Thursday, September 19, 2024

ಕಿಚ್ಚನ ಪ್ಯಾನ್ ಇಂಡಿಯಾ ಮ್ಯಾಕ್ಸಿಮಮ್ ದಂಡಯಾತ್ರೆ ಶುರು!: ಕಾಳಿ ಮುಂದೆ ಸ್ಟೆಪ್ಸ್​ಗೆ ಪ್ರೇಕ್ಷಕ ಸ್ಟನ್

ಫಿಲ್ಮ್​ಡೆಸ್ಕ್​: ದಿ ವೆಯ್ಟ್ ಈಸ್ ಓವರ್.. ಮ್ಯಾಕ್ಸ್​ನಲ್ಲಿ ಮಾಸ್ ಕಂಟೆಂಟ್ ಎಷ್ಟು ಮ್ಯಾಕ್ಸಿಮಮ್ ಇದೆ ಅನ್ನೋದಕ್ಕೆ ಈ ಲೇಟೆಸ್ಟ್ ಟೀಸರ್ ಉತ್ತರ ಕೊಡ್ತಿದೆ. ಬಾದ್​ಷಾ ಸುದೀಪ್ ನಟನಾ ಗತ್ತು, ಗಮ್ಮತ್ತಿನ ಜೊತೆಗೆ ಖಳನಾಯಕರ ಪಡೆ ರಿವೀಲ್ ಆಗಿದೆ. ಅದ್ರಲ್ಲೂ ಕಾಳಿ ಮುಂದೆ ಕಿಚ್ಚ ಸ್ಟೆಪ್ ಹಾಕೋ ಪರಿಗೆ ಎಲ್ರೂ ಸೈಕ್ ಆಗೋದು ಕನ್ಫರ್ಮ್​. ಹಾಗಾದ್ರೆ ಮ್ಯಾಕ್ಸ್ ದಂಡಯಾತ್ರೆ ಹೇಗಿದೆ ಅಂತೀರಾ..? ಇಲ್ಲಿದೆ ಮಾಹಿತಿ.

ಅಬ್ಬಬ್ಬಾ.. ಮ್ಯಾಕ್ಸ್ ಚಿತ್ರದ ಟೀಸರ್​ಗಳು ಒಂದಕ್ಕಿಂತ ಒಂದು ಇಂಟರೆಸ್ಟಿಂಗ್ ಅನಿಸಿವೆ. ಮಾಸ್ ಗಾಡ್ ಅವತಾರದಲ್ಲಿ ಕಿಚ್ಚನ ಖದರ್​ಗೆ ನೋಡುಗರು ಸುಸ್ತೋ ಸುಸ್ತು. ಯೆಸ್.. ಕನ್ನಡ, ತಮಿಳು ಜೊತೆ ಪಂಚಭಾಷೆಯಲ್ಲಿ ಪ್ಯಾನ್ ಇಂಡಿಯಾ ಕಮಾಲ್ ಮಾಡೋಕೆ ಬರ್ತಿರೋ ಮ್ಯಾಕ್ಸ್ ಚಿತ್ರದ ಮತ್ತೊಂದು ನಯಾ ಟೀಸರ್ ಹೊರಬಿದ್ದಿದೆ. ಈ ಹಿಂದಿನ ಎರಡು ಟೀಸರ್​ಗಳಿಗಿಂತ ಡೆಡ್ಲಿ & ಡೇರಿಂಗ್ ಆಗಿರೋ ಬಾದ್​ಷಾ ಸುದೀಪ್ ಮಾಸ್ ಮ್ಯಾಜಿಕ್​ಗೆ ಇಡೀ ಇಂಡಿಯಾ ಕ್ಲೀನ್ ಬೋಲ್ಡ್ ಆಗಿದೆ.

ಇದನ್ನೂ ಓದಿ: ಮಲಯಾಳಂ ಮನೋರಥಂಗಳ್‌ ಚಿತ್ರದ ಟ್ರೇಲರ್‌ ಬಿಡುಗಡೆ; ಒಂಭತ್ತು ಕಥೆಗಳಿಗೆ 8 ಜನ ನಿರ್ದೇಶಕರು

ಈ ಟೀಸರ್ ನೋಡಿದ್ರೆ ಮಾಸ್ ಜಾತ್ರೆ ಕಣ್ತುಂದೆ ಬರೋದು ಪಕ್ಕಾ. ಹೌದು.. ನಟನೆಯಿಂದಲೇ ಅಭಿನಯ ಚಕ್ರವರ್ತಿ ಆಗಿ ಬೆಳೆದು ನಿಂತಿರೋ ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್​ಗೆ ಈ ಸಿನಿಮಾ ಹೊಸತೊಂದು ಆಯಾಮ ತಂದುಕೊಡಲಿದೆ. ಒಬ್ಬನನ್ನ ಹಿಡಿಯೋಕೆ ಇಷ್ಟು ಜನ ಬೇಕಾ ಅನ್ನೋ ಡೈಲಾಗ್ ಈ ಹಿಂದಿನ ಟೀಸರ್​ನಲ್ಲಿತ್ತು. ಆದ್ರೆ ಈ ಬಾರಿಯ ದೃಶ್ಯ ತುಣುಕಿನಲ್ಲಿ ಖಳನಾಯಕರ ದಂಡು ರಿವೀಲ್ ಆಗಿದೆ.

ಒಬ್ಬರಲ್ಲ ಇಬ್ಬರಲ್ಲ ಸಾಲು ಸಾಲು ವಿಲನ್​​ಗಳು ಕಿಚ್ಚನ ಮುಂದೆ ಅಬ್ಬರಿಸಲಿದ್ದಾರೆ. ಪುಷ್ಪ ಖ್ಯಾತಿಯ ಸುನಿಲ್, ವರಲಕ್ಷ್ಮೀ ಶರತ್ ಕುಮಾರ್, ಶರತ್ ಲೋಹಿತಾಶ್ವ, ಬಾಹುಬಲಿ ಕಾಲಕೇಯ ಖ್ಯಾತಿಯ ಪ್ರಭಾಕರ್, ಪ್ರಮೋದ್ ಶೆಟ್ಟಿ ಹೀಗೆ ದೊಡ್ಡ ಖಳನಾಯಕರ ಪಟ್ಟಿ ಜೊತೆ ಅವರ ಲುಕ್ಸ್ ಕೂಡ ರಿವೀಲ್ ಆಗಿದೆ. ಬಾ ಬಾ ಬ್ಲ್ಯಾಕ್ ಶೀಪ್ ರೈಮ್ ಹೇಳ್ತಾ ಅಖಾಡಕ್ಕೆ ಇಳಿಯೋ ಕಿಚ್ಚನ ಕರಾಮತ್ತು ಸಖತ್ ಜೋರಿದೆ. ನೋಡುಗರ ನಾಡಿಮಿಡಿತ ಹೆಚ್ಚಿಸೋ ಒಂದೊಂದು ದೃಶ್ಯ ಕೂಡ ನೋಡುಗರಿಗೆ ಹಬ್ಬದಂತಿದೆ.

ವಿಜಯ್ ಕಾರ್ತಿಕೇಯ ನಿರ್ದೇಶನ ಹಾಗೂ ಕಲೈಪುಲಿ ಎಸ್.ಥಾನು ನಿರ್ಮಾಣದ ಮ್ಯಾಕ್ಸ್ ಸಿನಿಮಾ ಪ್ರೇಕ್ಷಕರಿಗೆ ಮ್ಯಾಕ್ಸಿಮಮ್ ಕಿಕ್ ಕೊಡಲಿದೆ. ಕಿಚ್ಚನ ಸ್ಟೈಲು, ಮ್ಯಾನರಿಸಂ ಜೊತೆಗೆ ಈ ಸಿನಿಮಾದಲ್ಲಿ ಒಂದು ಸ್ವ್ಯಾಗ್ ಇದೆ. ಟೀಸರ್​ನ ಕೊನೆಯಲ್ಲಿ ಕಾಳಿಯಂತೆ ಶತ್ರುಗಳನ್ನ ಚಂಡಾಡಿದ ಬಳಿಕ ಕಿಚ್ಚ ಅದೇ ಕಾಳಿಯ ಮುಂದೆ ಸ್ಟೆಪ್ ಹಾಕೋ ದೃಶ್ಯ ಶಿಳ್ಳೆ-ಚಪ್ಪಾಳೆ ಗಿಟ್ಟಿಸಲಿದೆ.

ಮೇಕಿಂಗ್​ನಿಂದಲೇ ಹಂಗಾಮ ಮಾಡ್ತಿರೋ ಮ್ಯಾಕ್ಸ್, ಶೇಖರ್ ಚಂದ್ರ ಸಿನಿಮಾಟೋಗ್ರಫಿ ಹಾಗೂ ಅಜನೀಶ್ ಲೋಕನಾಥ್​ರ ಬ್ಯಾಗ್ರೌಂಡ್ ಮ್ಯೂಸಿಕ್​ನಿಂದ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ವಿಕ್ರಾಂತ್ ರೋಣ ಬಳಿಕ ಕಿಚ್ಚ ಕೊಂಚ ಲೇಟ್ ಆದ್ರೂ ಲೇಟೆಸ್ಟ್ ಆಗಿ ಬಿಗ್​ಸ್ಕ್ರೀನ್​ಗೆ ಎಂಟ್ರಿ ಕೊಡ್ತಿದ್ದು, ಸದ್ಯದಲ್ಲೇ ಮ್ಯಾಕ್ಸ್ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.

ಒಂದ್ಕಡೆ ತಮ್ಮ ನಟ ಕೊಲೆ ಆರೋಪದಲ್ಲಿ ಜೈಲು ಸೇರಿದ್ರೂ ಸಹ ಕಲೆಗಾಗಿ ಒದ್ದಾಡ್ತಿರೋ ಕಿಚ್ಚನನ್ನ ಟ್ರೋಲ್ ಮಾಡಿಕೊಂಡು, ನೆಗೆಟೀವ್ ಪಬ್ಲಿಸಿಟಿ ಮಾಡ್ತಾ ವಿಕೃತ ಮೆರೆಯುತ್ತಿವೆ ಕೆಲ ಕೀಳು ಮನಸುಗಳು. ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಮ್ಯಾಕ್ಸಿಮಮ್ ಫೋಕಸ್ಡ್ ಆಗಿ ಇಟ್ಟ ಗುರಿಯತ್ತ ಮುನ್ನುಗ್ಗುತ್ತಿದ್ದಾರೆ ಬಾದ್​ಷಾ ಕಿಚ್ಚ ಸುದೀಪ್. ಒಟ್ಟಾರೆ ಈ ಟೀಸರ್ ಸುದೀಪಿಯನ್ಸ್​ಗೆ ಜಾತ್ರೆ ಫೀಲ್ ಕೊಡ್ತಿದೆ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES