ಮಂಗಳೂರು: ಗಡಿನಾಡು ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಸದ್ದು ಕೇಳಿಬಂದಿದೆ. ಮುಸ್ಲಿಂ ಲೀಗ್ ನಾಯಕರೊಬ್ಬರು ಲವ್ ಜಿಹಾದ್ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಾಸರಗೋಡಿನ ವಿಎಚ್ಪಿ ಸೇರಿ ಹಿಂದೂ ಪರ ಸಂಘಟನೆಗಳು ಅರೋಪಿಸಿವೆ.
ಜಿಲ್ಲೆಯ ಬದಿಯಡ್ಕದಲ್ಲಿ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಹಿಂದೂ ಪರ ಸಂಘಟನೆಗಳು ಈ ಆರೋಪ ಮಾಡಿವೆ. ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಅನ್ಯಮತೀಯ ಯುವಕನ ಜೊತೆ ಠಾಣೆಗೆ ಹಾಜರಾಗಿದ್ದಾರೆ. ಮಿರ್ಶಾದ್ ಎಂಬಾತನ ಜೊತೆ ತೆರಳಿದ ಯುವತಿ ಠಾಣೆಗೆ ಹಾಜರಾಗಿದ್ದಾರೆ. ಈಕೆ ಕಾಸರಗೋಡಿನ ಖಾಸಗಿ ಸಂಸ್ಥೆಯೊಂದರ ಶಿಕ್ಷಕಿಯಾಗಿದ್ದಾರೆ. ಆಕೆಯನ್ನು ಪೊಲೀಸರು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಆಕೆ ಸ್ವಇಚ್ಛೆಯಂತೆ ಯುವಕನ ಜೊತೆ ತೆರಳಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಖಾತೆಗೆ ಒಂದು ಲಕ್ಷ: ಪೋಸ್ಟ್ ಆಫೀಸ್ ಅಕೌಂಟ್ ತೆರೆಯಲು ಮುಗಿಬಿದ್ದ ಜನ
ಯುವತಿಯ ತಂದೆಯ ದೂರಿನಂತೆ ಬದಿಯಡ್ಕ ಪೊಲೀಸರು ನಾಪತ್ತೆ ಕೇಸು ದಾಖಲಿಸಿದ್ದರು. ಮೇ 23ರಂದು ಮನೆಯಿಂದ ಹೊರಟ ಯುವತಿ ದಿಢೀರ್ ನಾಪತ್ತೆಯಾಗಿದ್ದರು. ಆ ಬಳಿಕ ಬದಿಯಡ್ಕ ರಿಜಿಸ್ಟ್ರಾರ್ ಕಚೇರಿ ಬೋರ್ಡ್ನಲ್ಲಿ ಇಬ್ಬರ ಭಾವಚಿತ್ರಗಳ ಸಹಿತ ನೋಟೀಸ್ ಪತ್ತೆಯಾಗಿತ್ತು. ರಿಜಿಸ್ಟರ್ ಕಚೇರಿಯಲ್ಲಿ ಯುವತಿ ಮತ್ತು ಮಿರ್ಶಾದ್ ಮದುವೆಯಾಗಿರುವುದು ತಿಳಿದುಬಂದಿತ್ತು. ಮದುವೆಯಾದ ನಂತರ ಮೇ 27ರಂದು ಬದಿಯಡ್ಕ ಠಾಣೆಗೆ ಜೋಡಿ ಹಾಜರಾಗಿತ್ತು. ಲವ್ ಜಿಹಾದ್ಗೆ ಬದಿಯಡ್ಕ ಪೊಲೀಸರು ಸಾಥ್ ನೀಡುತ್ತಿದ್ದಾರೆ ಎಂದು ವಿಎಚ್ಪಿ ಆಕ್ರೋಶ ವ್ಯಕ್ತಪಡಿಸಿದೆ.