Thursday, September 19, 2024

ಕುಮಾರಸ್ವಾಮಿ ಕುಟುಂಬದ ಅನುಕೂಲಕ್ಕೆ ಎಲ್ಲರನ್ನು ಓಡಿಸಿಬಿಟ್ರು: ಡಿಕೆ ಶಿವಕುಮಾರ್​

ಮೈಸೂರು: ಅವರ ಕುಟುಂಬದ ಅನುಕೂಲಕ್ಕಾಗಿ ಎಲ್ಲರನ್ನೂ ಓಡಿಸಿದರು. ದೇವೇಗೌಡ ಕುಟುಂಬ ಯಾರನ್ನು ಸಹಿಸೋದಿಲ್ಲ. 17 ಜನ ಗೆದ್ದಿದ್ರು ಯಾರನ್ನೂ ಸುಮ್ಮನೆ ಬಿಡಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಹೆಚ್​.ಡಿ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದರು.

ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್​ ನಡೆಸುತ್ತಿರುವ ಪಾದಯಾತ್ರೆಗೆ ವಿರುದ್ದವಾಗಿ ಕಾಂಗ್ರೆಸ್​ ನಡೆಸುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮದು ಧರ್ಮಯುದ್ಧ. ಅಸತ್ಯದ ವಿರುದ್ಧ ಸತ್ಯ ಯುದ್ಧ. ಕಾಂಗ್ರೆಸ್​​​ ಪಕ್ಷಕ್ಕೆ ಅತಿದೊಡ್ಡ ಇತಿಹಾಸ ಇದೆ. ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದೆ ಎಂದರು. ಬಿಜೆಪಿ ಅಧಿಕಾರದ ಅವಧಿಯಲ್ಲಿ 25 ಹಗರಣಗಳು ನಡೆದಿವೆ. ವಿಪಕ್ಷಗಳು ಮಾಡ್ತಿರೋದು ಪಾದಯಾತ್ರೆ ಅಲ್ಲ. ಅವ್ರ ಪಾಪ ವಿಮೋಚನಾ ಯಾತ್ರೆ ಮಾಡ್ತಿದ್ದಾರೆ.

ಇದನ್ನೂ ಓದಿ: ಸಿಎಂ ರಾಜೀನಾಮೆ ಕೊಡಲ್ಲ.. ಸಿದ್ದರಾಮಯ್ಯರ ಜೊತೆ ಈ ಬಂಡೆ ಇರುತ್ತೆ : ಡಿಕೆ ಶಿವಕುಮಾರ್​

ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ:

ಕೇಂದ್ರ ಸಚಿವ H.D.ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್​​ ಏಕವಚನದಲ್ಲಿ ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಅವರು ಮಾತನಾಡಿ. ಪ್ರಜ್ವಲ್​​ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೊದಲು ನನ್ನ ವಿರುದ್ಧ ಆರೋಪ ಮಾಡಿದ್ದರು. ಆಮೇಲೆ ಬಿಜೆಪಿ ಮಾಜಿ ಶಾಸಕ ಪ್ರೀತಮ್​​ ಗೌಡ ಮೇಲೆ ಆರೋಪ ಮಾಡಿದ್ದರು. ಅವರ ಕುಟುಂಬದ ಅನುಕೂಲಕ್ಕಾಗಿ ಎಲ್ಲರನ್ನೂ ಓಡಿಸಿದರು. ದೇವೇಗೌಡ ಕುಟುಂಬ ಯಾರನ್ನು ಸಹಿಸೋದಿಲ್ಲ. 17 ಜನ ಗೆದ್ದಿದ್ರು ಯಾರನ್ನೂ ಸುಮ್ಮನೆ ಬಿಡಲಿಲ್ಲ ಎಂದು ಕಿಡಿಕಾರಿದರು.

ಲಕ್ಷ್ಮಿ ವಿಲಾಸ್​​ ಬ್ಯಾಂಕ್​​ ಹಗರಣ ಪ್ರಸ್ತಾಪ:

ಬಿಜೆಪಿ ರಾಜ್ಯಾದ್ಯಕ್ಷ B.Y.ವಿಜಯೇಂದ್ರ ನಿಮ್ಮಪ್ಪ ಎರಡು ಬಾರಿ ರಾಜೀನಾಮೆ ಕೊಟ್ರಲ್ಲ ಯಾಕೆ. ಲಕ್ಷ್ಮಿ ವಿಲಾಸ್
ಬ್ಯಾಂಕ್​ಗೆ ಹಣ ಟ್ರಾನ್ಸ್​ಫರ್​ ಮಾಡಿದೆಯಲ್ಲಾ ಮೊದಲು ಉತ್ತರ ಕೊಡು ವಿಜಯೇಂದ್ರ ಎಂದು ಪವರ್​​ ಟಿವಿ ವರದಿ ಉಲ್ಲೇಖಿಸಿ ಡಿಸಿಎಂ ಪ್ರಶ್ನಿಸಿದರು.

RELATED ARTICLES

Related Articles

TRENDING ARTICLES