Friday, September 20, 2024

ಸಸ್ಪೆನ್ಸ್ ಥ್ರಿಲ್ಲರ್ ‘ನೈಸ್ ರೋಡ್’.. ಟ್ರೈಲರ್​ಗೆ ಸಿಕ್ತು ಭರ್ಜರಿ ರೆಸ್ಪಾನ್ಸ್

ಫಿಲ್ಮ್​ಡೆಸ್ಕ್​: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಖಾಸಗಿ ಸಂದರ್ಶನವೊಂದರಲ್ಲಿ ಕರ್ಮ ನಮ್ಮ ಬ್ಯಾಗೇಜ್. ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂದಿದ್ರು. ಆದ್ರೆ ಬೆಳ್ಳಿತೆರೆ ಬೆಳಗೋಕೆ ನೈಸ್​ ರೋಡ್ ಅನ್ನೋ ಸಿನಿಮಾವೊಂದು ಬರ್ತಿದೆ. ಅದರಲ್ಲಿ ಹೋದ ಜನ್ಮದ ಪಾಪಕ್ಕೆ ಈ ಜನ್ಮದಲ್ಲಿ ಶಿಕ್ಷೆ ಕೊಡೋ ಕಥಾನಕವಿದೆ. ಹಾಟೆಸ್ಟ್ ಬ್ಯೂಟಿ ಜ್ಯೋತಿ ರೈ ಜೊತೆ ಕರ್ಮದ ಕಥೆ ಹೇಳೋಕೆ ಬರ್ತಿರೋ ಧರ್ಮ ಕುರಿತ ಕಂಪ್ಲೀಟ್ ಕಹಾನಿ ಇಲ್ಲಿದೆ.

ಈ ಹಿಂದೆ ರಿಂಗ್ ರೋಡ್ ಶುಭ ಅನ್ನೋ ಕ್ರೈಂ ಥ್ರಿಲ್ಲರ್ ಸಿನಿಮಾ ಬಂದಿತ್ತು. ಆದ್ರೀಗ ನೈಸ್ ರೋಡ್ ಹೆಸರಲ್ಲಿ ಸಿನಿಮಾ ಬರ್ತಿದೆ. ಸ್ಯಾಂಪಲ್ಸ್​ನಿಂದ ಕುತೂಹಲ ಕೆರಳಿಸಿದ್ದ ನೈಸ್​ರೋಡ್ ಚಿತ್ರತಂಡ, ಇತ್ತೀಚೆಗೆ ಟ್ರೈಲರ್ ಲಾಂಚ್ ಮಾಡಿ, ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಯೆಸ್.. ಸಸ್ಪೆನ್ಸ್ ಥ್ರಿಲ್ಲರ್ ಜಾನರ್​ ನೈಸ್ ರೋಡ್ ಚಿತ್ರದ ಟ್ರೈಲರ್ ಇದಾಗಿದ್ದು, ಸಂಥಿಂಗ್ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಆಗಿದೆ.

ಇದೇ ಮೊದಲ ಬಾರಿಗೆ ನಾಯಕನಟನಾಗಿ ಧರ್ಮ ನಟಿಸಿದ್ದು, ಒನ್ಸ್ ಅಗೈನ್ ಇಲ್ಲಿ ಖಾಕಿ ಖದರ್ ತೋರಲಿದ್ದಾರೆ ಧರ್ಮ. ಕರ್ಮ ರಿಟರ್ನ್ಸ್ ಅನ್ನೋ ವಾಕ್ಯಕ್ಕೆ ನಿಜವಾದ ಅರ್ಥ ಕಲ್ಪಿಸಿರೋ ಈ ಟ್ರೈಲರ್​​ನಲ್ಲಿ ಹೋದ ಜನ್ಮದ ಪಾಪದ ಶಿಕ್ಷೆಯನ್ನ ಈ ಜನ್ಮದಲ್ಲಿ ನೀಡುವ ಕಥಾ ಹಂದರವನ್ನ ಕಾಣಬಹುದಾಗಿದೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರೋದು ಗೋಪಾಲ್ ಹಳೇಪಾಳ್ಯ. ನಿರ್ದೇಶಕರ ಚಾಕಚಕ್ಯತೆಗೆ ಈ ಟ್ರೈಲರ್ ಕೈಗನ್ನಡಿಯಂತಿದೆ.

ಇದನ್ನೂ ಓದಿ: ಸ್ವಾಮಿ PM ರಿಪೋರ್ಟ್​ ತಿರುಚೋ ಯತ್ನ ? ದರ್ಶನ್​ ಗ್ಯಾಂಗ್​ಗೆ ಗ್ರಿಲ್

ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರದಲ್ಲಿ ಖಡಕ್ ಪೊಲೀಸ್ ಕಾಪ್ ಆಗಿ ಧರ್ಮ ಮಿಂಚಲಿದ್ದು, ಇತ್ತೀಚೆಗೆ ಪ್ರಜ್ವಲ್ ರೇವಣ್ಣ ಕೇಸ್​​ನಲ್ಲಿ ಸದ್ದು ಮಾಡಿದ್ದ ಹಾಟೆಸ್ಟ್ ಬ್ಯೂಟಿ ಜ್ಯೋತಿ ರೈ ಕೂಡ ಮುಖ್ಯ ಭೂಮಿಕೆಯಲ್ಲಿರೋದು ವಿಶೇಷ. ಹಿರಿಯ ನಟಿ ಗಿರಿಜಾ ಲೋಕೇಶ್, ಕಾಮಿಡಿ ಕಿಲಾಡಿ ಗೋವಿಂದೇಗೌಡ, ರೇಣು ಶಿಖಾ, ಮಂಜುನಾಥ್ ರಂಗಾಯಣ, ಪ್ರಭು, ಸಚ್ಚಿ, ಮಂಜು ಕ್ರಿಶ್, ಸಹನಾ ಹೀಗೆ ದೊಡ್ಡ ತಾರಾಗಣ ಚಿತ್ರಕ್ಕಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿರೋ ನೈಸ್ ರೋಡ್ ಸಿನಿಮಾ ಟೆಕ್ನಿಕಲಿ ಸಖತ್ ಸೌಂಡಿಂಗ್ ಅನಿಸಿದೆ.

ಎನ್.ರಾಜು ಗೌಡ ಅರ್ಪಿಸುವ ಈ ಸಿನಿಮಾನ ಪುನರ್ಗೀತಾ ಸಿನಿಮಾಸ್ ಬ್ಯಾನರ್​​ನಡಿ ನಿರ್ದೇಶಕ ಗೋಪಾಲ್ ಹಳೇಪಾಳ್ಯ ಅವರೇ ನಿರ್ಮಾಣ ಕೂಡ ಮಾಡಿದ್ದಾರೆ. ಪ್ರವೀಣ್ ಶೆಟ್ಟಿ ಸಿನಿಮಾಟೋಗ್ರಫಿ, ಸತೀಶ್ ಆರ್ಯನ್ ಸಂಗೀತ, ಜೀವನ್ ಪ್ರಕಾಶ್ ಸಂಕಲನ, ರೋಷನ್ ದೇಸಾಯಿ ಅವ್ರ ಡಿಟಿಎಸ್ ಸಿನಿಮಾದ ತೂಕ ಹೆಚ್ಚಿಸಿದೆ. ಒಟ್ಟಾರೆ ಟ್ರೈಲರ್ ಮೂಲಕ ಪ್ರಮೋಷನ್ಸ್​ ಕಿಕ್​ಸ್ಟಾರ್ಟ್​ ಮಾಡಿರೋ ಚಿತ್ರತಂಡ, ಮುಂದಿನ ತಿಂಗಳು ಅಂದ್ರೆ ಆಗಸ್ಟ್​ನಲ್ಲಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES