Friday, September 20, 2024

ರಾಜ್ಯದಲ್ಲಿ ಇಂದಿನಿಂದ ಮಳೆಯ ಪ್ರಮಾಣ ಇಳಿಕೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ್ಯಂತ ಹಲವು ಪ್ರದೇಶಗಳಲ್ಲಿ ಮಂಗಳವಾರವೂ ಕೂಡ ಉತ್ತಮ ಮಳೆಯಾಗಿದ್ದು ಇಂದಿನಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಉತ್ತರ ಒಳನಾಡಿಗೆ ಯಾವುದೇ ಅಲರ್ಟ್ ಇಲ್ಲ. ದಕ್ಷಿಣ ಒಳನಾಡಿನ ಕೊಡುಗು ಜಿಲ್ಲೆಗೆ ಆರೆಂಜ್ ಅಲರ್ಟ್ ಹಾಗೂ ಕರಾವಳಿ ಜಿಲ್ಲೆಗಳಿಗೆ ಮೂರು ದಿನ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉಳಿದಂತೆ ಇತರೆ ಜಿಲ್ಲೆಗಳಲ್ಲಿ ಕೆಲವೆಡೆ ಮಾತ್ರ ಸಾಧಾರಣ ಮಳೆಯಾಗುವ ಸಂಭವವಿದೆ.

ಮಂಗಳವಾರವೂ ಕೂಡ ರಾಜ್ಯಾದ್ಯಂತ ಬಾರಿ ಮಳೆಯಾಗಿದ್ದು ನೊಣಬೂರು, ಶಿವಮೊಗ್ಗ: 86.5 ಮಿ.ಮೀ, ಉತ್ತರ ಕನ್ನಡ ಜಿಲ್ಲೆಯ ಬೆಂಗ್ರೆ: 81.5ಮಿ.ಮೀ., ಹೆಬೆಲ್: 80ಮಿ.ಮೀ. & ಜಾಲಿ: 74ಮಿ.ಮೀ., ನಾಗವಾರ, ರಾಮನಗರ: 74ಮಿ.ಮೀ ನಷ್ಟು ಮಳೆಯಾಗಿದ್ದು ಈ ಜಿಲ್ಲೆಗಲ್ಲಿ ಗರಿಷ್ಟ ಮಟ್ಟದ ಮಳೆ ದಾಖಲಾಗಿದೆ.

ಇನ್ನು, ಕಳೆದ ಎರಡು ಮೂರು ದಿನಗಳಿಂದ ಸುರಿದ ಮಳೆಗೆ ಮಡಿಕೇರಿಯ ಕುಶಾಲನಗರದ ಕೂಡ್ಲೂರಿನ ಕೆ.ಕೆ.ನಿಂಗಪ್ಪ ಬಡಾವಣೆಯಲ್ಲಿ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿದೆ. ಕುಶಾಲನಗರ ಉರ್ದು ಶಾಲಾ ಶಿಕ್ಷಕಿಯಾಗಿರುವ ಶಾಂತಲಾ ಎಂಬುವರಿಗೆ ಸೇರಿದ ಮನೆಯ ಬೆಡ್ ರೂಂ, ಅಡುಗೆ ಕೋಣೆ, ಡೈನಿಂಗ್ ರೂಂ ಗೋಡೆ ಹಾನಿಯಾಗಿದೆ. ತಡೆಗೋಡೆ ಕುಸಿದು ಮನೆಗೆ ಬಿದ್ದ ಹಿನ್ನಲೆ ಅಂದಾಜು 15 ಲಕ್ಷ ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಮಾಲೀಕರು ಒತ್ತಾಯ ಮಾಡಿದ್ದಾರೆ.

RELATED ARTICLES

Related Articles

TRENDING ARTICLES