ಹಾವುಗಳೆಂದರೆ ಎಲ್ಲರಿಗೂ ಭಯಾನೇ, ಇದನ್ನು ನೋಡುವುದು ಬಿಡಿ, ಹಾವು ಎಂದರೆ ಸಾಕು ನಡುಕ ಶುರುವಾಗುತ್ತದೆ. ಇನ್ನು ನಮ್ಮ ಕಣ್ಣಿಗೆ ಬಿದ್ದರಂತೂ ಒಂದು ಕ್ಷಣವು ಅಲ್ಲಿ ನಿಲ್ಲುವುದೇ ಇಲ್ಲ ಬಿಡಿ.
ಈ ಮಳೆಗಾಲದಲ್ಲಿ ವಿಷಕಾರಿ ಹಾವುಗಳ ಉಪಟಳ ಹೆಚ್ಚು, ಈ ಋತುವಿನಲ್ಲಿ ಬೆಚ್ಚಗಿರುವ ತಾಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಮನೆಯ ಮೂಲೆ, ಶೂ ಹಾಗೂ ಬೈಕ್ ಸೇರಿದಂತೆ ಇನ್ನಿತ್ತರ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾರಣ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ.
ಇದನ್ನೂ ಓದಿ: ಮುಂದಿನ 2 ಗಂಟೆಗಳಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ಇಲ್ಲದಿದ್ದರೆ ಈ ಹಾವುಗಳಿಂದ ಪ್ರಾಣಕ್ಕೆ ಕುತ್ತು ಬರುವುದು ಖಂಡಿತ. ಇದೀಗ ಸ್ಕೂಟರಿನ ಪೆಟ್ರೋಲ್ ಟ್ಯಾಂಕ್ಗೆ ಸಣ್ಣ ಹೆಬ್ಬಾವೊಂದು ಸುತ್ತಿಕೊಂಡಿರುವ ವಿಡಿಯೋ ಮೈ ಜುಮ್ ಎನ್ನುವಂತಿದೆ.
ಸಾಲಿತ್ ಮುಲ್ಲಂಬತ್ ಎಂಬ ವ್ಯಕ್ತಿಯೂ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದ ಪ್ರಾರಂಭದಲ್ಲಿ ವ್ಯಕ್ತಿಯೊಬ್ಬರು, ಒಂದು ಕೋಲಿನಿಂದ ಸ್ಕೂಟರ್ ಸೀಟನ್ನು ತೆರೆದಿದ್ದಾರೆ. ಈ ವೇಳೆ ಸಣ್ಣ ಗಾತ್ರದ ಹೆಬ್ಬಾವೊಂದು ಪೆಟ್ರೋಲ್ ಟ್ಯಾಂಕ್ ಸುತ್ತ ಸುರುಳಿ ಸುತ್ತಿಕೊಂಡು ಮಲಗಿರುವುದು ಕಾಣಬಹುದು. ಈ ಹಾವು ಅಲ್ಲಿಗೆ ಹೇಗೆ ಹೋಯಿತು ಎನ್ನುವುದು ಮಾತ್ರ ತಿಳಿದಿಲ್ಲ. ಆದರೆ ವ್ಯಕ್ತಿಯೂ ಮಲಯಾಳಂ ಮಾತನಾಡುತ್ತಿರುವ ಕಾರಣ ಈ ಘಟನೆ ನಡೆದಿರುವುದು ಕೇರಳದ್ದು ಎನ್ನಲಾಗಿದೆ.