Thursday, September 19, 2024

ಇರಾನ್​​ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ: ನೂತನ​ ಅಧ್ಯಕ್ಷರಾಗಿ ಮೊಹಮ್ಮದ್ ಮೊಖ್ಬರ್ ಆಯ್ಕೆ!

ತೆಹ್ರಾನ್​: ಹೆಲಿಕಾಪ್ಟ್​ರ್ ಅಪಘಾತದಲ್ಲಿ ಇರಾನ್​ ಅಧ್ಯಕ್ಷ ಇಬ್ರಾಹಿಂ ರೈಸಿ  ಸಜೀವ ದಹನವಾಗಿದ್ದು ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸುತ್ತಿದ್ದ ವಿದೇಶಾಂಗ ಸಚಿವ ಸೇರಿದಂತೆ ಹೆಲಿಕಾಪ್ಟರ್​ನಲ್ಲಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ. ಈ ಘಟನೆ ಬೆನ್ನಲ್ಲೇ ಇರಾನ್​ನ ನೂತನ ಅಧ್ಯಕ್ಷರಾಗಿ ಇರಾನ್​ ಆಡಳಿತ ಚುಕ್ಕಾಣಿಯನ್ನು ಉಪಾಧ್ಯಕ್ಷ ಮೊಹಮ್ಮದ್ ಮೋಖ್ಬರ್​ ಅವರು ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಹೆಲಿಕಾಪ್ಟರ್​ ಪತನ: ಇರಾನ್​ ಅಧ್ಯಕ್ಷ ಇಬ್ರಾಹಿಂ​ ರೈಸಿ ದಾರುಣ ಸಾವು

ಇಸ್ಲಾಮಿಕ್​ ರಿಪಬ್ಲಿಕ್ ಆಫ್​ ಇರಾನ್​​ ಸಂವಿಧಾನದ ಪ್ರಕಾರ ಆರ್ಟಿಕಲ್​  130 ಮತ್ತು 131ರ ಅನ್ವಯ ಇರಾನ್​ ಅಧ್ಯಕ್ಷರ ರಾಜೀನಾಮೆ, ಅನುಪಸ್ಥಿತಿ, ಖಾಯಿಲೆ ಪೀಡಿತ ಹಾಗು ಸಾವಿಗೀಡಾದರೇ ಇರಾನ್​ನ ಉಪಾಧ್ಯಕ್ಷರೇ ಮುಂದಿನ ಅಧ್ಯಕ್ಷರಾಗಿ ಆಡಳಿತ ಚುಕ್ಕಾಣಿ ವಹಿಸಿಕೊಳ್ಳಬೇಕು. ಮುಂದಿನ ಅಧ್ಯಕ್ಷರ ಆಯ್ಕೆಯ ವರೆಗೂ ಉಪಾಧ್ಯಕ್ಷರೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಇದರನ್ವಯ ಇರಾನ್​ ನ ನೂತನ ಅಧ್ಯಕ್ಷರಾಗಿ ಮೊಹಮ್ಮದ್​ ಮೋಖ್ಬರ್ ಅವರು ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಹೆಲಿಕಾಪ್ಟರ್​ ಪತನ: ಇರಾನ್​ ಅಧ್ಯಕ್ಷ ಇಬ್ರಾಹಿಂ​ ರೈಸಿ ದಾರುಣ ಸಾವು

50 ದಿನಗಳಲ್ಲಿ ನೂತನ ಅಧ್ಯಕ್ಷರ ಆಯ್ಕೆ:

ಮೊಹಮ್ಮದ್ ಮೊಖ್ಬರ್, ಪಾರ್ಲಿಮೆಂಟರಿ ಸ್ಪೀಕರ್ ಮೊಹಮ್ಮದ್ ಬಾಕರ್ ಖಲಿಬಾಫ್ ಮತ್ತು ನ್ಯಾಯಾಂಗ ಮುಖ್ಯಸ್ಥ ಘೋಲ್ಲಾಮ್‌ಹೊಸ್ಸೇನ್ ಮೊಹ್ಸೇನಿ ಎಝೆಯ್ ಅವರನ್ನು ಒಳಗೊಂಡಿರುವ ಮಂಡಳಿಯು 50 ದಿನಗಳಲ್ಲಿ ಹೊಸ ಅಧ್ಯಕ್ಷೀಯ ಚುನಾವಣೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಮೊಹಮ್ಮದ್ ಮೊಖ್ಬರ್ ಅವರೇ ಈ ಸ್ಥಾನದಲ್ಲಿ ಮುಂದುವರಿಯಬಹುದು ಎಂದು ಎಲ್ಲ ನಾಯಕರ ವಿಶ್ವಾಸ ಹಾಗೂ ಬೆಂಬಲವನ್ನು ಪಡೆದರೆ ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಹೇಳಲಾಗಿದೆ.

ಮೊಹಮ್ಮದ್​ ಮುಖ್ಬರ್​ ಪರಿಚಯ:

ಮೊಹಮ್ಮದ್ ಮೊಖ್ಬರ್, ಸೆಪ್ಟೆಂಬರ್ 1, 1955 ರಂದು ಜನಿಸಿದರು. ಇರಾನ್‌ನ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದಾರೆ. 2021ರಲ್ಲಿ ಇರಾನ್​​ ಮೊದಲ ಉಪಾಧ್ಯಕ್ಷರಾಗಿ ನೇಮಕಗೊಂಡರು. ಇದು ಇರಾನ್​​ ಇತಿಹಾಸಲ್ಲೇ ಮೊದಲು. 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ನಿರ್ವಹಿಸಲು ರಚಿಸಲಾದ ಸೆಟಾಡ್‌ನಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಇದರ ಜತೆಗೆ ಅವರ ಮೇಲೆ ಕೆಲವೊಂದು ಅರೋಪ ಹಾಗೂ ವಿವಾದಗಳು ಕೂಡ ಇತ್ತು. 2010ರಲ್ಲಿ, ಯುರೋಪಿಯನ್ ಯೂನಿಯನ್ ಅವರನ್ನು ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ನಿರ್ಬಂಧನೆಯಲ್ಲಿಟ್ಟಿತ್ತು. ಎರಡು ವರ್ಷಗಳ ನಂತರ ಈ ಪಟ್ಟಿಯಿಂದ ಅವರನ್ನು ತೆಗೆದು ಹಾಕಲಾಗಿತ್ತು.

ಇನ್ನು ಉಪಾಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರವು ಕೂಡ ಅವರ ಮೇಲೆ ಅನೇಕ ಆರೋಪಗಳು ಇತ್ತು. ಅವರು ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕೂಡ ಹೌದು ಎಂದು ಹೇಳಲಾಗಿದೆ. ಇದೀಗ ಆರೋಪದ ನಡುವೆ ಅವರು ಇರಾನ್​​​ ಅಧ್ಯಕ್ಷರಾಗಿ ಮುಂದುವರಿಯುವುದು ಸವಾಲಿನ ಪ್ರಶ್ನೆಯಾಗಿದೆ.

RELATED ARTICLES

Related Articles

TRENDING ARTICLES