Thursday, September 19, 2024

Paris Olympics ವೀಕ್ಷಣೆಗಾಗಿ 22 ಸಾವಿರ ಕಿ.ಮೀ ಸೈಕಲ್​ ತುಳಿದ ಕೇರಳದ ಸಾಹಸಿ

ಪ್ಯಾರಿಸ್: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾರ ಜಾವೆಲಿನ್ ಎಸೆತ ಸ್ಪರ್ಧೆಯನ್ನು ವೀಕ್ಷಿಸುವ ಸಲುವಾಗಿ ಕೇರಳದ ವ್ಯಕ್ತಿಯೋರ್ವ ಕಲ್ಲಿಕೋಟೆಯಿಂದ 22 ಸಾವಿರ ಕಿಲೋಮೀಟರ್ ದೂರದ ಪ್ಯಾರಿಸ್‌ವರೆಗೆ 2 ವರ್ಷಗಳಲ್ಲಿ ಸೈಕಲ್ ಮೂಲಕ ಪ್ರಯಾಣಿಸಿದ್ದಾರೆ.

ಎರಡು ವರ್ಷಗಳ ಸತತ ಸೈಕ್ಲಿಂಗ್​ ಮಾಡಿದ ವ್ಯಕ್ತಿ ಫಯಿಸ್ ಅಶ್ರಫ್​ ಅಲಿ, 2022ರ ಆಗಸ್ಟ್ 15ರಂದು ಸೈಕಲ್ ತುಳಿಯಲಾರಂಭಿಸಿದ ಫಯಿಸ್, 30 ದೇಶಗಳನ್ನು ಸುತ್ತಿ ಫ್ರಾನ್ಸ್ ತಲುಪಿದ್ದಾರೆ. 17 ದೇಶಗಳನ್ನು ಸುತ್ತಿನ ಕಳೆದ ವರ್ಷ ಆಗಸ್ಟ್ ನಲ್ಲಿ ಅವರು ಬುಡಾಪೆಸ್ಟ್ ತಲುಪಿದ್ದರು. ಆಗ ಅಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ ನೀರಜ್ ಚೋಪ್ರಾರನ್ನು ಭೇಟಿಯಾಗಿದ್ದರು. ಇದಕ್ಕೆ ಕೇರಳದ ಅಥ್ಲೆಟಿಕ್ಸ್ ಕೋಚ್ ಒಬ್ಬರೂ ನೆರವಾಗಿದ್ದರು.

ಇದನ್ನೂ ಓದಿ: ವಯನಾಡಿನಲ್ಲಿ ಗುಡ್ಡ ಕುಸಿತ, 21 ಮಂದಿ ಸಾವು

ಮೊದಲಿಗೆ 13 ಸಾವಿರ ರೂ. ಮೌಲ್ಯದ ಸೈಕಲ್‌ನಲ್ಲಿ ಪ್ರಯಾಣ ಆರಂಭಿಸಿದ್ದ ಅಶ್ರಫ್ ಅಲಿ, ಸಿಂಗಾಪುರ ತಲುಪಿದ ಬಳಿಕ 1 ಲಕ್ಷ ರೂ. ಮೌಲ್ಯದ ಸೈಕಲ್ ಖರೀದಿಸಿದ್ದರು. ಅಂತಿಮವಾಗಿ ಪ್ಯಾರಿಸ್‌ಗೆ ಪ್ರಯಾಣಿಸಲು ಅಶ್ರಫ್ ಅಲಿ 2.5 ಲಕ್ಷ ರೂ. ಮೌಲ್ಯದ ಅತ್ಯಾಧುನಿಕ ಸೈಕಲ್ ಖರೀದಿಸಿದ್ದರು. ಪ್ರತಿದಿನ ಸರಾಸರಿ 150 ಕಿಲೋಮೀಟರ್ ಪ್ರಯಾಣಿಸುತ್ತಿದ್ದರು. 4 ಜೊತೆ ಬಟ್ಟೆಯೊಂದಿಗೆ ಒಂದು ಟೆಂಟ್, ಮಲಗುವ ಬ್ಯಾಗ್ ಜತೆಗೆ ಸೈಕಲ್‌ನಲ್ಲಿ ಸುಮಾರು 50 ಕೆಜಿ ಭಾರದ ವಸ್ತುಗಳೊಂದಿಗೆ ಪ್ರಯಾಣಿಸಿದ್ದಾರೆ.

RELATED ARTICLES

Related Articles

TRENDING ARTICLES