ಬೆಂಗಳೂರು: ಪೊಲೀಸ್ ಠಾಣೆ ಪಕ್ಕದಲ್ಲೇ ಪುಂಡರು RX ಬೈಕ್ನಲ್ಲಿ ಭರ್ಜರಿ ವೀಲ್ಹಿಂಗ್ ನಡೆಸಿರುವ ಘಟನೆ ಆನೇಕಲ್ ತಾಲೂಕಿನ ಸರ್ಕಾಪುರದಲ್ಲಿ ನಡೆದಿದೆ.
ಕಳೆದವಾರ ಹೊಸೂರು ಮುಖ್ಯರಸ್ತೆಯಲ್ಲಿ ಪುಂಡರು ಬೈಕ್ ವೀಲ್ಹಿಂಗ್ ನಡೆಸಿ ಹೆದ್ದಾರಿಯಲ್ಲಿ ತೆರಳುತ್ತಿದ್ದ ಯುವತಿಗೆ ಯುವಕರು ಕಾಟ ಕೊಟ್ಟ ಬಗ್ಗೆ ಮಾದ್ಯಮಗಳಲ್ಲಿ ಸುದ್ದಿಗಳು ಪ್ರಸಾರವಾಗುತ್ತಿದ್ದಂತೆ ಪೊಲೀಸರು ಪುಂಡರನ್ನು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ದದ್ದಲ್ ನಿವಾಸಗಳ ಮೇಲೆ ED ದಾಳಿ
ಆದರೇ, ಇದೀಗ ಸರ್ಜಾಪುರ ಪೊಲೀಸ್ ಠಾಣೆ ಪಕ್ಕದಲ್ಲೇ ಯುವಕರು ವೀಲ್ಹಿಂಗ್ ಮಾಡುವ ಮೂಲಕ ಪುಂಡಾಟ ಮೆರೆದಿದ್ದಾರೆ. ವೀಲ್ಹಿಂಗ್ ಮಾಡುತ್ತಾ ಹೆದ್ದಾರಿಯಲ್ಲಿ ಸಾಗುತ್ತಿರುವ ಬೇರೆ ವಾಹನಗಳಿಗೆ ಫುಲ್ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಈ ದೃಶ್ಯಗಳು ಪ್ರಯಾಣಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ.