Friday, September 20, 2024

ಚಂದ್ರಬಾಬು ನಾಯ್ಡು ಷೇರುಗಳು​ ಐದೇ ದಿನದಲ್ಲಿ ಬರೋಬ್ಬರಿ 870 ಕೋಟಿ ಗಳಿಕೆ!

ಹೈದರಾಬಾದ್​: ಲೋಕಸಭೆ ಮತ್ತು ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಉತ್ತಮ ಪ್ರದರ್ಶನ ನೀಡಿದ ನಂತರ ಚಂದ್ರಬಾಬು ನಾಯ್ಡು ಅವರು ಸ್ಥಾಪಿಸಿದ ಕಂಪನಿಯು ಗಮನಾರ್ಹ ಲಾಭಗಳಿಸಿದೆ ಎಂದು ವರದಿಯಾಗಿದೆ.

ಹೆರಿಟೇಜ್ ಫುಡ್ಸ್‌ನ ಷೇರುಗಳು ಕಳೆದ ಐದು ದಿನಗಳಲ್ಲಿ ಶೇಕಡಾ 55 ರಷ್ಟು ಏರಿಕೆಯಾಗಿದ್ದು, ಕಂಪನಿಯ ಒಡೆತನ ಹೊಂದಿರುವ ಅವರ ಪತ್ನಿ ನಾರಾ ಭುವನೇಶ್ವರಿ ಅವರ ಆಸ್ತಿ ಮೌಲ್ಯ 535 ಕೋಟಿ ರು ಹಾಗೂ ಪುತ್ರ ಲೋಕೇಶ್ 237 ಕೋಟಿ ರು ಗಳಿಸಿದ್ದಾರೆ.

ಇದನ್ನೂ ಓದಿ: ನಾಳೆ ಸಂಜೆ 7.15ಕ್ಕೆ ಮೋದಿ ಪದಗ್ರಹಣ: ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ

ಚುನಾವಣಾ ಫಲಿತಾಂಶ ಪ್ರಕಟವಾಗುವ ಕೆಲವು ಗಂಟೆಗಳ ಮೊದಲು ಜೂನ್ 3 ರಂದು 424 ರೂ ಇದ್ದ ಹೆರಿಟೇಜ್ ಫುಡ್ಸ್ ಷೇರು ಬೆಲೆ ಇಂದು 661.25 ರೂ. ಗೆ ಏರಿಕೆಯಾಗಿದೆ. ಚಂದ್ರಬಾಬು ನಾಯ್ಡು ಅವರ ಪಕ್ಷವು ಐತಿಹಾಸಿಕ ಗೆಲುವು ದಾಖಲಿಸಿದ ಕಾರಣ ಚಂದ್ರಬಾಬು ನಾಯ್ಡು ಅವರ ಕುಟುಂಬದ ಒಡೆತನದ ಹೆರಿಟೇಜ್ ಫುಡ್ಸ್‌ ಕಂಪನಿಯ ಷೇರುಗಳ ಮೌಲ್ಯವು ಚುನಾವಣೆ ಫಲಿತಾಂಶದ ಬಳಿಕ ಗಣನೀಯವಾಗಿ ಏರಿಕೆಯಾಗಿದೆ.

ಇದರಿಂದಾಗಿ ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರು ಕಳೆದ 5 ದಿನಗಳಲ್ಲಿಯೇ 870 ಕೋಟಿ ರೂ. ಗಳಿಸಿದ್ದಾರೆ. ಇದರೊಂದಿಗೆ ಚಂದ್ರಬಾಬು ನಾಯ್ಡು ಅವರ ಕುಟುಂಬದ ಒಟ್ಟು ಆಸ್ತಿಯ ಮೌಲ್ಯುವ 1,319 ಕೋಟಿ ರೂ.ನಿಂದ 2,190 ಕೋಟಿ ರೂ.ಗೆ ಏರಿಕೆಯಾಗಿದೆ.

RELATED ARTICLES

Related Articles

TRENDING ARTICLES