Thursday, September 19, 2024

ಒಲಿಂಪಿಕ್ಸ್​ನ ಸ್ಟಾರ್​ ಮನು ಭಾಕರ್ ಬಳಿಗೆ ಹರಿದು ಬರ್ತಿದೆ ಹಣದ ಹೊಳೆ!

2024ರ ಪ್ಯಾರಿಸ್​ ಒಲಿಂಪಿಕ್ಸ್​ನ ಸ್ಟಾರ್ ಆಟಗಾರ್ತಿ ಮನು ಭಾಕರ್ ಅವರು ಅಮೋಘವಾದ ಸಾಧನೆ ಮಾಡಿದ್ದಾರೆ. ಈಗಾಗಲೇ 2 ಕಂಚಿನ ಮೆಡಲ್ ಗೆದ್ದು ಈಗ ಹ್ಯಾಟ್ರಿಕ್​ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಇದು ಹೀಗಿರುವಾಗಲೇ ಅವರ ಬಳಿಗೆ ಹಣದ ಹೊಳೆಯೇ ಹರಿದು ಬರುತ್ತಿದೆ.

ಇದನ್ನೂ ಓದಿ: Paris Olympics 2024: ಭಾರತದ ಪದಕ ಭೇಟೆ ಆರಂಭ, ಏರ್​ ಪಿಸ್ತೂಲ್​ ಶೂಟಿಂಗ್​ನಲ್ಲಿ ಮನು ಭಾಕರ್​ಗೆ ಕಂಚು

ಮನು ಭಾಕರ್​ ಅವರನ್ನು 40 ವಿವಿಧ ಬ್ರ್ಯಾಂಡ್​ ಕಂಪನಿಗಳು ಸಂಪರ್ಕಿಸಿವೆ ಎಂದು ಹೇಳಲಾಗುತ್ತಿದೆ. ಈ ಮೊದಲು ಮನು ಭಾಕರ್ ಅವರು ಕೇವಲ 20ರಿಂದ 25 ಲಕ್ಷ ರೂಪಾಯಿಗಳನ್ನು ಪಡೆದು ವಿವಿಧ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಇದು ಬದಲಾಗಿದೆ. ಒಲಿಂಪಿಕ್ಸ್​​ನಲ್ಲಿ ತಮ್ಮ ಸಾಧನೆ ಹೊರ ಹೊಮ್ಮುತ್ತಿದ್ದಂತೆ ಬರೋಬ್ಬರಿ 40 ವಿವಿಧ ಬ್ರ್ಯಾಂಡ್​ ಕಂಪನಿಗಳು ಮನು ಭಾಕರ್​​ಗೆ ಕೋಟಿ ಕೋಟಿ ಆಫರ್​ ನೀಡಲು ಮುಂದಾಗಿದೆ.

ತಮ್ಮ ಕಂಪನಿಯ ಜಾಹೀರಾತು ಮಾಡಿಕೊಡುವಂತೆ ಕೇಳಿಕೊಂಡು ಬಂದಿವೆ ಎನ್ನಲಾಗಿದೆ. ಇದರ ಜೊತೆಗೆ ಅವರ ಸಂಭಾವನೆ 20-25 ಲಕ್ಷದಿಂದ 1.5 ಕೋಟಿ ರೂಪಾಯಿವರೆಗೆ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES