Thursday, September 19, 2024

KAS ಅಧಿಕಾರಿ ಹಣೆಗೆ ಕುಂಕುಮ ಇಟ್ಟ ಕಾಂಗ್ರೆಸ್​ ಸಂಸದ: ಭಾರೀ ಚರ್ಚೆಗೆ ಗ್ರಾಸವಾಯ್ತು ಸುನೀಲ್ ಬೋಸ್ ನಡೆ

ಮೈಸೂರು: ಚಾಮರಾಜನಗರ ಸಂಸದ ಸುನೀಲ್​ ಬೋಸ್​ ಅವರು ಚಾಮುಂಡೇಶ್ವರಿ ದೇವಿ ಗರ್ಭಗುಡಿಯಲ್ಲಿ ಕೆಎಎಸ್ ಅಧಿಕಾರಿ ಸವಿತಾ ಹಣೆಗೆ ಕುಂಕುಮ ಇಟ್ಟಿದ್ದು ಭಾರಿ ಜರ್ಚೆಗೆ ಗ್ರಾಸವಾಗಿದೆ. ಮತ್ತು ಈ ಕುರಿತು ಚುನಾವಣಾಧಿಕಾರಿಗಳಿಗೆ ಬಿಜೆಪಿ ಮುಖಂಡರು ದೂರು ಸಲ್ಲಿಸಿದ್ದಾರೆ.

2024ನೇ ಸಾಲಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚಾಮರಾಜನಗರ ಕ್ಷೇತ್ರದ ಹಾಲಿ ಸಂಸದ ಸುನೀಲ್ ಬೋಸ್​ ಅವರು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದ ಅಫಿಡವಿಟ್​ನಲ್ಲಿ ತಮ್ಮ ಹೆಂಡತಿ ಮಕ್ಕಳು, ಆಸ್ತಿ ಪಾಸ್ತಿ ಯಾವುದರ ಬಗ್ಗೆಯೂ ಮಾಹಿತಿ ನೀಡಿಲ್ಲ, ಮತ್ತು​ ಪತ್ನಿ ಇದ್ದಾರ ಎಂಬ ಕಾಲಂ ನಲ್ಲಿ ಇಲ್ಲ ಎಂದು ನಮೂದಿಸಿದ್ದಾರೆ. ಆದರೇ, ಇದೀಗ ದೇವಾಲಯದಲ್ಲಿ ಎಲ್ಲರ ಸಮ್ಮುಖದಲ್ಲಿ ಕೆಎಎಸ್​ ಅಧಿಕಾರಿ ಸವಿತಾ ಹಣೆಗೆ ಹಿಂದು ಸಂಪ್ರದಾಯದಂತೆ ಹಣೆಗೆ ಕುಂಕುಮವನ್ನಿಟ್ಟಿದ್ದಾರೆ.

ಇದನ್ನೂ ಓದಿ: ಕಬಿನಿ, KRSಗೆ ನಾಳೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ

ಇನ್ನು ಕೆಎಎಸ್​ ಅಧಿಕಾರಿ ಸವಿತಾ ಅವರು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಷಾಢ ಮಾಸದ ಮೂರನೇ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಜೊತೆಯಾಗಿ ಬಂದಿದ್ದ ಇಬ್ಬರು ಗರ್ಭಗುಡಿಯಲ್ಲಿ ನಿಂತು ಪೂಜೆ ಸಲ್ಲಿಸಿದ್ದರು. ಬಳಿಕ ಪೂಜೆ ನೆರವೇರಿಸುವ ವೇಳೆ ಬೆಂಬಲಿಗರ ಸಮ್ಮುಖದಲ್ಲೇ ಸವಿತಾ ಹಣೆಗೆ ಕುಂಕುಮ ಇಟ್ಟಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸದ್ಯ ವೈರಲ್​ ಆಗುತ್ತಿದೆ. ಇದು ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.

ಸಂಸದ ಸುನೀಲ್​ ಬೋಸ್​ ಅವರು ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ತಮಗೆ ಮದುವೆ ಆಗಿಲ್ಲ ಎಂದು ಅಫಿಡೆವಿಟ್ ಸಲ್ಲಿಸಿದ್ದರು. ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ಚಾಮರಾಜನಗರ ಬಿಜೆಪಿ ಸದಸ್ಯರು ದೂರು ನೀಡಿದ್ದಾರೆ. ಈ ದೂರಿನ ಜೊತೆಗೆ ಸುನೀಲ್‌ಬೋಸ್, ಸವಿತಾರ ಪೋಟೋಗಳನ್ನು ನೀಡಿ ದೂರು ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES