Friday, September 20, 2024

ಧ್ರುವ ಸರ್ಜಾ ಎದುರು ಕೇ‘ಡಿ’ ಅಭಿಮಾನಿಗಳ ಹೈಡ್ರಾಮಾ

ಇತ್ತೀಚಿಗೆ ಚಿತ್ರದುರ್ಗದ ಮುರುಘಾಮಠಕ್ಕೆ ಧ್ರುವ ಸರ್ಜಾ ಹೋಗಿದ್ದ ವೇಳೆ ಹೈಡ್ರಾಮಾ ನಡೆದಿದೆ. ಧ್ರುವ ಸರ್ಜಾನ ನೋಡೋದಕ್ಕೆ ಸಾಕಷ್ಟು ಅಭಿಮಾನಿಗಳು ನೆರೆದಿದ್ರು. ಆದ್ರೆ ಇವರ ನಡುವೆ ಇದ್ದ ದರ್ಶನ್ ಅಭಿಮಾನಿಗಳು ಧ್ರುವ ಕಾರಿಗೆ ಮುತ್ತಿಗೆ ಹಾಕಿ ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ. ಆ ಮೂಲಕ ಮತ್ತೊಂದು ಫ್ಯಾನ್ ವಾರ್​ನ ಕಿಡಿ ಹೊತ್ತಿಸಿದ್ದಾರೆ.

ಯೆಸ್, ದರ್ಶನ್ ಮತ್ತು ಧ್ರುವ ನಡುವೆ ಮನಸ್ತಾಪ ಇದೆ ಅನ್ನೋ ಸಂಗತಿ ಗೊತ್ತೇ ಇದೆ. ಈ ಬಗ್ಗೆ ಖುದ್ದು ಧ್ರುವ ಸರ್ಜಾ ಬಹಿರಂಗವಾಗೇ ಹೇಳಿಕೆ ಕೊಟ್ಟಿದ್ರು. ಯಾವಾಗ ಇವರ ನಡುವೆ ಮನಸ್ತಾಪ ಇದೆ ಅನ್ನೋದು ಗೊತ್ತಾಯ್ತೋ ಸಹಜವಾಗೇ ಇಬ್ಬರ ಅಭಿಮಾನಿಗಳ ನಡುವೆಯೂ ಕಿರಿಕ್ ಶುರುವಾಯ್ತು.

ದರ್ಶನ್ ಬಣದ ಧನ್​ವೀರ್ ಜೊತೆ ಧ್ರುವ ಫ್ಯಾನ್ಸ್ ಕಿರಿಕ್ ಆಗಿತ್ತು,. ಈ ನಡುವೆ ತಮ್ಮ ಕುಟುಂಬದ ವಿಚಾರದಲ್ಲಿ ದರ್ಶನ್ ನಡೆದುಕೊಂಡ ರೀತಿ ಬಗ್ಗೆಯೂ ಧ್ರುವಗೆ ದರ್ಶನ್​ ಮೇಲೆ ಅಸಮಾಧಾನ ಇತ್ತು. ಕ್ರಮೇಣ ಧ್ರುವ ದರ್ಶನ್​ ಜೊತೆ ಮಾತನಾಡೋದನ್ನೇ ಬಿಟ್ಟುಬಿಟ್ಟಿದ್ರು.

ಇದನ್ನೂ ಓದಿ: ಕೇರಳ ಭೂಕುಸಿತ: ರಶ್ಮಿಕಾ ಮಂದಣ್ಣ ಸೇರಿ ಸಿನಿತಾರೆಯರಿಂದ ಆರ್ಥಿಕ ನೆರವು

ದರ್ಶನ್ ನಟನೆಯ ಡೆವಿಲ್ ಸಿನಿಮಾ ಡಿಸೆಂಬರ್​ಗೆ ರಿಲೀಸ್ ಅಂತ ಅನೌನ್ಸ್ ಆದ ಬೆನ್ನಲ್ಲೇ ಧ್ರುವ ನಟನೆಯ ಕೆಡಿ ಕೂಡ ಡಿಸೆಂಬರ್​ಗೆ ಬರಲಿಕ್ಕೆ ಸಜ್ಜಾಗಿತ್ತು. ಇದನ್ನ ನೋಡಿ ಈ ಸಾರಿ ಡಿ ಬಾಸ್ & ಡಿಎಸ್ ಬಾಸ್ ನಡುವೆ ಬಾಕ್ಸ್ ಆಫೀಸ್ ಫೈಟ್ ಫಿಕ್ಸ್ ಅಂತ ಫ್ಯಾನ್ಸ್ ಸಮರಕ್ಕೆ ಸಜ್ಜಾಗಿದ್ರು. ಆದ್ರೆ ಅಷ್ಟರಲ್ಲಿ ದರ್ಶನ್ ಕೊಲೆ ಕೇಸ್​​ನಲ್ಲಿ ಜೈಲು ಸೇರಿದ್ರು.

ಸದ್ಯದ ಸ್ಥಿತಿಯಲ್ಲಿ ಡೆವಿಲ್ ಅಂತೂ ಡಿಸೆಂಬರ್​ಗೆ ಬರೋದಿಲ್ಲ. ಸೋ ಡಿಸೆಂಬರ್​ ಏನಿದ್ರೂ ಧ್ರುವಗೆ ಅಂತ ಫಿಕ್ಸ್ ಆಗಿದೆ. ಈ ನಡುವೆ ಅದಕ್ಕೂ ಮುನ್ನ ಧ್ರುವ ನಟನೆಯ ಮಾರ್ಟಿನ್ ಕೂಡ ರಿಲೀಸ್​​ಗೆ ಸಜ್ಜಾಗಿದೆ. ಆದ್ರೆ ದರ್ಶನ್ ಅಭಿಮಾನಿಗಳು ಮಾತ್ರ ಧ್ರುವ ಮೇಲೆ ಕೊತ ಕೊತ ಕುದೀತಾ ಇದ್ದಾರೆ.

ದರ್ಶನ್ ಪ್ರಕರಣದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಸಲು ನಿರಾಕರಿಸಿದ್ದ ಧ್ರುವ ಇದು ಬೆಳವಣಿಗೆನಾ ಅಂತ ನಗೆಬೀರಿದ್ರು. ಅದೇ ಕ್ಲಿಪ್​ನ ಇಟ್ಕೊಂಡು ದರ್ಶನ್ ಫ್ಯಾನ್ಸ್ ಧ್ರುವ ಮೇಲೆ ಕೆಂಡವಾಗಿದ್ದಾರೆ. ಈ ನಡುವೆ ಚಿತ್ರದುರ್ಗದ ಮುರುಘಾಮಠಕ್ಕೆ ಧ್ರುವ ಭೇಟಿ ಕೊಟ್ಟ ವೇಳೆ ಅವರ ಕಾರಿಗೆ ಮುತ್ತಿಗೆ ಹಾಕಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಕೇಡಿ ಗ್ಯಾಂಗ್‌ನ ನಡುವೆಯೇ ನಡೀತಿದೆಯಾ ವಾರ್?

ಧ್ರುವ ಕಾರಿನ ಎದುರು ಬಾಸ್ ಬಾಸ್ ಡಿ ಬಾಸ್ ಅಂತ ಘೋಷಣೆ ಕೂಗಿದ್ದಾರೆ. ಬೇಕಂತಲೇ ಧ್ರುವಗೆ ಕಿರಿಕಿರಿ ಉಂಟು ಮಾಡಿದ್ದಾರೆ. ಆದ್ರೆ ಧ್ರುವ ಇವರನ್ನ ನಿರ್ಲಕ್ಷಿಸಿ ಇಲ್ಲಿಂದ ಹೊರಟು ಹೋಗಿದ್ದಾರೆ.

ದರ್ಶನ್ ಅಭಿಮಾನಿಗಳು ಈ ರೀತಿ ಬೇರೆ ನಟರಿಗೆ ಅಗೌರವ ತೋರೋದು ಹೊಸತೇನಲ್ಲ.. ಈ ಹಿಂದೆ ಜಗ್ಗೇಶ್​ರಂಥಾ ಹಿರಿಯ ನಟನಿಗೆ ಮುತ್ತಿಗೆ ಹಾಕಿ ಅವಮಾನ ಮಾಡಿದ್ರು ದರ್ಶನ್ ಅಭಿಮಾನಿಗಳು.

ಸದ್ಯ ದರ್ಶನ್ ಜೈಲಿನಲ್ಲಿದ್ದು ಪುಂಡಾಟ ಆಡೋ ಅಭಿಮಾನಿಗಳನ್ನ ಪೊಲೀಸರು ಬೆಂಡೆತ್ತಾ ಇದಾರೆ. ಆದ್ರೂ ಚಾನ್ಸ್ ಸಿಕ್ಕಾಗೆಲ್ಲಾ ಕೆಡಿ ಫ್ಯಾನ್ಸ್ ಇಂಥಾ ಕಿಡಿಗೇಡಿ ಕೆಲಸಗಳನ್ನ ಮಾಡ್ತಾನೇ ಇರ್ತಾರೆ.

ಫಿಲ್ಮ್ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES