Friday, September 20, 2024

ಮಾರ್ಟಿನ್ ಮೆಗಾಪ್ಲಾನ್: ಮುಂಬೈನಲ್ಲಿ ಇಂಟರ್​​ನ್ಯಾಷನಲ್ ಪ್ರೆಸ್​ಮೀಟ್

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ದಸರಾ ಹಬ್ಬಕ್ಕೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ನೂರೆಂಟು ವಿಘ್ನಗಳ ನಡುವೆಯೂ ಈ ನೂರು ಕೋಟಿ ಬಜೆಟ್​​ನ ಮೆಗಾ ಅದ್ಭುತವಾಗಿ ಸಜ್ಜಾಗಿದೆ. ಈ ಬಿಗ್ ಸಿನಿಮಾನ ಅಷ್ಟೇ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡೋದಕ್ಕೆ ನಿರ್ಮಾಪಕರು ಪ್ಕ್ಯಾನ್ ಮಾಡಿಕೊಂಡಿದ್ದಾರೆ. ಮಾರ್ಟಿನ್ ಟೀಂನ ಆ ಮೆಗಾಪ್ಲ್ಯಾನ್ ಬಗ್ಗೆ ಒಂದು ಎಕ್ಸ್​ಕ್ಲ್ಯೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಯೆಸ್, ಈ ವರ್ಷದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾಗಳ ಪೈಕಿ ಮಾರ್ಟಿನ್ ಅಗ್ರಸ್ಥಾನದಲ್ಲಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿರೋ ಈ ಸಿನಿಮಾ ನೂರು ಕೋಟಿಗೂ ಅಧಿಕ ಬಜೆಟ್​​ನಲ್ಲಿ ಅದ್ದೂರಿಯಾಗಿ ಮೂಡಿಬಂದಿದ್ದು ಚಿತ್ರದ ಅಂತಿಮ ಕೆಲಸಗಳು ಭರದಿಂದ ನಡೀತಿವೆ. ಅಕ್ಟೋಬರ್ 11ಕ್ಕೆ ದಸರಾ ಹೊತ್ತಲ್ಲಿ ಮಾರ್ಟಿನ್ ಜಾತ್ರೆ ಶುರುವಾಗಲಿದೆ.

ಹಲವು ಅಡೆತಡೆಗಳ ನಡುವೆವೂ ಇಷ್ಟು ದೊಡ್ಡ ಚಿತ್ರವನ್ನ ಧಿಟ್ಟವಾಗಿ ಮಾಡಿರೋ ನಿರ್ಮಾಪಕ ಉದಯ್ ಮೆಹತಾ ಇದೀಗ ಸಿನಿಮಾ ರಿಲೀಸ್​​ಗೆ ದೊಡ್ಡಮಟ್ಟದಲ್ಲಿ ಪ್ಲಾನ್ ಮಾಡಿಕೊಂಡಿದ್ದಾರೆ. ಇದೂವರೆಗೂ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದವರು ದೇಶದ ವಿವಿಧ ನಗರಗಳಲ್ಲಿ ಪ್ರೆಸ್ ಮೀಟ್ ಮಾಡಿ ಅಲ್ಲಿನ ಜನರನ್ನ ತಲುಪ್ತಾ ಇದ್ರು. ಆದ್ರೆ ಮಾರ್ಟಿನ್ ಟೀಂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮೊದಲ ಬಾರಿ ಇಂಟರ್​ನ್ಯಾಷನಲ್ ಪ್ರೆಸ್ ಮೀಟ್ ಮಾಡಲಿದೆ.

ಇದನ್ನೂ ಓದಿ: ಮಾರ್ಟಿನ್​ಗೆ​ 2.5ಕೋಟಿ ಗೋಲ್​ಮಾಲ್..?:100 ಕೋಟಿ ಬಜೆಟ್​​ನ ಬಿಗ್ ಸಿನಿಮಾಗೆ ನೂರೆಂಟು ವಿಘ್ನ

ಹೌದು.. ಇದೇ ಜುಲೈ 29ಕ್ಕೆ ಮುಂಬೈನಲ್ಲಿ ಮಾರ್ಟಿನ್ ಇಂಟರ್​​ನ್ಯಾಷನಲ್ ಪ್ರೆಸ್​ಮೀಟ್ ನಡೆಯಲಿದ್ದು 35 ರಿಂದ 40 ದೇಶಗಳ ಸಿನಿಮಾ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಜೊತೆಗೆ ನಮ್ಮ ದೇಶದ ನಾನಾ ಭಾಷೆಯ ಪತ್ರಕರ್ತರು ಹಾಜರಾಗಲಿದ್ದಾರೆ. ಇವೆರೆಲ್ಲರ ಸಮ್ಮುಖದಲ್ಲಿ ಮಾರ್ಟಿನ್ ಕಂಟೆಂಟ್ ರಿವೀಲ್ ಆಗಲಿದೆ.

ಮಾರ್ಟಿನ್ ಸಿನಿಮಾವನ್ನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದ್ದು, ವಿದೇಶಗಳಲ್ಲಿ ಬರುವ ಬೇಡಿಕೆಯನ್ನ ನೋಡಿಕೊಂಡು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡೋದಕ್ಕೆ ಪ್ಲ್ಯಾನ್ ಮಾಡಲಾಗಿದೆ. ಅರ್ಜುನ್ ಸರ್ಜಾ ಬರೆದಿರೋ ಈ ಕಥೆಯಲ್ಲಿ ಗ್ಲೋಬಲ್ ಎಲೆಮೆಂಟ್ಸ್ ಇದ್ದು ಚಿತ್ರ ವರ್ಲ್ಡ್​​ವೈಡ್ ಪ್ರೇಕ್ಷಕರನ್ನ ಗೆಲ್ಲುತ್ತೆ ಅನ್ನೋ ನಿರೀಕ್ಷೆ ಟೀಂಗಿದೆ.

ಹೌದು. ಇದೂವರೆಗೂ ಮಾರ್ಟಿನ್ ಟೀಸರ್​ ಬಿಟ್ರೆ ಇನ್ಯಾವ ಕಂಟೆಂಟ್ ಕೂಡ ರಿವೀಲ್ ಆಗಿಲ್ಲ. ಸೋ ಆಡಿಯನ್ಸ್ ಪೋಲ್ ಮಾಡಿ ಅವರು ಯಾವ ಕಂಟೆಂಟ್ ಕೇಳ್ತಾರೋ ಅದನ್ನ ಮುಂಬೈ ಇವೆಂಟ್​​ನಲ್ಲಿ ರಿಲೀಸ್ ಮಾಡಲಿದೆ ಚಿತ್ರತಂಡ. ಆ ಮೂಲಕ ಪ್ರೇಕ್ಷಕರನ್ನೂ ಪ್ರಚಾರದ ಭಾಗವಾಗಿ ಬಳಸೋಕೆ ಪ್ಲಾನ್ ಮಾಡಿದೆ.

ಒಟ್ಟಾರೆ ಒಂದು ಮೆಗಾ ಸಿನಿಮಾವನ್ನ ಮಾಡಿರೋ ಮಾರ್ಟಿನ್ ನಿರ್ಮಾಪಕರು ಚಿತ್ರದ ಬಿಡುಗಡೆಗೂ ಅಷ್ಟೇ ದೊಡ್ಡ ಮೆಗಾಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕೆಜಿಎಫ್​ನೂ ಮೀರಿಸುವಂತೆ ವಿಶ್ವದೆಲ್ಲೆಡೆ ಚಿತ್ರವನ್ನ ತಲುಪಿಸೋದಕ್ಕೆ ಸಜ್ಜಾಗಿದ್ದಾರೆ.

ಫಿಲ್ಮ್ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES