ದೆಹಲಿ: ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಮನೋಜ್ ಸೋನಿ ಅವರು ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ರಾಜೀನಾಮೇ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಮನೋಜ್ ಸೋನಿಯವರ UPSC ಅಧ್ಯಕ್ಷ ಸ್ಥಾನ 2029ರ ವರೆಗೆ ಇತ್ತು. ಆದರೇ, ಅವಧಿಗೂ ಮುನ್ನವೇ ರಾಜೀನಾಮೆ ಸಲ್ಲಿಸಿದ್ದಾರೆ.
2017 ರಲ್ಲಿ ಮನೋಜ್ ಅವರು ಕೇಂದ್ರ ಲೋಕಸೇವಾ ಆಯೋಗ ಸೇರಿಕೊಂಡರು, ಮೇ16, 2023 ರಲ್ಲಿ ಅವರು UPSC ಅಧ್ಯಕ್ಷರನ್ನಾಗಿ ನೇಮಿಸಲಾಯಿತು, ಇವರ ಕಾಲಾವಧಿ 2029ರ ವರೆಗೂ ಇದ್ದೂ ಅವಧಿಗೂ ಮುನ್ನವೇ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಜೈನ ಧರ್ಮದವರ ಕ್ಷಮೆ ಕೇಳಿದ ಹಂಸಲೇಖ
ದೇಶಾದ್ಯಂತ UPSC ನೇಮಕಾತಿಯಲ್ಲಿ ನಕಲಿ ಅಂಕಪಟ್ಟಿ ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದ ಪೂಜಾ ಖೇಡ್ಕರ್ ಪ್ರಕರಣ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಸೋನಿ ರಾಜೀನಾಮೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ತಮ್ಮ ಅಧ್ಯಕ್ಷ ಸ್ಥಾನಕ್ಕೆ ಕಳೆದ ಒಂದು ತಿಂಗಳ ಮುಂಚೆಯೇ ಅವರು ರಾಜೀನಾಮೇಯನ್ನು ರಷ್ಟ್ರಪತಿಗಳಿಗೆ ಸಲ್ಲಿಸಿದ್ದರು ಎಂದು ಮೂಲಗಳು ತಿಳಿಸಿದೆ.
ಪ್ರಧಾನಿ ಮೋದಿಯವರಿಗೆ ಆತ್ಯಾಪ್ತರಾಗಿರುವ ಮನೋಜ್ ಸೋನಿ ಅವರನ್ನು ಮೋದಿ, ವಡೋದರಾದ ಎಂಎಸ್ ವಿಶ್ವವಿದ್ಯಾಲಯದ ಉಪಕುಲಪತಿಯನ್ನಾಗಿ 2005ರಲ್ಲಿ ಆಯ್ಕೆಮಾಡಿದ್ದರು. ದೇಶದ ಅತ್ಯಂತ ಕಿರಿಯ ಉಪಕುಲಪತಿ ಎನ್ನುವ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದರು.