ಬೆಂಗಳೂರು : ಮಿಚೆಲ್ ಸ್ಟಾರ್ಕ್ ಬೆಂಕಿ ಬೌಲಿಂಗ್. ಅಭಿಷೇಕ್ ಶರ್ಮಾ ಕ್ಲೀನ್ ಬೌಲ್ಡ್. ಟ್ರಾವಿಸ್ ಹೆಡ್ ಗೋಲ್ಡನ್ ಡಕ್. ಕೆಕೆಆರ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ಗೆ ಆರಂಭಿಕ ಆಘಾತವಾಗಿದೆ.
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಐಪಿಎಲ್ 17ನೇ ಸೀಸನ್ನ ಫೈನಲ್ ಪಂದ್ಯ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದೆ.
ಹೈದರಾಬಾದ್ ಪರ ಟ್ರಾವಿಸ್ ಹೆಡ್ ಹಾಗೂ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರು. ಕೆಕೆಆರ್ ಪರ ಮಿಚೆಲ್ ಸ್ಟಾರ್ಕ್ ಮೊದಲ ಓವರ್ ಬೌಲ್ ಮಾಡಿದರು.
ಮೊದಲ ಮೂರು ಬಾಲ್ಗಳಲ್ಲಿ ಹೈದರಾಬಾದ್ ಯಾವುದೇ ರನ್ ಗಳಿಸಲಿಲ್ಲ. ನಾಲ್ಕನೇ ಎಸೆತದಲ್ಲಿ ಅಭಿಷೇಕ್ ಶರ್ಮಾ ಎರಡು ರನ್ ಗಳಿಸಿದರು. ಬಳಿಕ, ಮಿಚೆಲ್ ಸ್ಟಾರ್ಕ್ ಎಸೆದ ಐದನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಕೋಟಿ ವೀರ ಮಿಚೆಲ್ ಸ್ಟಾರ್ಕ್ ತನ್ನ ಸಾಮರ್ಥ್ಯ ಏನು ಎಂಬುವುದನ್ನು ತಿಳಿಸಿಕೊಟ್ಟರು.
ಅಭಿಷೇಕ್ ಬಳಿಕ ರಾಹುಲ್ ತ್ರಿಪಾಠಿ ಕ್ರೀಸ್ಗೆ ಆಗಮಿಸಿದರು. ವೈಭವ್ ಅರೋರಾ ಎರಡನೇ ಓವರ್ ಬೌಲ್ ಮಾಡಿದರು. ಈ ಓವರ್ನ 6ನೇ ಎಸೆತದಲ್ಲಿ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ವಿಕೆಟ್ ಕೀಪರ್ ರಹಮಾನುಲ್ಲಾ ಗುರ್ಬಾಜ್ ಅವರಿಗೆ ಕ್ಯಾಚ್ ನೀಡಿದರು. ಹೆಡ್ ತಾನು ಎದುರಿಸಿದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆದರು.
ಪ್ರಸ್ತುತ ರಾಹುಲ್ ತ್ರಿಪಾಠಿ ಹಾಗೂ ಏಡೆನ್ ಮಾರ್ಕ್ರಾಮ್ ಕ್ರೀಸ್ನಲ್ಲಿದ್ದಾರೆ. ಹೈದರಾಬಾದ್ 3 ಓವರ್ಗಳಲ್ಲಿ ಎರಡು ಪ್ರಮುಖ ವಿಕೆಟ್ ಕಳೆದುಕೋಂಡು 18 ರನ್ ಗಳಿಸಿದೆ.
MITCHELL STARC – BORN FOR BIG MOMENTS.
– The Greatest of Modern Era. 🥶 pic.twitter.com/GaLlUVfuDM
— Johns. (@CricCrazyJohns) May 26, 2024