Thursday, September 19, 2024

ವಿಜಯ್​ ಭಾರದ್ವಾಜ್​ಗೆ ಮರೆಯಲಾಗದ​ ರಣಜಿ ಟ್ರೋಫಿ​ ರೋಚಕ ಪಂದ್ಯ

ವಿಜಯ್ ಭಾರದ್ವಾಜ್! ಈ ಹೆಸರು ಕೇಳಿದಾಗ ಕಣ್ಮುಂದೆ ಬರುವುದು 90ರ ದಶಕ ಮುಗಿಯೋ ಕೊನೆ ವರ್ಷದ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ರಣಜಿ ಟ್ರೋಫಿ ಪಂದ್ಯಗಳಲ್ಲಿ ಅವರು ಬಾರಿಸುತ್ತಿದ್ದ ಶತಕಗಳು ಹಾಗೂ ಫೋಟೋಗಳು. ಈ ಟೂರ್ನಿಯಲ್ಲಿ ವಿಜಯ್ ಭಾರದ್ವಾಜ್ ಅವರ 90ರ ದಶಕದಲ್ಲಿ ಧೂಳೆಬ್ಬಿಸಿದ್ದ ಕರ್ನಾಟಕದ ಕ್ರಿಕೆಟ್ ಹೀರೋ ಆಗಿದ್ದರು.

ಇವರ ಅಡ್ಡ ಹೆಸರು ಪಿಂಗ ಅಂತ! 90ರ ದಶಕದಲ್ಲಿ ಕರ್ನಾಟಕದ 3 ರಣಜಿ ವಿಜಯಗಳ ವಿಜಯ ಶಿಲ್ಪಿಗಳಲ್ಲೊಬ್ಬರು ವಿಜಯ್ ಭಾರದ್ವಾಜ್. ಆ ಸಮಯದಲ್ಲಿ ದೇಶೀಯ ಕ್ರಿಕೆಟ್​ನಲ್ಲಿ ಅವರ ಹೆಸರು ದೊಡ್ಡದಾಗಿ ಸದ್ದು ಮಾಡಲು ಕಾರಣಗಳಿದ್ದವು. ಆಡಿದ ಮೂರು ರಣಜಿ ಫೈನಲ್​ಗಲ್ಲಿ 2 ಶತಕ, 2 ಅರ್ಧ ಶತಕಗಳನ್ನು ಬಾರಿಸಿದ್ದ ಔಟ್​ ಆ್ಯಂಡ್​​ ಔಟ್​ ಮ್ಯಾಚ್ ವಿನ್ನರ್ ಆಗಿದ್ದರು.

1996ರ ರಣಜಿ ಫೈನಲ್​ನಲ್ಲಿ 146 ರನ್ ಗಳಿಸಿದ್ದರು. 1998ರ ರಣಜಿ ಫೈನಲ್​ನಲ್ಲಿ 122 ರನ್, 1999ರ ರಣಜಿ ಫೈನಲ್​ನಲ್ಲಿ 86 ಮತ್ತು 75 ರನ್ ಗಳಿಸಿದಲ್ಲದೇ 7 ವಿಕೆಟ್ ಪಡೆದಿದ್ದರು. 1998-99ರ ರಣಜಿ ಟ್ರೋಫಿ ಟೂರ್ನಿಯಲ್ಲಿ ವಿಜಯ್ ಭಾರದ್ವಾಜ್ 1260 ರನ್​ಗಳನ್ನು ಗಳಿಸಿದ್ದರು. ಕರ್ನಾಟಕದ ಮಟ್ಚಿಗೆ ಈ ಸ್ಕೋರ್​ ಇವತ್ತಿಗೂ ದಾಖಲೆಯಾಗಿರುವುದು ವಿಶೇಷವಾಗಿದೆ.

ಇದನ್ನೂ ಓದಿ: ಗೆಳಯನೊಂದಿಗೆ ನೈಟ್​ ಔಟಿಂಗ್​ ಹೋಗಿದ್ದ ಈಜುಗಾರ್ತಿ: ಪ್ಯಾರಿಸ್​ ಒಲಿಂಪಿಕ್ಸ್​ನಿಂದ ಹೊರ ಹಾಕಿದ ಮುಖ್ಯಸ್ಥರು

ವಿಜಯ್ ಭಾರದ್ವಾಜ್ ಅವರು 1999ರ ರಣಜಿ ಫೈನಲ್​ನಲ್ಲಿ ಅವರೊಬ್ಬ ಸ್ಪಿನ್​ ಮಾಂತ್ರಿಕನಾಗಿ ಎದುರಳಿ ವಿರುದ್ಧ ಬೌಲಿಂಗ್​ ಮಾಡುತ್ತಿದ್ದ ಆ ಕಾಲಘಟ್ಟದ ಕ್ರಿಕೆಟ್​​ ಪ್ರೇಮಿಗಳ್ಯಾರು ಮರೆಯುವಂತಿಲ್ಲ. ರಣಜಿ ಫೈನಲ್​ಗಳಲ್ಲಿ ಅತ್ಯಂತ ರೋಚಕ 1999 ಮತ್ತು 2010ರ ಫೈನಲ್ಸ್. ಅದರಲ್ಲೂ 1999ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯವಿದೆಯಲ್ಲ, ಕ್ರಿಕೆಟ್​ನಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈ ಪಂದ್ಯ ಸಾಕ್ಷಿಯಾಗಿತ್ತು.

ಫೈನಲ್ ಪಂದ್ಯದಲ್ಲಿ 75 ರನ್​ಗಳ ಇನ್ನಿಂಗ್ಸ್ ಹಿನ್ನಡೆಗೊಳಗಾಗಿದ್ದ ಕರ್ನಾಟಕ 2ನೇ ಇನ್ನಿಂಗ್ಸ್​ನಲ್ಲಿ ಕೌಂಟರ್ ಅಟ್ಯಾಕ್​ಗೆ ಇಳಿದು ಬಿಟ್ಟಿತ್ತು. ಕರ್ನಾಟಕದ ಗೆಲುವಿಗೆ ಮುನ್ನುಡಿ ಬರೆದದ್ದು ಆರಂಭಿಕ ಬ್ಯಾಟ್ಸ್​​ಮನ್​ ಜೆ.ಅರುಣ್ ಕುಮಾರ್ ಅವರು ಅಮೋಘ 147 ರನ್​ಗಳು ಬಾರಿಸಿದರು. ರಣಜಿ ಟ್ರೋಫಿಗೆ ಮುತ್ತಿಡಲು ಕರ್ನಾಟಕ ಒಂದೇ ಒಂದು ವಿಕ್ಟರಿ ಮಾತ್ರ ಇತ್ತು.

ಮಧ್ಯಪ್ರದೇಶಕ್ಕೆ ಕೊನೆ ದಿನ 90 ಓವರ್​ಗಳಲ್ಲಿ 247 ರನ್​ ಟಾರ್ಗೆಟ್ ಇತ್ತು. ಗೆಲ್ಲುವುದಕ್ಕೆ ಮನಸ್ಸು ಮಾಡಿದ್ದರೆ ಟ್ರೋಪಿ ಎತ್ತುವುದು ಕಷ್ಟದ ವಿಷಯವಾಗಿರಲಿಲ್ಲ ಆದರೆ ಮಧ್ಯಪ್ರದೇಶ ಆಟಗಾರರು ಗೆಲುವಿನ ಬದಲು ಡ್ರಾ ಮಾಡಿಕೊಳ್ಳಲು ನಿರ್ಧರಿಸಿ ಬಿಟ್ಟಿದ್ದರು. ಮಧ್ಯಪ್ರದೇಶದವರ ಗೇಮ್ ಪ್ಲಾನ್​ಗೆ ತಕ್ಕಂತೆ ಪಂದ್ಯ ಸ್ಪಷ್ಟವಾಗಿ ಡ್ರಾ ದತ್ತ ಸಾಗುತ್ತಿದ್ದ ಸಮಯ. 66 ಓವರ್, 130/4. ಮುಂದಿನ 24 ಓವರ್​ಗಳನ್ನು ನಿಭಾಯಿಸಿದರೆ ರಣಜಿ ಟ್ರೋಫಿ ಮಧ್ಯಪ್ರದೇಶದ್ದು. 200ಕ್ಕೂ ಹೆಚ್ಚು ಎಸೆತಗಳನ್ನೆದುರಿಸಿದ್ದ ಅಬ್ಬಾಸ್ ಅಲಿ ನೆಲ ಕಚ್ಚಿ ಆಡುತ್ತಿದ್ದರು.

ಇದನ್ನೂ ಓದಿ: ಕೊಹ್ಲಿಯಂತ ದಿಗ್ಗಜ ಆಟಗಾರ ಮನೀಶ್ ಪಾಂಡೆಗೆ ಇದೇ ಕೊನೆಯ ಪ್ರಯಾಣವಾದರೂ ಅಚ್ಚರಿಯಲ್ಲ

ಆ ಸಮಯದಲ್ಲಿ ತಂಡ ನಾಯಕ ಸುನೀಲ್​ ಜೋಶಿ ಚೆಂಡನ್ನು ವಿಜಯ್ ಭಾರದ್ವಾಜ್ ಕೈಗೆ ನೀಡುತ್ತಾರೆ. ಅದಾಗಲೇ ದೇವೇಂದ್ರ ಬುಂದೇಲಾ ವಿಕೆಟ್ ಪಡೆದಿದ್ದ ವಿಜಯ್ ಭಾರದ್ವಾಜ್ ಅವರು ಪೆವಿಲಿಯನ್ ತುದಿಯಿಂದ ದಾಳಿಗಿಳಿಯುತ್ತಾರೆ ಅಷ್ಟೇ. ಮಧ್ಯಪ್ರದೇಶದ ಕೆಳಕ್ರಮಾಂಕದ ಆಟಗಾರರು ವಿಜಯ್ ಭಾರದ್ವಾಜ್​ ಅವರ ಆಫ್​ ಸ್ಪಿನ್ ದಾಳಿಗೆ ತರಗೆಲೆಗಳಂತೆ ಉದುರಿ ಹೋಗಿದ್ದರು. 4 ವಿಕೆಟ್​ಗೆ 130 ರನ್ ಗಳಿಸಿದ್ದ ಮಧ್ಯಪ್ರದೇಶ 150ಕ್ಕೆ ಆಲೌಟ್ ಆಗಿತ್ತು. ನಂಬಲಸಾಧ್ಯ ರೀತಿಯಲ್ಲಿ 96 ರನ್​ಗಳಿಂದ ಪಂದ್ಯ ಗೆದ್ದ ಕರ್ನಾಟಕ ರಣಜಿ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಬಿಟ್ಟಿತ್ತು. ಅಂದ ಹಾಗೆ ಆ ಇನ್ನಿಂಗ್ಸ್​ನಲ್ಲಿ ವಿಜಯ್ ಭಾರದ್ವಾಜ್ ಅವರ ಬೌಲಿಂಗ್ ವಿಭಾಗದಲ್ಲಿ ಪ್ರದರ್ಶನ 6/24.

ಕರ್ನಾಟಕ ಕ್ರಿಕೆಟ್ ಕಂಡ ಶ್ರೇಷ್ಠ ರಣಜಿ ಕ್ರಿಕೆಟಿಗರಲ್ಲಿ ವಿಜಯ್​ ಭಾರದ್ವಾಜ್​ ಅವರು ಕೂಡ ಒಬ್ಬರು. 90ರ ದಶಕದಲ್ಲಿ 3 ರಣಜಿ ಟ್ರೋಫಿ, 2 ಇರಾನಿ ಕಪ್ (1996, 1998) ಗೆದ್ದ ಕರ್ನಾಟಕ ತಂಡ ಬೆನ್ನೆಲುಬಾಗಿದ್ದವರು ವಿಜಯ್ ಭಾರದ್ವಾಜ್. ಭಾರತ ಪರ ಆಡಿದ್ದು ಕೆಲವೇ ಕೆಲ ಅಂತರಾಷ್ಟ್ರೀಯ ಪಂದ್ಯಗಳಾದರೂ ಆಡಿದ ಮೊದಲ ಸರಣಿಯಲ್ಲೇ ಮ್ಯಾನ್​ ಆಫ್​ ದಿ ಸೀರಿಸ್​​ ಪ್ರಶಸ್ತಿಗೆ ಭಾಜನರಾಗಿದ್ದರು.

RELATED ARTICLES

Related Articles

TRENDING ARTICLES