Tuesday, September 17, 2024

ಮೆಟ್ರೋ ಪ್ರಯಾಣಿಕರಿಗೆ BMRCLನಿಂದ ಗುಡ್ ನ್ಯೂಸ್

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್ ನೀಡಿದೆ. ಮೆಟ್ರೋ ಬಹು ನಿರೀಕ್ಷಿತ ಲೇನ್ ಉದ್ಘಾಟನೆ ಇನ್ನೂ ಹತ್ತಿರವಾಗಿದೆ. ಕಳೆದ‌ ಹದಿನೈದು ದಿನಗಳ ಹಿಂದೆ ಲೋಕೋ ಪೈಲಟ್ ಲೆಸ್ ರೈಲಿನ ಟ್ರಯಲ್ ರನ್ ಮಾಡಿದ್ದ BMRCL ಟ್ರಯಲ್ ರನ್ ಅನ್ನು ಯಶಸ್ವಿಯಾಗಿ ಪೂರೈಸಿದ ಬೆನ್ನಲ್ಲೇ ಸಿಗ್ನಲಿಂಗ್ ಟೆಸ್ಟ್ ಆರಂಭಿಸಿದೆ.

ಹಳದಿ ಮಾರ್ಗದಲ್ಲಿ ಈಗ ಟ್ರಯಲ್ ರನ್‌ ಮುಕ್ತಾಯಗೊಂಡಿದ್ದು ಸಿಗ್ನಲಿಂಗ್ ಟೆಸ್ಟ್ ಆರಂಭವಾಗಿದೆ. ಹೀಗಾಗಿ ಆದಷ್ಟು ಬೇಗ ಲೋಕೋ ಪೈಲಟ್ ಲೆಸ್ ರೈಲು ಸೇವೆಗೆ ಸಿದ್ಧವಾಗಲಿದೆ. BMRCL ಚೀನಾದ ಡ್ರೈವರ್ ಲೆಸ್ ಮೆಟ್ರೋ‌ ಮೂಲಕ ಸಿಗ್ನಲಿಂಗ್ ಟೆಸ್ಟ್ ನಡೆಸಿದೆ. ಮೆಟ್ರೋ ಅಧಿಕಾರಿಗಳು ಹಂತ ಹಂತವಾಗಿ ಸಿಗ್ನಲಿಂಗ್ ಟೆಸ್ಟ್ ಮಾಡಲಿದ್ದಾರೆ. ಎಲ್ಲಾ ರೀತಿಯ ಪರೀಕ್ಷೆಗಳು ಮುಗಿದ ನಂತರ ಸುರಕ್ಷತಾ ಪರೀಕ್ಷೆ ನಡೆಸಿ ವರದಿ ಸಲ್ಲಿಸಲಾಗುತ್ತೆ. ಕೇಂದ್ರ ರೇಲ್ವೆ ಸುರಕ್ಷಿತ ಅಧಿಕಾರಿಗಳ ಪರಿಶೀಲನೆ ನಂತರ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ನೀಡಲಾಗುತ್ತೆ. ಹಳದಿ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ಸ್ಟೇಷನ್​​ಗಳು ಇರಲಿವೆ.

ಇದನ್ನೂ ಓದಿ: ರಾಜ್ಯದ ಆರ್ಥಿಕ ಸ್ಥಿತಿ ಸರಿ ಇಲ್ಲವೆಂದು ಸಂಬಳ, ಭತ್ಯೆ ತ್ಯಜಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್

2019 ರಲ್ಲಿ, ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ 1,578 ಕೋಟಿ ರೂಪಾಯಿಯಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ಗೆ 216 ಕೋಚ್‌ಗಳನ್ನು ಪೂರೈಸಿತ್ತು.

ರೈಲು ಜೂನ್ 13ರ ಗುರುವಾರದಂದು ಬೊಮ್ಮಸಂದ್ರದಿಂದ ಮಧ್ಯಾಹ್ನ 12.43 ಕ್ಕೆ ಪ್ರಾಯೋಗಿಕ ರನ್‌ಗೆ ಹೊರಟಿತು ಮತ್ತು 14 ಮಧ್ಯಂತರ ನಿಲ್ದಾಣಗಳಲ್ಲಿ ತಲಾ ಎರಡು ನಿಮಿಷಗಳ ಕಾಲ ನಿಲ್ಲಿಸಿ ಆರ್‌ವಿ ರಸ್ತೆಗೆ ಬಂದಿದೆ. ಆರ್.ವಿ.ರಸ್ತೆಯಲ್ಲಿ ಅರ್ಧಗಂಟೆಯ ನಿಲುಗಡೆಯ ನಂತರ ರೈಲು ಬೊಮ್ಮಸಂದ್ರಕ್ಕೆ ವಾಪಸ್ ಹಿಂದಿರುಗಿದೆ. ಈ ಪ್ರಾಯೋಗಿಕ ಸಂಚಾರ ಪ್ರಕ್ರಿಯೆಯಲ್ಲಿ ಸಿಗ್ನಲಿಂಗ್ ಮತ್ತು ಟ್ರ್ಯಾಕ್ ಸ್ಥಿತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗಿದೆ.

RELATED ARTICLES

Related Articles

TRENDING ARTICLES