ಬೆಂಗಳೂರು; ರಾಬರ್ಟ್ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ತರುಣ್ ಸುಧೀರ್ ಮದುವೆ ವಿಚಾರ ಕೆಲದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸೋನಾಲ್ ಜೊತೆಗಿನ ಮದುವೆ ಬಗ್ಗೆ ಇದೀಗ ತರುಣ್ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ಸೋನಾಲ್ ಜೊತೆಗಿನ ಮದುವೆ ವಿಚಾರ ನಿಜ ಎಂದು ತರುಣ್ ಸುಧೀರ್ ಒಪ್ಪಿಕೊಂಡಿದ್ದಾರೆ. ಅತೀ ಶೀಘ್ರದಲ್ಲಿ ಸಿಹಿ ಸುದ್ದಿ ಹಂಚಿಕೊಳ್ತೀವಿ ಎಂದಿದ್ದಾರೆ. ಮದುವೆ ಬಗ್ಗೆ ಶೀಘ್ರದಲ್ಲಿ ತಿಳಿಸುತ್ತೇವೆ. ‘ರಾಬರ್ಟ್’ ಸಿನಿಮಾ ಸೆಟ್ನಲ್ಲಿ ಪರಿಚಯ ಆಗಿದ್ದು, ದರ್ಶನ್ ಸರ್ ತಮಾಷೆ ಮಾಡುತ್ತಿದ್ದರು ಎಂದ್ರು.
ಇದನ್ನು ಓದಿ; ಅಭಿಮಾನಿಗಳಿಗೆ ಧೈರ್ಯ ಹೇಳು ಅಂತ ದರ್ಶನ್ ಅಣ್ಣ ಹೇಳಿದ್ದಾರೆ- ಧನ್ವೀರ್
ಈ ವಿಚಾರ ಇವತ್ತಿನದ್ದಲ್ಲ.. ತುಂಬಾ ದಿನಗಳು ಆಯ್ತು.. ಮದುವೆ ಆಗ್ತಿರೋದು ನಿಜ.. ಆದ್ರೆ ಒಂದಷ್ಟು ದಿನಗಳ ಸಮಯ ಕೊಡಿ.. ಒಂದೊಳ್ಳೆ ವೇದಿಕೆಯಲ್ಲಿ ಅನೌನ್ಸ್ ಮಾಡೋಕೆ ಅಂತಾ ಕಾಯ್ತಿದೀವಿ.. ಮದುವೆ ದಿನಾಂಕದ ಬಗ್ಗೆ ಆದಷ್ಟು ಬೇಗ ತಿಳಿಸ್ತೀವಿ.. ಒಂದಷ್ಟು ಕೆಲಸಗಳು ಆಗ್ತಿವೆ ಅದೆಲ್ಲವನ್ನೂ ಅಧಿಕೃತವಾಗಿ ತಿಳಿಸ್ತೀನಿ ಎಂದಿದ್ದಾರೆ.
ಅಂದಹಾಗೆ, ಚೌಕ, ರಾಬರ್ಟ್, ಕಾಟೇರ ಸಿನಿಮಾದ ಸಕ್ಸಸ್ ನಂತರ ತರುಣ್ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಇದರ ನಡುವೆ ತರುಣ್ ಶೋವೊಂದರ ಜಡ್ಜ್ ಆಗಿದ್ದಾರೆ. ಎಂಎಲ್ಎ, ಮದುವೆ ದಿಬ್ಬಣ, ರಾಬರ್ಟ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸೋನಾಲ್ ನಟಿಸಿದ್ದಾರೆ.