Friday, September 20, 2024

ಬಿಜೆಪಿ-ಜೆಡಿಎಸ್​ ನವರದ್ದು ಅವಕಾಶವಾದಿ ಪಾದಯಾತ್ರೆ: M.B.ಪಾಟೀಲ್​​

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಇನ್ನು 10 ತಿಂಗಳುಗಳಲ್ಲಿ​​​​​ ಅಸ್ಥಿರ ಆಗಲಿದೆ ಎಂದ ಕೇಂದ್ರ ಸಚಿವ H.D.ಕುಮಾರಸ್ವಾಮಿ ಹೇಳಿಕೆಗೆ ಸಚಿವ ಎಂ.ಬಿ.ಪಾಟೀಲ್​ ತಿರುಗೇಟು ನೀಡಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಸಮ್ಮಿಶ್ರ ಸರ್ಕಾರವನ್ನೇ ಉಳಿಸಿಕೊಳ್ಳಲು ಆಗಲಿಲ್ಲ. ನಾನು ಕೂಡ ಅಂದು ಗೃಹ ಮಂತ್ರಿ ಆಗಿದ್ದೆ. ಇವತ್ತು ಕುಮಾರಸ್ವಾಮಿ ಯಾರ ಜೊತೆಗೆ ಪಾದಯಾತ್ರೆ ಮಾಡುತ್ತಿದ್ದಾರೋ ಅವರೇ ಸರ್ಕಾರ ಉರುಳಿಸಿದ್ರು. ಇದು ಅವಕಾಶವಾದಿ ಪಾದಯಾತ್ರೆ. ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಿ, ದೆಹಲಿಯಲ್ಲಿ ಏನು ನಾಟಕ ನಡೆಯಿತು ಎಂದು ಗೊತ್ತಿದೆ. ಒಲ್ಲದ ಮನಸ್ಸಿನಿಂದ ಕುಮಾರಸ್ವಾಮಿ ಪಾದಯಾತ್ರೆಗೆ ಬಂದಿದ್ದಾರೆ. ಪಾದಯಾತ್ರೆಯಲ್ಲಿ ಭಾಗಿಯಾಗುವಂತೆ ಒತ್ತಡ ಹಾಕಿದ ನಂತರವೇ ಭಾಗಿಯಾಗಿದ್ದು ಎಂದು ಹೇಳಿದ್ದಾರೆ.

ಮುಡಾ ಹಗರಣದಲ್ಲಿ ಎಳ್ಳಷ್ಟು ಸಿಎಂ ಪಾತ್ರವಿಲ್ಲ

ಮುಡಾ ಹಗರಣದಲ್ಲಿ ಎಳ್ಳಷ್ಟು ಸಿಎಂ ಸಿದ್ದರಾಮಯ್ಯ ಪಾತ್ರ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ​ಮುಡಾ ಹಗರಣದ ಬಗ್ಗೆ ​​ಸಿಎಂ ಸುದೀರ್ಘವಾಗಿ ಉತ್ತರ ಹೇಳಿದ್ದಾರೆ. ರಾಮದಾಸ್, ಜಿಟಿಡಿ ಇರುವ ಸಭೆಯಲ್ಲಿ ತಪ್ಪಾಗಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯ ರಾಜಕೀಯ ಬೆಳವಣಿಗೆ: ಹೈಕಮಾಂಡ್​ ನಾಯಕರೊಂದಿಗೆ ಸಚಿವರ ಸಭೆ ಇಂದು

ಮೈಸೂರು ಚಲೋಗೆ ಸಿಎಂ ಅಭಿಮಾನಿಗಳ ಖಂಡನೆ:

ಬಿಜೆಪಿ ಹಾಗೂ ಜೆಡಿಎಸ್​​ ಮೈಸೂರು ಚಲೋ ಪಾದಯಾತ್ರೆಗೆ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಯಾದಗಿರಿ ನಗರದ ಸುಭಾಷ್​​​ ವೃತ್ತದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಧರಣಿ ನಡೆಸಿದ್ದಾರೆ. ಹಳದಿ, ನೀಲಿ, ಹಸಿರು ಬಣ್ಣದ ಶಾಲು ಹಾಕಿಕೊಂಡು ಹೋರಾಟ ಮಾಡಿದ್ದಾರೆ. ಸಿಎಂ ಸಿದ್ದರಾಮ್ಯಯ ವಿರುದ್ಧ ದ್ವೇಷದ ರಾಜಕೀಯ ಮಾಡೋದನ್ನು ಮೊದಲು ನಿಲ್ಲಿಸಿ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES