Thursday, September 19, 2024

PSI ಹೃದಯಾಘಾತದಿಂದ ಸಾವು: ಸಾವಿನ ಸುತ್ತ ಅನುಮಾನ, ಸಂಘಟನೆಗಳಿಂದ ಪ್ರತಿಭಟನೆ

ಯಾದಗಿರಿ: ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ ಅವರು ನಿನ್ನೆ ಪೊಲೀಸ್ ಕ್ವಾರ್ಟರ್ಸ್‌ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಈ ಸಾವು ಅನುಮಾನ ಮೂಡಿಸಿದ್ದು, ಕುಟುಂಬಸ್ಥರನ್ನು ಶಾಕ್‌ಗೆ ದೂಡಿದೆ. ಪರಶುರಾಮ್‌ ಅವರ ಪತ್ನಿ ಗರ್ಭಿಣಿಯಾಗಿದ್ದು ತವರಿಗೆ ತೆರಳಿದ್ದವರು ಮರಳಿದ್ದಾರೆ. ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ ದಲಿತ ಸಂಘಟನೆಗಳು ಶಾಸಕರ ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ.

ಇದನ್ನೂ ಓದಿ: ರಾಮಕೃಷ್ಣ ಆಶ್ರಮದಲ್ಲಿ ಬಾಲಕನಿಗೆ 3 ದಿನ ಕತ್ತಲ ಕೋಣೆಯಲ್ಲಿಟ್ಟು ಚಿತ್ರಹಿಂಸೆ

ಪಿಎಸ್‌ಐ ಸಾವು- ಹೆದ್ದಾರಿ ತಡೆದು ಪ್ರತಿಭಟನೆ:

ಪಿಎಸ್ಐ ಪರಶುರಾಮ ಸಾವು ಪ್ರಕರಣ ಸಂಬಂಧ ಕಲಬುರಗಿ, ಯಾದಗಿರಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಮಾಡಲಾಗಿದೆ. ಯಿಮ್ಸ್ ಆಸ್ಪತ್ರೆ ಎದುರಿರುವ ರಾಷ್ಟ್ರೀಯ ಹೆದ್ದಾರಿ 150ಯನ್ನು ತಡೆದು ಪ್ರತಿಭಟನೆ ಮಾಡಿದ್ದಾರೆ. ಯಾದಗಿರಿಯ ವಿವಿಧ ಸಂಘಟನೆಗಳ ಒಕ್ಕೂಟಗಳು ಸೇರಿ ಪ್ರತಿಭಟನೆ ನಡೆಸಿವೆ. ಪ್ರತಿಭಟನೆ ಹಿನ್ನೆಲೆ ಕಿಲೋಮೀಟರ್​ಗೂ ಅಧಿಕ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ವು. ಪಿಎಸ್ಐ ಪರಶುರಾಮ ಪತ್ನಿ ಶ್ವೇತಾ, ಮಗ ಆರುಣ್, ಮಾವ, ತಂದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಕಾಂಗ್ರೆಸ್​​​ ಶಾಸಕ ಚನ್ನಾರೆಡ್ಡಿ ವಿರುದ್ಧ ದೂರು:

ಯಾದಗಿರಿಯಲ್ಲಿ ಪಿಎಸ್ಐ ಪರಶುರಾಮ ಸಾವು ಪ್ರಕರಣ ಸಂಬಂಧ ಯಾದಗಿರಿ ಶಾಸಕ ಚನ್ನಾರೆಡ್ಡಿ ಹಾಗೂ ಪುತ್ರನ ವಿರುದ್ಧ ದೂರು ದಾಖಲಾಗಿದೆ. ಶಾಸಕ ಚನ್ನಾರೆಡ್ಡಿ ಪಾಟೀಲ್ ಹಾಗೂ ಆತನ ಪುತ್ರ ಪಂಪನಗೌಡ ವಿರುದ್ಧ ಪರಶುರಾಮರ ಪತ್ನಿ ಶ್ವೇತಾ ದೂರು ನೀಡಿದ್ದಾರೆ. ಪೋಸ್ಟಿಂಗ್​ಗಾಗಿ ಪದೇ ಪದೆ ಹಣಕ್ಕೆ ಕಿರುಕುಳ ನೀಡ್ತಿದ್ದ ಆರೋಪ ಕೇಳಿ ಬಂದಿದೆ. ಶಾಸಕನ ಕಿರುಕುಳದಿಂದ ಪರಶುರಾಮ್​ ಮಾನಸಿಕ ಖಿನ್ನತೆಗೆ ಒಳಗಾಗಿದ್ರು ಎಂದು ಶ್ವೇತಾ ಆರೋಪಿಸಿದ್ದಾರೆ.

RELATED ARTICLES

Related Articles

TRENDING ARTICLES