ಬೆಂಗಳೂರು : 2024ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಶ್ರೇಯಸ್ ಅಯ್ಯರ್ ಸಾರಥ್ಯದ ಕೊಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು. 10 ವರ್ಷಗಳ ಬಳಿಕ ಮತ್ತೆ ಕೆಕೆಆರ್ ಚಾಂಪಿಯನ್ ಪಟ್ಟಕ್ಕೇರಿತು.
ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಈ ಹಿಂದೆ 2012 ಹಾಗೂ 2014ರಲ್ಲಿ ಚಾಂಪಿಯನ್ ಟ್ರೋಫಿ ಗೆದ್ದಿತ್ತು. ಇನ್ನೂ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಲಾ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿವೆ.
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಿತು. ಟಾಸ್ ಗೆದ್ದಿದ್ದನ್ನು ಬಿಟ್ಟರೆ, ಹೈದರಾಬಾದ್ ಗೆಲುವಿಗಾಗಿ ದಿಟ್ಟ ಹೋರಾಟ ನಡೆಸಲಿಲ್ಲ. ಸ್ಫೋಟಕ ಬ್ಯಾಟರ್ಗಳೆಲ್ಲರೂ ವಿಫಲರಾದರು. ಹೀಗಾಗಿ, ಹೈದರಾಬಾದ್ ತಂಡ ಕೆಕೆಆರ್ಗೆ 114 ರನ್ಗಳ ಸುಲಭ ಟಾರ್ಗೆಟ್ ನೀಡಿತ್ತು. ಇದನ್ನು ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ 10.3 ಓವರ್ಗಳಲ್ಲಿ ಗುರಿ ತಲುಪಿತು.
ಕೊಲ್ಕತ್ತಾ ನೈಟ್ ರೈಡರ್ಸ್ ಪರ ರಹಮಾನುಲ್ಲಾ ಗುರ್ಬಾಜ್ 39, ಸುನಿಲ್ ನರೈನ್ 6, ವೆಂಕಟೇಶ್ ಅಯ್ಯರ್ ಅಜೇಯ 52 ಹಾಗೂ ನಾಯಕ ಶ್ರೇಯಸ್ ಅಯ್ಯರ್ 6 ರನ್ ಗಳಿಸಿದರು. ಹೈದರಾಬಾದ್ ಪರ ನಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ ಶಹಬಾಜ್ ಅಹಮದ್ ತಲಾ ಒಂದು ವಿಕೆಟ್ ಪಡೆದರು.
That winning feeling 💜
Scorecard ▶️ https://t.co/lCK6AJCdH9#TATAIPL | #KKRvSRH | #Final | #TheFinalCall pic.twitter.com/MgGqD2ewqz
— IndianPremierLeague (@IPL) May 26, 2024