Friday, September 20, 2024

ಸಚಿನ್​ ​ಬಾಲ್ಯ ಸ್ನೇಹಿತ ಕಾಂಬ್ಳಿಗೆ ಇದೆಂಥಾ ದುಸ್ಥಿತಿ..? ಹೇಗಿದ್ದಾರೆ ಗೊತ್ತಾ?

ಮಾಸ್ಟರ್​​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಮತ್ತು ವಿನೋದ್ ಕಾಂಬ್ಳಿ ಇವರಿಬ್ಬರು ಚೈಲ್ಡ್​​​ವುಡ್​​ ಫ್ರೆಂಡ್ಸ್​​! ಚಿಕ್ಕ ವಯಸ್ಸಿನಿಂದಲೂ ಅವರ ಜೊತೆಗೆ ಆಡಿದ್ದ ಸಚಿನ್ ತೆಂಡೂಲ್ಕರ್ ಇಂದು ಕ್ರಿಕೆಟ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​​ಮನ್ ಎಂದು ಕರೆಸಿಕೊಂಡಿದ್ದಾರೆ. ಆದರೆ, ವಿನೋದ್ ಕಾಂಬ್ಳಿ ಮಾತ್ರ ಹಾಗೇ ಆಗಲ್ಲಿಲ್ಲ. ಯಾಕೆ? ತನ್ನ ಮುಂದಿದ್ದ ಚಿನ್ನದಂಥಾ ಅವಕಾಶಗಳನ್ನು ಎಡಗಾಲಿನಿಂದ ಒದ್ದವರು. ಈಗ ಹೇಗಿದ್ದಾರೆ ಸಚಿನ್ ತೆಂಡೂಲ್ಕರ್ ಅವರ ಬಾಲ್ಯ ಸ್ನೇಹಿತ ವಿನೋದ್​ ಕಾಂಬ್ಲಿ?

ಇತ್ತಿಚಿಗೆ ಸಾಮಾಜಿಕ ಜಾಲತಾಣದಲ್ಲೊಂದು ವೀಡಿಯೊ ಸಖತ್​ ವೈರಲ್ ಆಗಿದೆ. ಮುಂಬೈನ ಯಾವುದೇ ಒಂದು ಬೀದಿ ಬದಿಯಲ್ಲಿ ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಕಂಡಿದ್ದಾರೆ ವಿನೋದ್ ಕಾಂಬ್ಳಿ. ಇನ್ನೇನು ಕುಸಿದೇ ಬಿಟ್ಟರು ಎನ್ನುವಷ್ಟರಲ್ಲಿ ಅಕ್ಕಪಕ್ಕದಲ್ಲಿದ್ದವರು ಸಹಾಯ ಮಾಡಲು ಬಂದು ಕೈ ಹಿಡಿದು ಮೇಲೆತ್ತಿದ್ದಾರೆ.

ಕಾಂಬ್ಳಿ ಅವರು ಶಾಲಾ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ಜೊತೆ ವಿಶ್ವದಾಖಲೆಯ ಜೊತೆಯಾಟವಾಡಿದ್ದ ಪ್ರತಿಭಾವಂತ ಹುಡುಗ. ಮುಂಬೈನ ಶಿವಾಜಿ ಪಾರ್ಕ್ ಮೈದಾನದಿಂದ ಆರಂಭಗೊಂಡಿದ್ದ ಇವರಿಬ್ಬರ ಕ್ರಿಕೆಟ್ ಜರ್ನಿ. ಭಾರತ ತಂಡದಲ್ಲೂ ಜೊತೆಯಾಗಿ ಸಾಗಿತ್ತು.

ಇದನ್ನೂ ಓದಿ: ವಿಜಯ್​ ಭಾರದ್ವಾಜ್​ಗೆ ಮರೆಯಲಾಗದ​ ರಣಜಿ ಟ್ರೋಫಿ​ ರೋಚಕ ಪಂದ್ಯ

ಸ್ಟೈಲಿಶ್ ಎಡಗೈ ಬ್ಯಾಟ್ಸ್​​ಮನ್​ ಮಾತ್ರ ಗ್ರೌಂಡ್​​ನಲ್ಲಿ ಬ್ಯಾಟ್​​ ಹಿಡಿದು ಕ್ರೀಸ್​​ನಲ್ಲಿ ನಿಂತ್ರೆ ಎದುರಾಳಿಗಳಿಗೆ ಬೇವರಿಸುವಂತ ಸ್ಫೋಟ ಆಟಗಾರ. ಕಾಂಬ್ಳಿ, ಭಾರತ ತಂಡದ ಪರ ಆಡಿದ್ದು ಕೇವಲ 17 ಟೆಸ್ಟ್ ಪಂದ್ಯ ಮಾತ್ರ. ಅದರಲ್ಲಿ ಎರಡು ಬ್ಯಾಕ್​ ಟು ಬ್ಯಾಕ್​ ಡಬಲ್ ಸೆಂಚುರಿ ಬಾರಿಸಿದ್ದರು. 1993ರಲ್ಲಿ ಮೊದಲ ಟೆಸ್ಟ್ ಕ್ರಿಕೆಟ್​ಗೆ ಪಾದರ್ಪಣೆ ಮಾಡಿದರು. 1995ರಲ್ಲಿ ಕೊನೆ ಟೆಸ್ಟ್ ಪಂದ್ಯವಾಡಿದಾಗ ವಿನೋದ್ ಕಾಂಬ್ಳಿ ಅವರು ಬ್ಯಾಟಿಂಗ್ ಸರಸಾರಿ 54.20. ಇದು ಸಾಮಾನ್ಯ ಸಾಧನೆ ಅಲ್ಲ.

ಭಾರತೀಯ ಕ್ರಿಕೆಟ್​ ಜಗತ್ತಿನಲೊಬ್ಬ ದಿಗ್ಗಜನಾಗಲು ಏನೆಲ್ಲಾ ಕ್ವಾಲಿಟಿಸ್​​ ಬೇಕಿತ್ತೋ ಅಷ್ಟೂ ಸಹ ವಿನೋದ್ ಕಾಂಬ್ಳಿಯವರಲ್ಲಿತ್ತು. ಆದರೆ, ತಲೆಯಲ್ಲಿ ಬುದ್ದಿಯೊಂದನ್ನು ಬಿಟ್ಟು. ಕಾಂಬ್ಳಿ ಜೊತೆ ಜೊತೆಗೆ ಆಡಿದ ಸಚಿನ್, ತನ್ನ ಸುತ್ತ ಒಂದು ಲಕ್ಷ್ಮಣ ರೇಖೆ ಎಳೆದುಕೊಂಡು, ಅದನ್ನು ಯಾವತ್ತೂ ದಾಟದೇ ಇದ್ದ ಕಾರಣಕ್ಕೆ ಕ್ರಿಕೆಟ್ ದಿಗ್ಗಜನಾಗಿ ಬಿಟ್ಟರು. ಆದರೆ ವಿನೋದ್ ಕಾಂಬ್ಳಿ ಮಾತ್ರ ವಿರುದ್ಧವಾಗಿ ನಡೆದುಕೊಂಡಿದ್ದರು.

ಐವತ್ತೆರೆಡು ವರ್ಷದ ವಿನೋದ್ ಕಾಂಬ್ಳಿ ಅವರು ಈ ಹಿಂದೆ ಸಾಕಷ್ಟು ಬಾರಿ ಅನಾರೋಗ್ಯದ ಸಮಸ್ಯೆಯಿಂದ ಬಳಲಿದ್ದರು. ಆ ವೇಳೆಯಲ್ಲಿ, ಬಾಲ್ಯ ಸ್ನೇಹಿತ ಸಚಿನ್ ನೆರವಿಗೆ ಬರುತ್ತಾನೆ ಎಂದು ನಿರೀಕ್ಷೆ ಮಾಡಿದ್ದುಂಟು. ಯಾರಿಗೂ ಗೊತ್ತಾಗದಂತೆ ಸ್ನೇಹಿತ ಕಾಂಬ್ಳಿ ಅವರಿಗೆ ಸಚಿನ್ ತೆಂಡೂಲ್ಕರ್​ ಅವರು ಸಹಾಯ ಮಾಡಿದ್ದಾರೆ. ವಿನೋದ್​ ಕಾಂಬ್ಳಿ ಅವರ ಅನಾರೋಗ್ಯದಿಂದ ಬಳಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.​ ಈ ಸಲ ಕೂಡ ಸ್ನೇಹಿತ ಕಾಂಬ್ಳಿ ನೆರವಿಗೆ ಸಚಿನ್ ಧಾವಿಸಬೇಕೆಂದು ಸೋಷಿಯಲ್​ ಫ್ಲ್ಯಾಟ್​ ಫಾರಂನಲ್ಲಿ ಚರ್ಚೆ ಶುರುವಾಗಿದೆ.

ಇದನ್ನ ಓದಿ: ಗೆಳಯನೊಂದಿಗೆ ನೈಟ್​ ಔಟಿಂಗ್​ ಹೋಗಿದ್ದ ಈಜುಗಾರ್ತಿ: ಪ್ಯಾರಿಸ್​ ಒಲಿಂಪಿಕ್ಸ್​ನಿಂದ ಹೊರ ಹಾಕಿದ ಮುಖ್ಯಸ್ಥರು

ವಿನೋದ್​ ಕಾಂಬ್ಳಿ ಅವರು ಜೀವನದಲ್ಲಿ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳುಲು ಬೇರೆಯಲ್ಲೋ ನೋಡಬೇಕಾಗಿರಲಿಲ್ಲ. ತನ್ನ ಜೊತೆಗೆ ಸಾಕಷ್ಟು ವರ್ಷಗಳ ಕಾಲ ಆಡಿದ್ದ ಬಾಲ್ಯದ ಗೆಳೆಯನನ್ನೇ ಆದರ್ಶವಾಗಿಟ್ಟುಕೊಂಡಿದ್ದರೆ, ಈ ಹೊತ್ತಿಗೆ ಕಾಂಬ್ಳಿ ಇನ್ನೆಲ್ಲೋ ಇರುತ್ತಿದ್ದರು. ಆದರೆ, ಶಿಸ್ತಿಲ್ಲದ ಜೀವನ, ಹದ್ದು ಮೀರಿದ ವಿನೋದಾವಳಿಗಳು, ಪ್ರಶ್ನಾರ್ಹ ನಡವಳಿಕೆಗಳು, ಕೋಪ ಇವೆಲ್ಲಾ ಕಾಂಬ್ಳಿಗೆ ಮಾರಕವಾಗಿ ಬಿಟ್ಟವು.
ವಿನೋದ್​ ಕಾಂಬ್ಳಿ ಅವರು ಭಾರತದ ಪರ 17 ಟೆಸ್ಟ್ ಪಂದ್ಯಗಳನ್ನು ಆಡಿ 1,084 ರನ್​ಗಳಿಸಿದ್ದರು. ಇದರಲ್ಲಿ 4 ಶತಕ, 3 ಅರ್ಧ ಶತಕ ಬಾರಿಸಿದ್ದರು. ಇನ್ನು 104 ಏಕದಿನ ಪಂದ್ಯಗಳನ್ನಾಡಿದ್ದ ಕಾಂಬ್ಳಿ ಅವರು 2,477 ರನ್​ಗಳನ್ನು ಕಲೆಹಾಕಿದ್ದರು. ಇದರಲ್ಲಿ 2 ಶತಕ ಸೇರಿದಂತೆ 14 ಅರ್ಧ ಶತಕ ಅವರ ಬ್ಯಾಟ್​​ನಿಂದ ಬಂದಿತ್ತು.

 

View this post on Instagram

 

A post shared by Power TV NEWS (@powertvnews)

RELATED ARTICLES

Related Articles

TRENDING ARTICLES