ಬೆಂಗಳೂರು : ಇಂದು ಕೆಕೆಆರ್ ಸ್ಟಾರ್ ಆಲ್ರೌಂಡರ್ ಸುನಿಲ್ ನರೈನ್ ಅವರ ಹುಟ್ಟುಹಬ್ಬ. ಅವರ ಜನ್ಮದಿನದಂದೇ ಐಪಿಎಲ್-2024ರ ಫೈನಲ್ ಪಂದ್ಯ ನಡೆಯುತ್ತಿದೆ.
ಸುನಿಲ್ ನರೈನ್ ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಲಿ. ಆ ಮೂಲಕ ಕೆಕೆಆರ್ ಟ್ರೋಫಿ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಈ ಬಾರಿಯ ಆವೃತ್ತಿಯಲ್ಲಿ ಸುನಿಲ್ ನರೈನ್ ಅದ್ಭುತ ಫಾರ್ಮ್ನಲ್ಲಿದ್ದಾರೆ. 13 ಪಂದ್ಯಗಳನ್ನು ಆಡಿರುವ ಅವರು, 482 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕವೂ ಇರುವುದು ಗಮನಾರ್ಹ. ಮತ್ತೊಂದೆಡೆ, ಬೌಲಿಂಗ್ನಲ್ಲೂ 16 ವಿಕೆಟ್ ಕಬಳಿಸಿದ್ದಾರೆ.
ಕೆಕೆಆರ್ ಚಾಂಪಿಯನ್ ಎಂದ ಹೇಡನ್
ಈ ವರ್ಷ ಕೆಕೆಆರ್ ಐಪಿಎಲ್ ಚಾಂಪಿಯನ್ ಆಗಲಿದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ. ಅದಕ್ಕೆ ಕಾರಣ ಕೆಕೆಆರ್ ಇಂದಿನ ಫೈನಲ್ ಪಂದ್ಯಕ್ಕೂ ಮುನ್ನ ಮೂರು ದಿನ ವಿಶ್ರಾಂತಿ ಪಡೆದಿದ್ದರು. ಈ ಹಂತದಲ್ಲಿ ಕೆಕೆಆರ್, ಹೈದರಾಬಾದ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಮೇಲೆ ಕೇಂದ್ರೀಕರಿಸಿದೆ.
ಚಾಂಪಿಯನ್ ಪಟ್ಟ ಯಾರಿಗೆ?
ಕ್ವಾಲಿಫೈಯರ್ -1ರಲ್ಲಿ ಹೈದರಾಬಾದ್ ತಂಡವನ್ನು ಸೋಲಿಸಿದ ಆತ್ಮವಿಶ್ವಾಸ ಕೆಕೆಆರ್ಗೆ ವರದಾನವಾಗಲಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ಕೆಕೆಆರ್ ಬಲಿಷ್ಠವಾಗಿದೆ ಎಂದು ಹೇಡನ್ ತಿಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಯಾರು ಚಾಂಪಿಯನ್ ಆಗಬಹುದು ಎಂದು ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
𝗧𝗵𝗲 𝗙𝗶𝗻𝗮𝗹 𝗖𝗮𝗹𝗹 🔥
The clock is ticking towards history in the making 🥳⏳
Who will emerge victorious in the summit clash – 💜 or 🧡
⏰ 7:30 PM IST
💻 https://t.co/4n69KTTxCB
📱 Official IPL App #TATAIPL | #KKRvSRH | #Final | #TheFinalCall pic.twitter.com/IblEEugyR6— IndianPremierLeague (@IPL) May 26, 2024