Thursday, September 19, 2024

ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಬಿಜೆಪಿ ಪಾದಯಾತ್ರೆಗೆ ನಮ್ಮ ಬೆಂಬಲ ಇಲ್ಲ: ಕೇಂದ್ರ ಸಚಿವ HDK

ನವದೆಹಲಿ: ನಮ್ಮ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಹಿನ್ನೆಲೆ ಮತ್ತು ನಮ್ಮ ಕುಟುಂಬಕ್ಕೆ ವಿಶ ಹಾಕಿದ ಪ್ರೀತಂ ಗೌಡನನ್ನು ಜೊತೆ ಸೇರಿಸಿಕೊಂಡ ಕಾರಣಕ್ಕೆ ಕಾಂಗ್ರೆಸ್​ ಭ್ರಷ್ಟಾಚಾರ ವಿರುದ್ದ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಗೆ ನಮ್ಮ ಬೆಂಬಲ ಕೊಡೋದಿಲ್ಲ, ಈ ಪಾದಯಾತ್ರೆಯಿಂದ ಹಿಂದೆ ಸರಿದ್ದಿದ್ದೇವೆ ಎಂದು ಕೇಂದ್ರ ಸಚಿವ ಹೆಚ್​​.ಡಿ ಕುಮಾರಸ್ವಾಮಿ ಅವರು ಕಿಡಿಕಾರಿದರು.

ದೆಹಲಿಯಲ್ಲಿ ಮಾದ್ಯದವರನ್ನುದ್ದೇಶಿಸಿ ಮಾತನಾಡಿದ ಅವರು, ಪಾದಯಾತ್ರೆಗೆ ಬಿಜೆಪಿ ಪಕ್ಷದವರು ಅದಾಗಲೇ ಪೂರ್ವಸಿದ್ದತೆಗಳ ಬಗ್ಗೆ ತೀರ್ಮಾನ ಮಾಡಿದ ಮೇಲೆ ನಮಗೆ ಮಾಹಿತಿ ನೀಡಬೇಕು ನೀಡಿದ್ದಾರೆ ಅಷ್ಟೆ, ನಮ್ಮ ಪಕ್ಷವನ್ನು ಯಾವುದೇ ಗಣನೆಗೆ ತೆಗೆದುಕೊಂಡಿಲ್ಲ. ಅವರ ಪಕ್ಷದ ನಿಲುವಿನಲ್ಲಿ ಅವರು ತೀರ್ಮಾನ ಮಾಡಿದ್ದಾರೆ. ನಾವು ಜನತೆಯ ಸಮಸ್ಯೆಯ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಮುಖಂಡರ ತೀರ್ಮಾನದಂತೆ ಇದು ಸೂಕ್ತ ಸಮಯವಲ್ಲ ಎಂದು ಈ ಪಾದಯಾತ್ರೆಯಿಂದ ಹಿಂದೆ ಸರಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕೇರಳ ಭೂಕುಸಿತ: ವಯನಾಡ್‌ಗೆ ಬಂದ ಪ.ಬಂಗಾಳ ರಾಜ್ಯಪಾಲ

ಮೈಸೂರಿನಿಂದ ಬೆಂಗಳೂರಿನ ವರೆಗೆ ನಮ್ಮ ಪಕ್ಷದ ಶಕ್ತಿ ಹೆಚ್ಚದೆ. ಅಷ್ಟೆಲ್ಲ ಇದ್ದಮೇಲೆ ನಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದ ಹಿನ್ನೆಲೆ ನಾವ್ಯಾಕೆ ಪಾದಯಾತ್ರೆಯಲ್ಲಿ ಭಾಗವಹಿಸಬೇಕು. ಇದು ನನ್ನ ಮನಸ್ಸಿಗೂ ನೋವಾಗಿದೆ.

ಈ ಕಾರ್ಯಕ್ರಮದಲ್ಲಿ ಆ ಭಾಗದ ಜನರ ಭಾವನೆಗಳು ಮುಖ್ಯ ನಮಗೆ, ಈಗಾಗಲೇ ಪ್ರಕೃತಿ ವಿಕೋಪದಿಂದ ಆಗುತ್ತಿರುವ ಅನಾಹುತಗಳ ನಡುವೆ ಯಾವುದೋ ಒಂದು ಪ್ರಕರಣವನ್ನಿಟ್ಟುಕೊಂಡು ನಾವು ಪಾದಯಾತ್ರೆ ಮಾಡಿದಾಗ ಜನಸಾಮಾನ್ಯರ ಮನಸ್ಸಿನಲ್ಲಿ ಬೇರೆ ಅರ್ಥ ಬರಬಾರದು, ಜನರ ನೋವಿಗೆ ಸ್ಪಂದಿಸಬೇಕಿದೆ ಇಂಥ ಸಂದರ್ಭಲ್ಲಿ ನಾವು 10 ದಿನಗಳ ಪಾದಯಾತ್ರೆ ಮಾಡಿದರೆ ಹೇಗೆ? ಎಂದರು.

ಹೂ ಈಸ್ ದಟ್ ಪ್ರೀತಮ್ ಗೌಡ:

ಚುನಾವಣೆಗಳಲ್ಲಿ ರಾಜಕಾರಣ ಮಾಡುವುದು ಬೇರೆ, ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡೋಕೆ ಹೋದವನನ್ನು ಸಭೆಗೆ ಕರೆದು ಕೂರಿಸಿಕೊಳ್ಳುತ್ತಾರೆ. ನನ್ನನ್ನು ಈ ಸಭೆಗೆ ಕರೆಯುತ್ತಾರೆ. ನನಗೂ ಸಹಿಸಿಕೊಳ್ಳೋದಕ್ಕೆ ಒಂದು ಇತಿಮಿತಿ ಇದೆ. ಯಾರು ಕಾರಣ ಈ ಪೆನ್​ಡ್ರೈವ್​ಗಳನ್ನು ಬೀದಿಯಲ್ಲಿ ಹಂಚಲಿಕ್ಕೆ? ತಂಥವನ ಜೊತೆ ಪಕ್ಕದಲ್ಲಿ ಕೂರಿಸಿಕೊಂಡು ಮೀಟಿಂಗ್ ಮಾಡ್ಲಿಕ್ಕೆ ಕರೀತಾರೆ. ಗೊತ್ತಿಲ್ವಾ ಅವರಿಗೆ ಏನೇನಾಗಿದೆ ಹಾಸನದಲ್ಲಿ ಅಂಥ? ಇದಕ್ಕೆಲ್ಲಾ ಕಾರಣ ಯಾರು ಅಂಥ ಗೊತ್ತಿಲ್ವಾ ಇವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES