ಹಾಸನ: ಬಹುಭಾಷ ನಟ ಡಾಲಿ ಧನಂಜಯ್ ಅವರ ಅಜ್ಜಿ ಇಂದು ಕೊನೆ ಉಸಿರೆಳಿದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಧನಂಜಯ್ ಅಜ್ಜಿ ಇಹಲೋಕ ತ್ಯಜಿಸಿದ್ದಾರೆ.
ಮಲ್ಲಮ್ಮ (95), ಮೃತರು. ಲಿಂಗದೇವರಾಜೇಗೌಡ ಪತ್ನಿ ಹಾಗು ನಟ ಡಾಲಿ ಧನಂಜಯ್ ಅವರ ತಂದೆ ಅಡವಿಸ್ವಾಮಿಯವರ ತಾಯಿ ಮಲ್ಲಮ್ಮ ವಯೋಸಹಜ ಕಾಯಿಲೆಯಿಂದ ಹಾಸನದ ಅರಸೀಕೆರೆ ಕಾಳೇನಹಳ್ಳಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ದರ್ಶನ್ ಅಭಿಮಾನಿಗಳಿಗೆ ಡಿಕೆಶಿ ಆಶ್ವಾಸನೆ: ಡಿಸಿಎಂ ಭೇಟಿಯಾದ ವಿಜಯಲಕ್ಷ್ಮಿ, ದಿನಕರ್ ಮತ್ತು ಪ್ರೇಮ್
ಲಿಂಗದೇವರಾಜೇಗೌಡ ಮತ್ತು ಮಲ್ಲಮ್ಮ ದಂಪತಿಗೆ 5 ಮಂದಿ ಮಕ್ಕಳಿದ್ದರು. ಎರಡನೇ ಮಗ ಅಡವಿಸ್ವಾಮಿಯವರ ಪುತ್ರ ನಟ ಡಾಲಿ ಧನಂಜಯ, ಮಲ್ಲಮ್ಮ ಪ್ರತಿಬಾರಿ ಚುನಾವಣಾ ಸಂದರ್ಭದಲ್ಲಿ ಡಾಲಿ ಧನಂಜಯ ಜೊತೆಯಲ್ಲಿಯೇ ತೆರಳಿ ಮತದಾನ ಮಾಡುತ್ತಿದ್ದರು.