಿತ: ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಕೊಪ್ಪಳ: ತುಂಗಭದ್ರಾ ಡ್ಯಾಮ್​ನ ಕ್ರಸ್ಟ್​​ ಗೇಟ್​ ಡ್ಯಾಮೇಜ್ ಆದ ವಿಚಾರ ಕುರಿತು ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯಿಸಿದ್ದಾರೆ.

ಯಾವತ್ತೂ ಹೀಗೆ ಆಗಿರಲಿಲ್ಲ, 19ನೇ ಗೇಟ್ ಜೈನ್ ಲಿಂಕ್ ಕಟ್ಟಾಗಿದೆ. ನೀರು ರಭಸವಾಗಿ ಹರಿಯುತ್ತಿದೆ. ಯಾವ ರೀತಿ ಸರಿಪಡಿಸಬೇಕೆಂದು ತಜ್ಞರ ಅಭಿಪ್ರಾಯ ಪಡೆಯಬೇಕು ಎಂದು ತಿಳಿಸಿದರು. ಡ್ಯಾಂನಲ್ಲಿ 60 TMCಯಷ್ಟು ನೀರಿದೆ. ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ, ಎಲ್ಲ ಕಡೆಯಿಂದಲೂ ಬರುತ್ತಾರೆ. ಇದು ಗಂಭೀರವಾದ ವಿಚಾರ. ರೈತರು, ಮಂತ್ರಿಗಳು, ಶಾಸಕರು ಹೇಳುವ ಮಾತನ್ನ ನಾನು ಕೇಳುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ತುಂಗಭದ್ರಾ ಜಲಾಯಶಯದ ಗೇಟ್ ಚೈನ್​ ಲಿಂಕ್ ಕಟ್​​: ಅಪಾರ ಪ್ರಮಾಣದ ನೀರು ಹೊರಗೆ

ನದಿ ಪಾತ್ರದ ಜನರಿಗೆ ಜಿಲ್ಲಾಧಿಕಾರಿ ಎಚ್ಚರಿಕೆ:

ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಮುರಿದು ಹೋಗಿರುವುದರಿಂದ ನದಿಗೆ ಸದ್ಯ 1 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ಬಿಡಲಾಗುತ್ತಿದ್ದು, ಆ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸೂಚಿಸಿದ್ದಾರೆ.

ಸದ್ಯ ಎಲ್ಲಿಯೂ ಪ್ರವಾಹದ ಸ್ಥಿತಿ ಇಲ್ಲ. ಅಣೆಕಟ್ಟೆಯಿಂದ 2.50 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ಹೊರಬಿಟ್ಟರೆ ಮಾತ್ರ ಕೆಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗುವುದು. ಈ ಹಿಂದಿನ ಅನುಭವಗಳಿಂದ ತಿಳಿದಿರುವ ಸಂಗತಿಯಾಗಿದ್ದು, ಸದ್ಯ ಪ್ರವಾಹ ಸ್ಥಿತಿ ಇಲ್ಲ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES