ಆಂದ್ರಪ್ರದೇಶ: ನಾಲ್ಕನೆ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಮಾಜಿ ಮುಖ್ಯಮಂತ್ರಿ ನಾ.ರಾ ಚಂದ್ರಬಾಬು ನಾಯ್ಡು ಅವರು ಗದ್ದುಗೆ ಏರಲಿದ್ದಾರೆ. ಇದೇ ಜೂನ್ 9 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆ ಜೊತೆಗೆ ಲೋಕಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು ಆಡಳಿತ ಪಕ್ಷ ವೈಎಸ್ಆರ್ ಕಾಂಗ್ರೆಸ್ ವಿರುದ್ದ ಎನ್ಡಿಎ ಮೈತ್ರಿ ಕೂಟ (TDP, JSP, BJP) ಪಕ್ಷಗಳು ಸೇರಿ 160ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಜರಭೇರಿ ಸಾಧಿಸಿದೆ. ಈ ಹಿನ್ನೆಲೆ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ಇದೇ ಜೂನ್ 9ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೆ ಬಾರಿಗೆ ಗದ್ದುಗೆಗೆ ಏರಲಿದ್ದಾರೆ.
ಇದನ್ನೂ ಓದಿ: Loksabha Election Result 2024: ರಾಜ್ಯದ ಮೂವರು ಮಾಜಿ ಸಿಎಂಗಳಿಗೆ ಭರ್ಜರಿ ಗೆಲುವು
ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮತ್ತು ಇಂಡಿಯಾ ಕೂಟಗಳು ಕೇಂದ್ರದಲ್ಲಿ ಅಧಿಕಾರಕ್ಕೇರಲು ಸಂಖ್ಯಾಬಲದ ಅವಶ್ಯಕತೆ ಇರುವ ಹಿನ್ನೆಲೆ ಮಿತ್ರಪಕ್ಷಗಳ ಜೊತೆ ಲಾಭಿ ನಡೆಸಲು ಮುಂದಾಗಿದೆ. ಈ ನಡುವೆ ಆಂಧ್ರದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮನೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಭೇಟಿ ನೀಡುತ್ತಿದ್ದು ತಮಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ.