Friday, September 20, 2024

ದರ್ಶನ್​ ಇದ್ದ ಪೊಲೀಸ್​ ಠಾಣೆಗೆ ಶಾಮಿಯಾನ: ರಹಸ್ಯ ಬಯಲು

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್​, ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿರುವಾಗಲೇ ಠಾಣೆಯ ಸುತ್ತಲು ಶಾಮಿಯಾನ ಹಾಕಿದ್ದ ಕಾರಣಕ್ಕೆ ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಹಿಂದಿನ ನಿಜವಾದ ಕಾರಣ ರಿವೀಲ್ ಆಗಿದೆ.

ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಸಹಿತ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದ 15 ಮಂದಿ ಆರೋಪಿಗಳು ಅನ್ನಪೂರ್ಣೇಶ್ವರಿ ನಗರ ಪೊಲಿಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ನಿನ್ನೆ (ಗುರುವಾರ) ಏಕಾಏಕಿ ಪೊಲೀಸ್ ಠಾಣೆಯ ಆವರಣದ ಗೋಡೆಗೆ ಶಾಮಿಯಾನ ಹಾಕಲಾಗಿತ್ತು.

ಇದನ್ನೂ ಓದಿ: ದರ್ಶನ್‌ ಇರುವ ಪೊಲೀಸ್‌ ಠಾಣೆಗೆ ಶಾಮಿಯಾನ ಕವಚ: ಮುಖಂಡರಿಂದ ಆಕ್ರೋಶ

ಈ ಬೆನ್ನಲ್ಲೇ ಇದೀಗ ದರ್ಶನ್ & ಗ್ಯಾಂಗ್‍ಗೆ ವಿಐಪಿ ಟ್ರೀಟ್‍ಮೆಂಟ್ ಹಿಂದಿನ ಸೀಕ್ರೆಟ್ ಬಯಲಾಗಿದೆ. ಶಾಮಿಯಾನದ ಸೈಡ್ ವಾಲ್ ಹಾಕಿಸಿದ್ದು ನಟ ದರ್ಶನ್‍ಗಾಗಿಯೇ ಎಂಬುದು ಇದರ ಹಿಂದಿನ ಸತ್ಯವಾಗಿದೆ. ಪೊಲೀಸರ ಮುಂದೆ ದರ್ಶನ್ ಮನವಿ ಹಿನ್ನೆಲೆಯಲ್ಲಿ ಪೊಲೀಸರು ಈ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪೊಲೀಸರಲ್ಲಿ ದರ್ಶನ್​ ಮನವಿ:

ಸಾರ್ ನನಗೆ ಒಂದೇ ಕಡೆ ಕುಳಿತು ಇರಲು ಆಗುತ್ತಿಲ್ಲ. ನಾನು ವಾಕ್ ಮಾಡಬೇಕು ನನ್ನ ಕೈಲಿ ಆಗ್ತಿಲ್ಲ. ನಾನು ಬಾಡಿ ರಿಲ್ಯಾಕ್ಸ್ ಮಾಡಬೇಕು. ಸಿಗರೇಟ್ ಇಲ್ಲವಾದ್ರೆ ನನಗೆ ಕೈ ನಡುಗುತ್ತೆ. ನೀವು ಪದೇ ಪದೇ ಪ್ರಶ್ನೆ ಮಾಡುತ್ತಲೇ ಇದ್ದೀರಿ. ನಾನು ಎಷ್ಟು ಸಲ ಹೇಳಲಿ ನನಗೆ ಏನು ಗೊತ್ತಿಲ್ಲ ಅಂತಾ. ಪದೇ ಪದೇ ಅದೇ ಪ್ರಶ್ನೆ ಕೇಳ್ತೀರಿ ಎಂದು ಪೊಲೀಸರ ಮುಂದೆ ದರ್ಶನ್ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಠಾಣೆ ಒಳಗೆ ತಿರುಗಾಡಲು ಜಾಗ ಇಲ್ಲ ಅದಕ್ಕೆ ಸೈಡ್ ವಾಲ್ ಹಾಕಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.

RELATED ARTICLES

Related Articles

TRENDING ARTICLES