Friday, September 20, 2024

ವಿನೇಶ್​ ಪೋಗಟ್‌ ಅನರ್ಹ, ಕ್ಯೂಬಾ ಕುಸ್ತಿಪಟುಗೆ ಒಲಿದ ಫೈನಲ್​ ಸೌಭಾಗ್ಯ

ಪ್ಯಾರಿಸ್​: ಕೆಲವೊಮ್ಮೆ ಅದೃಷ್ಟ ಎನ್ನುವುದು ನಮಗೆ ಹೇಗೆ ಒಲಿದು ಬರುತ್ತದೆ ಎಂದು ಯಾರಿಗೂ ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಇದೇ ರೀತಿಯ ಒಂದು ಘಟನೆಯೊಂದು ಈ ಬಾರಿಯ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿಯೂ ನಡೆದಿದೆ.

ಮಂಗಳವಾರ ನಡೆದಿದ್ದ ಮಹಿಳಾ 50 ಕೆಜಿ ವಿಭಾಗದ ಸೆಮಿಫೈನಲ್​ ಪಂದ್ಯದಲ್ಲಿ ಕ್ಯೂಬಾದ ಯಸ್ನಿಲಿಸ್​ ಗುಜ್ಮನ್​ ಲೋಪೆಜ್ ಭಾರತದ ವಿನೇಶ್​ ಫೋಗಟ್ ವಿರುದ್ಧ 5-0 ಅಂತರದಿಂದ ಹೀನಾಯವಾಗಿ ಸೋಲು ಕಂಡು ಕಣ್ಣೀರು ಸುರಿಸಿದ್ದರು. ಇದೀಗ ಅವರಿಗೆ ಅದೃಷ್ಟವೊಂದು ಕೈ ಹಿಡಿದು ಫೈನಲ್​ ಆಡುವ ಸೌಭಾಗ್ಯ ಒದಗಿ ಬಂದಿದೆ.

ಇದನ್ನೂ ಓದಿ: ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಆಘಾತ : ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದ ವಿನೇಶ್​ ಫೋಗಾಟ್​ ಅನರ್ಹ!

ಹೌದು, ಸೆಮಿಫೈನಲ್​ನಲ್ಲಿ ಸೋಲು ಕಂಡಿದ್ದ ಯಸ್ನಿಲಿಸ್​ ಗುಜ್ಮನ್ ಇಂದು ಕಂಚಿನ ಪದಕಕ್ಕೆ ಸ್ಪರ್ಧಿಸಬೇಕಿತ್ತು. ಈ ಪಂದ್ಯ ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಬೇಕು ಎನ್ನುವಷ್ಟರಲ್ಲಿ ಯಸ್ನಿಲಿಸ್​ ಗುಜ್ಮನ್​ಗೆ ಫೈನಲ್​ ಪಂದ್ಯದ ಕರೆ ಬಂದಿದೆ. ಇದಕ್ಕೆ ಕಾರಣ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದು.

50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್​ ಫೈನಲ್ ಪಂದ್ಯಕ್ಕೂ ಮುನ್ನ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ಇರುವ ಕಾರಣ ಅವರನ್ನು ಫೈನಲ್​ನಿಂದ ಅನರ್ಹ ಮಾಡಲಾಗಿದೆ. ಹೀಗಾಗಿ ಫೈನಲ್​ ಆಡುವ ಅವಕಾಶ ಗುಜ್ಮನ್​ಗೆ ಲಭಿಸಿತು. ಫೈನಲ್​ನಲ್ಲಿ ಗುಜ್ಮನ್ ಅವರು​ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಸವಾಲು ಎದುರಿಸಲಿದ್ದಾರೆ. ಈ ಪಂದ್ಯ ರಾತ್ರಿ 11.23ಕ್ಕೆ ನಡೆಯಲಿದೆ.

RELATED ARTICLES

Related Articles

TRENDING ARTICLES