ʼಕೆಜಿಎಫ್ʼ ಚಿತ್ರದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಇದೀಗ ಹೊಸ ಲುಕ್ನಲ್ಲಿ ರಾಕಿಭಾಯ್ ಪ್ರತ್ಯಕ್ಷವಾಗಿದ್ದಾರೆ. ಮುಂಬೈನಲ್ಲಿ ಕೆಜಿಎಫ್ ʻಕಿಂಗ್ʼ ರೌಂಡ್ಸ್ ಹಾಕುತ್ತಿದ್ದಾರೆ.
ರಾಕಿಭಾಯ್ ಹೇರ್ ಸ್ಟೈಲ್ ಬದಲಾಗಿದೆ. ರಾಮಾಯಣ ಸಿನಿಮಾಗಾ? ಟಾಕ್ಸಿಕ್ ಚಿತ್ರಕ್ಕಾ? ಈ ಲುಕ್ ಎಂಬ ಅನುಮಾನ ಫ್ಯಾನ್ಸ್ಗೆ ಮೂಡಿದೆ. ಯಶ್ ಹೊಸ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇದನ್ನು ಓದಿ; ಪಂಚಭೂತಗಳಲ್ಲಿ ಲೀನವಾದ ನಿರೂಪಕಿ ಅಪರ್ಣಾ
ಕೆಜಿಎಫ್ 2ʼ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ಸುಮಾರು ಒಂದೂವರೆ ವರ್ಷದ ಬಳಿಕ ಯಶ್ ಅಭಿನಯದ ʼಟಾಕ್ಸಿಕ್ʼ ಸಿನಿಮಾ ಘೋಷಣೆಯಾಗಿದೆ. ಮಲೆಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್ದಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇದೀಗ ಸಿನಿಮಾ ಕುರಿತು ಹೊಸ ಸಂಗತಿವೊಂದು ವೈರಲ್ ಆಗುತ್ತಿದೆ. ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಹೀರೋ ಆಗಿರವುದು ಬಿಟ್ಟರೆ ಬೇರೆ ಯಾರೆಲ್ಲಾ ಬಣ್ಣ ಹಚ್ಚಲಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಸದ್ಯ ಕೇಳಿಬಂದಿರುವ ಮಾಹಿತಿ ಪ್ರಕಾರ, ಲೇಡಿ ಸೂಪರ್ ಸ್ಟಾರ್ ನಯತಾರಾ ಅವರು ಈ ಸಿನಿಮಾದಲ್ಲಿ ಬಹುಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುವುದು ಕನ್ಫರ್ಮ್ ಆಗಿದೆ.